ಗುಲ್ಬರ್ಗಾ

ಬಲಾತ್ಕಾರ ಪ್ರಕರಣ: ಆರೋಪಿ ಬಂಧನ

Published On :

ಚಿಂಚೋಳಿ: ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಜನರ ಮನದಲ್ಲಿ ಇನ್ನೂ ಹಸಿರಾಗಿರುವಾಗಲೇ ಪೋಲಕಪಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ದಲಿತ ವರ್ಗಕ್ಕೆ ಸೇರಿರುವ 14 ವರ್ಷದ ಬಾಲಕಿ ಮೇಲೆ ಅದೇ ಗ್ರಾಮದ ಕಾಮುಕ ಅಟೋ ಚಾಲಕ ಅತ್ಯಾಚಾರವೆಸಗಿದ್ದಾನೆ.
  ಪೋಲಕಪಳ್ಳಿ ಗ್ರಾಮದ ಶ್ರೀನಿವಾಸ ತಂದೆ ದೇಸಾಯಿ ವಡ್ಡರ್(21) ಎಂಬಾತ ಅದೇ ಗ್ರಾಮದಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ದಲಿತ ಸಮುದಾಯದ ರೇಖಾ(ಹೆಸರು ಬದಲಿಸಿದೆ)ಎಂಬವಳನ್ನು ಮನೆಯಿಂದ ಹೊರಗೆ ಕರೆದು ನಂಬಿಸಿ ಗ್ರಾಮ ಹೊರವಲಯದ ಸುಣ್ಣದ ಭಟ್ಟಿಯ ಹತ್ತಿರ ಸೋಮವಾರ ರಾತ್ರಿ 8ರ ಸುಮಾರಿಗೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆಂದು ಬಾಲಕಿ ದೂರು ನೀಡಿರುವುದಾಗಿ ಚಿಂಚೋಳಿ ಡಿವೈಎಸ್ಪಿ ಪರಶುರಾಮ ಕೋರವಾರ ತಿಳಿಸಿದ್ದಾರೆ.
  ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾಶಿನಾಥ ತಳಕೇರಿ ಚಿಂಚೋಳಿ ಡಿವೈಎಸ್ಪಿ ಪರಶುರಾಮ ಕೋರವಾರ ಪಿಎಸ್‌ಐ ಡಿ.ಬಿ. ಕಟ್ಟಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
  ಬಾಲಕಿ ನೀಡಿದ ದೂರಿನ ಮೇರೆಗೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿ ಶ್ರೀನಿವಾಸ ವಡ್ಡರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನಲ್ಲಿ ಈ ಹಿಂದೆ ಜಿಲವರ್ಷ ತಾಂಡ, ಗಡಿಲಿಂಗದಳ್ಳಿ ಗ್ರಾಮದಲ್ಲಿ ಅತ್ಯಾಚಾರ ನಡೆದು ಚಿಂಚೋಳಿಯೇ ಬೆಚ್ಚಿ ಬೀಳುವಂತೆ ಆಗಿದ್ದನ್ನು ಸ್ಮರಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.