ನೀರಿಗಾಗಿ ಎಸ್ಯುಸಿಐ ಪ್ರತಿಭಟನೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ನ ಭೀಮಶಪ್ಪಾ ನಗರ ಬಡಾವಣೆಗೆ ಮೂಲ ಸೌಲಭ್ಯಗಳಾದ ಕುಡಿವ ನೀರು, ಶೌಚಾಲಯ ನಿರ್ಮಿಸಲು ಆಗ್ರಹಿಸಿ ಸೋಷಲಿಸ್ಟ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ) ಪಕ್ಷದ ಶಹಾಬಾದ್ ಸ್ಥಳೀಯ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಗರಸಭೆ ಕಾರ್ಯಾಲಯದ ಎದುರುಗಡೆ ಪ್ರತಿಭಟನೆ ನಡೆಸಲಾಯಿತು.
ಶುದ್ಧ ಕುಡಿವ ನೀರು ಮಹಿಳಾ ಶೌಚಾಲಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ನಗರಸಭೆ ಕಚೇರಿಗೆ ಆಗಮಿಸಿದರು.
ಎಸ್ಯುಸಿಐ ರಾಘವೇಂದ್ರ ಎಮ್.ಜಿ. ಮಾತನಾಡಿ, ನಗರವು ಬೆಳೆಯುತ್ತಿದ್ದಂತೆ ಕನಿಷ್ಠ ನಾಗರಿಕ ಸೌಲಭ್ಯ ಕಲ್ಪಿಸುವಲ್ಲಿ ನಗರಸಭೆ, ಜನ ಪ್ರತಿನಿಧಿಗಳು ವಿಫಲರಾಗಿದ್ದಾರೆಂದು ಆರೋಪಿಸಿ, ಈ ಬಗ್ಗೆ ಜನ ಎಚ್ಚೆತ್ತುಕೊಳ್ಳುವುದು ಅವಶ್ಯಕವಾಗಿದ್ದು ನಮ್ಮ ಹಕ್ಕುಗಳನ್ನು ಪಡೆಯುವುದು ಅವಶ್ಯಕ ಎಂದು ಹೇಳಿದರು.
ಅಶ್ವಾಸನೆ: ಪ್ರತಿಭಟನೆಗೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣ ಸಿಬ್ಬಂದಿಯನ್ನು ಕಳುಹಿಸಿ ತಾತ್ಕಾಲಿಕ ನೀರಿನ ಸಮಸ್ಯೆ ಸೇರಿದಂತೆ ಇತರ ಎಲ್ಲಾ ಸಮಸ್ಯೆಗಳಿಗೆ ಒಂದೆರಡು ದಿನಗಳಲ್ಲಿ ಈಡೇರಿಸುವುದಾಗಿ ಅಶ್ವಾಸನೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಪ್ರತಿಭಟನೆಯಲ್ಲಿ ಆರ್ಕೆಎಸ್ ನಾಯಕ ಗಣಪತರಾವ ಮಾನೆ, ಎಐಎಮ್ಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಗುಂಡಮ್ಮಾ ಎಸ್.ಮಡಿವಾಳ ಮಾತನಾಡಿದರು. ನಿಂಗಣ್ಣಾ ಜಂಬಗಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಶೆಟ್ಟಪ್ಪ, ರಾಜೇಂದ್ರ, ಭೀಮರಾವ ಎನ್.ಸಿ. ರಾಜು, ರಮೇಶ, ಯಲ್ಲಪ್ಪಾ, ಹುಸೇನ್, ಪ್ರಭು, ರಘು, ವಿರೇಶ,ಪ್ರಕಾಶ ಸೇರಿದಂತೆ ನೂರಾರು ನಾಗರಿಕರು ಭಾಗವಹಿಸಿದರು.
ಮಕ್ಕಳಲ್ಲಿ ಮಾನವೀಯತೆ ಬೆಳಸಿ: ವಿದ್ಯಾರ್ಥಿಗಳು ತಮ್ಮಲ್ಲಿ ನಕಾರಾತ್ಮ ವಿಷಯಗಳನ್ನು ಬಿಟ್ಟು, ಸಕಾರಾತ್ಮಕ ವಿಚಾರದೆಡೆಗೆ ಸಾಗಬೇಕು, ಶಿಕ್ಷಕರು ಮಕ್ಕಳಲ್ಲಿ ಮಾನವೀಯತೆ ಮೌಲ್ಯಗಳನ್ನು, ಜೀವನದಲ್ಲಿ ಆದರ್ಶಗಳನ್ನು ಬೆಳಸಬೇಕೆಂದು ಚಿತ್ತಾಪುರ ತಾಲೂಕ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಹೆಬ್ಬಾಳ ಹೇಳಿದರು.
ನಗರ ಸಹರಾ ಶಿಕ್ಷಣ ಸಂಸ್ಥೆಯ 2ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ನಿಖರ ಗುರಿ, ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.
ರಾಜ್ಯ ದಲಿತ ಸೈನ್ಯದ ಪ್ರಧಾನ ಕಾರ್ಯದರ್ಶಿ ಹಣಮಂತ ಯಳಸಂತಿ, ಸಂಸ್ಥೆ ಅಧ್ಯಕ್ಷ ಎಮ್.ಎ.ಸಿದ್ದಿಕಿ, ದಲಿತ ಸೇನೆ ಗುಲ್ಬರ್ಗದ ಅಧ್ಯಕ್ಷ ಶಿವುಕುಮಾರ ಮುಡ್ಡಿ, ಸಿಆರ್ಸಿ ಹೊನ್ನಪ್ಪ. ತಿಪ್ಪಣ್ಣಾ ಬೆಲ್ಲದ, ವಿಶ್ವನಾಥ ಬೆಲ್ಲದ, ಶಂಕರ ವಳಸಂಗ, ಅನೀಲಕುಮಾರ ವೇದಿಕೆಯಲ್ಲಿದ್ದರು.
ಆಶ್ವಿನಿ ಸಂಗಡಿಗರು ಪ್ರಾರ್ಥಿಸಿದರು, ಮಮತಾ ಔರಾದ್ ಸ್ವಾಗತಿಸಿದರು, ಸುರೇಖಾ ನಿರೂಪಿಸಿದರು, ಜಯಶ್ರೀ ವಂದಿಸಿದರು. ವಿಶ್ವನಾಥ ಹಡಪದ, ಶಿವಯೋಗಿ, ಸಂದೀಪಕುಮಾರ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

