ಮಾ.31ರ ವರೆಗೆ ಕಾಲುವೆಗೆ ನೀರು ಹರಿಸಿ: ಹಿರೇಮಠ
ಗುಲ್ಬರ್ಗ: ಯಾವುದೇ ಕಾರಣಕ್ಕೂ ಫೆ.20ರ ನಂತರ ನೀರು ಬಿಡುವುದು ನಿಲ್ಲಿಸಬಾರದು, ನೀರಾವರಿ ಬೆಳೆ ಉಳುಮೆಗೆ ಅನುಕೂಲವಾಗುವಂತೆ ಮಾ.31ರವರೆಗೂ ಕಾಲುವೆಯಿಂದ ನೀರನ್ನು ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶದ ಜೇವರ್ಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಯುಕೆಪಿ ಆಡಳಿತ ಮಂಡಳಿ ಫೆ.20ರವರೆಗಷ್ಟೆ ನೀರು ಹರಿಸಿ ಆ ಮೇಲೆ ಸ್ಥಗಿತಗೊಳಿಸುವ ಬಗ್ಗೆ ಕೈಗೊಂಡಿರುವ ನಿರ್ಣಯ ಖಂಡಿಸಿದ್ದಾರೆ. ರೈತರ ಹೊಲದಲ್ಲಿ ಬೆಳೆಗಳು ತುಂಬಿರುವಾಗ ಫೆ.20ರವರೆಗೆ ಮಾತ್ರ ನೀರು ಬಿಟ್ಟು, ನಂತರ ಸ್ಥಗಿತಗೊಳಿಸುವುದು ಅದೆಷ್ಟು ಸರಿ ಎಂದು ರೈತ ಹೋರಾಟಗಾರ ಕೇದಾರಲಿಂಗಯ್ಯ ಪ್ರಶ್ನಿಸಿದ್ದಾರೆ.
ಆಂದೋಲಾ ರೈತರು, ಜೇವರ್ಗಿಯ ಮುಖಂಡರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇದಾರಲಿಂಗಯ್ಯ, ಜೇವರ್ಗಿಯಲ್ಲಿ ಕಾಲುವೆ ನೀರನ್ನೇ ನಂಬಿ 60ರಿಂದ 65 ಸಾವಿರ ಎಕರೆಯಲ್ಲಿ ಸಣ್ಣ, ಅತಿ ಸಣ್ಣ ರೈತರು ಬಿತ್ತಿರುವ ಮೆಣಸಿನಕಾಯಿ, ಗೋಧಿ, ಕಡಲೆ, ಹತ್ತಿ, ಮುಸುಕಿನ ಜೋಳ, ಕಡಲೆ ಬೇಸಾಯ ಹಾಳಾಗುತ್ತದೆ. ಸಾವಿರಾರು ರೈತ ಕುಟುಂಬಗಳು ಬೀದಿಗೆ ಬೀಳುತ್ತವೆ ಎಂದು ಅವರು ನೀರು ನಿಲ್ಲಿಸಿದರೆ ಉಂಟಾಗುವ ಹಾನಿಯ ಬಗ್ಗೆ ಮಾಹಿತಿ ನೀಡಿದರು.
ನಾಳೆ ಸಾಂಕೇತಿಕ ಧರಣಿ: ಯುಕೆಪಿಗೆ ಹಾಗೂ ತಾಲೂಕು ಆಡಳಿತಕ್ಕೆ ಕಾಲುವೆ ನೀರಿಗಾಗಿ ರೈತರ ಗೋಳು ಹೇಳತೀರದು. ಇದನ್ನೆಲ್ಲ ಸರ್ಕಾರದ ಗಮನಕ್ಕೆ ತರಲು ಹಾಗೂ ಯುಕೆಪಿ ಭೀಮರಾಯನಗುಡಿ ಅಧಿಕಾರಿಗಳು ಕಾಲುವೆ ನೀರು ಹರಿಸುವ ಅವಧಿ ಮಾ.31ರವರೆಗೂ ವಿಸ್ತರಿಸಿ ರೈತರಿಗೆ ಬೆಂಬಲವಾಗಿರಬೇಕು ಎಂದು ಕೇದಾರಲಿಂಗಯ್ಯ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

