ನೀರು ಶುದ್ಧೀಕರಣ ಘಟಕ ಸ್ಥಳಾಂತರಕ್ಕೆ ಜಯ ಕರ್ನಾಟಕ ಸಂಘಟನೆ ಆಗ್ರಹ
ಯಾದಗಿರಿ: ನಗರಕ್ಕೆ ಕುಡಿವ ನೀರು ಸರಬರಾಜು ಮಾಡುತ್ತಿರುವ ಶುದ್ಧೀಕರಣ ಘಟಕದ ಪ್ರದೇಶಕ್ಕೆ ನಗರದಿಂದ ಹರಿದು ಹೋಗುವ ಕೊಳಚೆ ಚರಂಡಿ ನೀರು ದೊಡ್ಡ ಹಳ್ಳದ ಮೂಲಕ ಸೇರುತ್ತಿದೆ. ಇದರಿಂದ ಕುಡಿವ ನೀರು ಕಲುಷಿತವಾಗುತ್ತಿದ್ದು, ಶುದ್ಧೀಕರಣ ಘಟಕವನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಸದರಿ ಶುದ್ಧೀಕರಣ ಘಟಕಕ್ಕೆ ಚರಂಡಿ ನೀರು ಹೋಗುತ್ತಿದ್ದು, ಇದೇ ರೀತಿ ಕುಡಿವ ನೀರಿನಲ್ಲಿ ರಸಾಯನಿಕ ಅಂಶ ಕೂಡ ಪತ್ತೆಯಾಗಿದೆ. ಇದರಿಂದ ಹಲವಾರು ರೋಗಗಳು ಹರಡುವ ಸಂಭವವಿದ್ದು, ಮತ್ತು ಮುಂಬರುವ ಬೇಸಿಗೆ ದಿನದಲ್ಲಿ ಸದಿಯಲ್ಲಿ ನೀರಿನ ಮಟ್ಟವು ಅತಿ ಕಡಿಮೆಯಾಗುವ ಮುನ್ಸೂಚನೆ ಇದ್ದು ಸದರಿ ನದಿಗೆ ಹೆಚ್ಚಿನ ಮಟ್ಟದಲ್ಲಿ ನಗರದ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ಸೇರ್ಪಡೆಯಾಗಿ ಕಲುಷಿತಗೊಂಡ ನೀರು ಸದರಿ ಸಾರ್ವಜನಿಕರಿಗೆ ಸರಬರಾಜು ಮಾಡಿದರೆ ಇದರಿಂದ ಹಲವಾರು ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ. ಅಲ್ಲದೆ, ಈ ಘಟಕವು ಹಳೆಯದಾಗಿದ್ದು, ಸ್ಥಳಾಂತರಿಸುವುದು ಅವಶ್ಯ. ಬೇಸಿಗೆಯಲ್ಲಿ ನೀರಿನ ಅಭಾವ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಜಯ ಕರ್ನಾಟಕ ಜಿಲ್ಲಾ ಸಮಿತಿ ಪ್ರ.ಕಾರ್ಯದರ್ಶಿ ಚಂದ್ರಶೇಖರ ದಾಸನ್ ತಿಳಿಸಿದರು. ಮಹಾದೇವಪ್ಪ ಗಣಪುರ, ಭೀಮಣ್ಣ ಹೊಸಮನಿ, ಚಿದಾನಂದ ಕಿಲ್ಲನಕೇರಾ, ಸಂಜು, ರಾಜು, ಸಾಗರ, ಭೀಮರಾಯ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

