ಗುಲ್ಬರ್ಗಾ

ಜ್ಞಾನದೀವಿಗೆ ಹಚ್ಚಿದ ರಾಂಪುರೆ ಕೊಡುಗೆ ಅಪಾರ: ಬಡಗಾ

Published On :

ಸುರಪುರ: ಕಾರ್ಗತ್ತಲಿನ ನಾಡಾಗಿದ್ದ ಹೈ-ಕ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಈ ಭಾಗದಲ್ಲಿ ಜ್ಞಾನದ ದೀವಿಗೆ ಹಚ್ಚಿದ ದಿ. ಮಹಾದೇವಪ್ಪ ರಾಂಪುರೆಯವರು  ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕಾಲೇಜಿನ ಪ್ರಾಚಾರ್ಯ ಬಿ.ಎಸ್. ಬಡಗಾ ಹೇಳಿದರು.
  ಇಲ್ಲಿನ ಪ್ರಭು ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಹೈ-ಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ದಿ. ಮಹಾದೇವಪ್ಪ ರಾಂಪುರೆಯವರ ಪುಣ್ಯತಿಥಿ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಂಪುರೆಯವರು ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರದವರು. ಆದರೂ ಕರ್ನಾಟಕದ ಮೇಲೆ ಅದರಲ್ಲೂ ಕನ್ನಡ ಭಾಷೆಯ ಮೇಲೆ ಅತ್ಯಂತ ಗೌರವ ಹೊಂದಿದ್ದರು. ಅವರು ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕದಿದ್ದರೆ ಈ ಭಾಗದ ಅಭಿವೃದ್ಧಿ ಇನ್ನೂ ನಿಕೃಷ್ಟವಾಗಿರುತ್ತಿತ್ತು ಎಂದರು.
  ಡಾ. ಬಿ.ಜಿ. ಭಾವಿ, ಡಾ. ಸಿದ್ದಪ್ಪ, ರೋಹಿಣಿಕುಮಾರ ಹಿಳ್ಳಿ, ವೇಣುಗೋಪಾಲ ಜೇವರ್ಗಿ, ವಿಠ್ಠಲ ಬಿರಾದಾರ, ವಸಂತಕುಮಾರ, ಎನ್.ಎಸ್. ಪಾಟೀಲ, ಮಹ್ಮದ್ ವಾರೀಸ್ ಕುಂಡಾಲೆ, ಎಂ.ವಿಶ್ವನಾಥ, ಮಹೇಶ ಗಂವ್ಹಾರ, ವಿಜಯ ವೀರಣ್ಣ, ಯಲ್ಲಪ್ಪ, ಶಿವು ಕೊಳ್ಳಿ, ಶರಣಪ್ಪ ಶಿರವಾಳ ಇದ್ದರು. ಬಿ.ಒ. ಭೂಮ್ಮಣ್ಣ ಸ್ವಾಗತಿಸಿ ಧರ್ಮರಾಜ ಪಿಳಿಬಂಟ ನಿರೂಪಿಸಿ ಸುರೇಶ ಮಾಮಡಿ ವಂದಿಸಿದರು.


ದಿ. ಮಹಾದೇವಪ್ಪ ರಾಂಪುರೆ ಸ್ಮರಣೆ
ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಹೈಕಶಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಲಿಂ. ಮಹಾದೇವಪ್ಪ ರಾಂಪುರೆ ಅವರ 41ನೇ ಪುಣ್ಯಸ್ಮರಣೆಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಬಿ. ಮಲ್ಲಿಕಾರ್ಜುನ, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಎಸ್.ಎನ್.ಪಾಟೀಲ, ಎಂ.ಆರ್. ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ ದಿಲೀಪ್ ರಾಂಪುರೆ, ಪಿಡಿಯಾಡ್ರಿಕ್ಸ್ ಸರ್ಜನ್ ಡಾ ಎಸ್.ಆರ್. ಹರವಾಳ, ಅಪಾರ ಸಂಖ್ಯೆಯಲ್ಲಿ ನೆರೆದ ಬಸವೇಶ್ವರ ಆಸ್ಪತ್ರೆಯ ಸಿಬ್ಬಂದಿ ಶಿಕ್ಷಣ ಶಿಲ್ಪಿ ಮಹಾದೇವಪ್ಪ ರಾಂಪುರೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.