ಜಾತ್ರೆ ಜಾಗೃತಿಯ ಯಾತ್ರೆಯಾಗಲಿ: ನಾಲವಾರಶ್ರೀ
ಗುಲ್ಬರ್ಗ/ಶಹಾಬಾದ್: ಕೋರಿಸಿದ್ದೇಶ್ವರರ ಜಾತ್ರೆಯಲ್ಲಿ ಮಧ್ಯರಾತ್ರಿ ನಡೆಯುವ ತನಾರತಿ, ಧರ್ಮಸಭೆಯಲ್ಲಿ ಮನುಷ್ಯನಿಗೆ ಬೇಕಾಗುವ ಸಂಸ್ಕಾರ ಸಿಗುತ್ತದೆ. ಸಂಸ್ಕಾರ ಸಿಕ್ಕ ಮನುಷ್ಯ ಕೆಟ್ಟ ವಿಚಾರದೆಡೆಗೆ ಹೋಗುವುದಿಲ್ಲ. ಜಾತ್ರೆ ಕೇವಲ ಸಾಂಕೇತಿಕವಾಗದೆ, ಜಾಗೃತಿ ಮೂಡಿಸುವ ಯಾತ್ರೆ ಆಗಬೇಕು ಎಂದು ನಾಲವಾರದ ಸಿದ್ದತೋಟೇಂದ್ರ ಶಿವಾಚಾರ್ಯರು ಹೇಳಿದರು.
ಬೆಳಕಾಗಬೇಕು: ಕೋರಿ ಸಿದ್ದೇಶ್ವರರ ಜಾತ್ರಾ ಮಹೋತ್ಸವದ ರಥೋತ್ಸವದ ನಂತರ ನಡೆದ ಸಮಾರೋಪದ ಸಾನಿಧ್ಯ ವಹಿಸಿ ಮಾತನಾಡಿ, ವ್ಯಕ್ತಿ ಸತ್ತ ಮೇಲೆ ಬೆಳಕಾಗಬೇಕು. ಕೋರಿಸಿದ್ದೇಶ್ವರರು ಲಿಂಗೈಕ್ಯರಾದ ಮೇಲೆ ಭಕ್ತರ ಬಾಳಿನಲ್ಲಿ ಬೆಳಕಾಗಿದ್ದರು. ನಾಲವಾರದ ಮಠ ಕೇವಲ ಮಠವಾಗದೆ ತನಾರತಿಯಂಥ ಬೆಳಕಿನ ಕಾರ್ಯಕ್ರಮದಿಂದ ಇದು ಬೆಳಕಿನ ಪರಂಪರೆಯಾಗಿದೆ, ಜಾತ್ರೆಯಲ್ಲಿ ಬೆಂಡುಬತ್ತಾಸಿನೊಂದಿಗೆ ಅನುಭಾವದ ಮಾತುಗಳನ್ನು ತೆಗೆದುಕೊಂಡು ಹೋಗಬೇಕೆಂದು ಹೇಳಿದರು.
ಜೈ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ, ನಾಲವಾರ ಮಠದ ಭಕ್ತರು ಮಧ್ಯರಾತ್ರಿ ಎಂಬ ಭಾವನೆ ಇಲ್ಲದೆ, ಸಾವಿರಾರು ಸಂಖ್ಯೆಯಲ್ಲಿ ಸೇರಿರುವುದು ಭಕ್ತಿಯ ಪರಕಾಷ್ಠೆಯಾಗಿದೆ. ಭಕ್ತರಿಗೆ ಇಲ್ಲಿ ಮನಶಾಂತಿ ಸಿಗುತ್ತದೆ ಎಂದರು.
ಕರವೇ ರಾಜ್ಯ ಕಾರ್ಯದರ್ಶಿ ಬಸವರಾಜ ಪಟಕೋಟಿ, ಉದನೂರ ಮಲ್ಲಿಕಾರ್ಜುನ ಸ್ವಾಮಿಗಳು, ಕರಡಕಲ್‌ನ ಶಾಂತ ರುದ್ರಮುನಿ ಸ್ವಾಮಿ, ಯಡ್ರಾಮಿಯ ರುದ್ರಮುನಿ ಶಿವಾಚಾರ್ಯ ಮಾತನಾಡಿದರು.
ದಿಲೀಪ್ ಪಾಟೀಲ, ಸಿದ್ದು ಪಾಟೀಲ, ಯಾದಗಿರಿಯ ಶಂಕರಪ್ಪ, ಜೆಡಿಎಸ್ ಮುಖಂಡ ಅಶೋಕ ಸಾಹುಕಾರ ಗೋಗಿ, ಡಾ.ಅಜಯ ಸಿಂಗ್, ಡಾ. ಶರಣಬಸಪ್ಪ ಕಾಮರೆಡ್ಡಿ, ಬಸವರಾಜ ಭೀಮನಳ್ಳಿ, ಮಾಜಿ ಶಾಸಕ ಚನ್ನಾರೆಡ್ಡಿ ತುನ್ನೂರ, ಕಾಶೀನಾಥ ಶಾಸ್ತ್ರಿ ಉಪಸ್ಥಿತರಿದ್ದರು.
ಚಾಲನೆ: ಕರವೇ ರಾಜ್ಯ ಕಾರ್ಯದರ್ಶಿ ಬಸವರಾಜ ಪಡಕೋಟೆಯವರ ಜೀವನ ಹೋರಾಟದ ಪಡಕೋಟೆ ನಡೆದು ಬಂದ ದಾರಿ ಸಾಕ್ಷ ಚಿತ್ರಕ್ಕೆ ಸಿದ್ದತೋಟೇಂದ್ರ ಶ್ರೀಗಳು ಚಾಲನೆ ನೀಡಿದರು. ಮಂಡ್ಯ ಜಿಲ್ಲೆಯ ಹುರಗಲ್‌ವಾಡಿಯ ಕಲಾ ತಂಡದಿಂದ ಜನಪದ ಹಾಡುಗಳು, ಕಿರುತೆರೆಯ ಕಲಾವಿದರಾದ ಎಮ್.ಡಿ. ಅಲಿ, ಮಿಮಿಕ್ರಿ ಗೋಪಿಯವರಿಂದ ಹಾಸ್ಯ ಕಾರ್ಯಕ್ರಮ, ಕಾಶೀನಾಥ, ಶಂಕರ ಗವಾಯಿ ಮಂದೇವಾಲ್, ಶರಣಯ್ಯ ಸ್ವಾಮಿ ಕೊಮಚೂರ, ನಾರಾಯಣ, ರಾಜಶೇಖರ ಗೆಜ್ಜಿಯವರಿಂದ ಸಂಗೀತ, ಚಂದ್ರಶೇಕರ ಗೋಗಿಯವರಿಂದ ಕೊಳಲು ವಾದನ ನಡೆಯಿತು.
ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿ, ಸಿದ್ದರಾಜ ಕರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕ, ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಮಠದ ಭಕ್ತರಾದ ಗೋಪಾಲ ರಾಠೋಡ, ಬಸವರಾಜ ಮುಡುಬೂಳ ಮತ್ತಿತರ ಭಕ್ತರನ್ನು ಸನ್ಮಾನಿಸಲಾಯಿತು. ಮಹಾದೇವ ಗವ್ಹಾರ ಇದ್ದರು. ಮದ್ದು ಸುಡುವ ಕಾರ್ಯಕ್ರಮ ಕರವೇ ರಾಜ್ಯ ಕಾರ್ಯದರ್ಶಿ ಬಸವರಾಜ ಪಡಕೋಟಿಯವರಿಂದ 3 ಗಂಟೆಗೂ ಹೆಚ್ಚು ಕಾಲ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

