ಗುಲ್ಬರ್ಗಾ

ಶೀಘ್ರವೇ 1.30 ಲಕ್ಷ ಎಕರೆ ಜಮೀನಿಗೆ ನೀರಾವರಿ

Published On :

ಅಫಜಲ್ಪುರ: ಭೀಮಾ ಮತ್ತು ಅಮರ್ಜಾ ಎರಡು ನದಿಗಳಿಗೆ ನಿರ್ಮಾಣವಾಗಿರುವ ಸುಮಾರು 15 ಬ್ಯಾರೇಜುಗಳಿಂದ ತಾಲೂಕಿನಲ್ಲಿ ಮುಂಬರುವ ದಿನಗಳಲ್ಲಿ ಅಫ್ಜಲಪುರದಲ್ಲಿ 1.30 ಲಕ್ಷ ಎಕರೆ ಜಮೀನಿಗೆ ನೀರಾವರಿಯಾಗಲಿದ್ದು, ತಾಲೂಕಿನಲ್ಲಿ ಹಸಿರು ಕ್ರಾಂತಿ ಯುಗ ಆರಂಭವಾಗಲಿದೆ ಎಂದು ಶಾಸಕ ಮಾಲೀಕಯ್ಯಾ ಗುತ್ತೇದಾರ ಹೇಳಿದರು.
ಅವರು ತಾಲೂಕಿನ ಗೌಟಗಾಂವ ಗ್ರಾಮದ ಹತ್ತಿರ ಅಮರ್ಜಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ 120 ಕೋಟಿ ರುಪಾಯಿ ವೆಚ್ಚದ 100 ಹೆಕ್ಟೇರ್ ನೀರಾವರಿ ಸಾಮರ್ಥ್ಯದ ಬ್ಯಾರೇಜ್‌ನ್ನು ನಾಡಿಗೆ ಸಮರ್ಪಿಸಿ ಮಾತನಾಡಿದರು.
ಬಹುಕೋಟಿ ವೆಚ್ಚ: ಅಮರ್ಜಾ ನದಿಗೆ ಮತ್ತು ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಗೌಡಗಾಂವ್ ಮತ್ತು ಕೋಗುನೂರ ಗ್ರಾಮಗಳಿಗೆ 100 ಹೆಕ್ಟೇರ್ ನೀರಾವರಿಯಾಗುವ ಬಹುಕೋಟಿ ರೂಪಾಯಿ ವೆಚ್ಚದ ಬ್ಯಾರೇಜ್‌ನ್ನು ತಾಲೂಕಿಗೆ ಸಮರ್ಪಿಸಿದ್ದೇವೆ.
ಇದಕ್ಕೆ ಶೇ. 90ರಷ್ಟು ಅನುದಾನ ಕೇಂದ್ರ ಸರ್ಕಾರ ನೀಡಿದೆ. ಭೀಮಾ ಬ್ಯಾರೇಜ್ ನಿರ್ಮಾಣ ಸೇರಿದಂತೆ ತಾಲೂಕಿನಲ್ಲಿ ಹಸಿರುಕ್ರಾಂತಿ ಮಾಡುವ ಕನಸು ನನ್ನ ತಂದೆಯವರು ಹೊಂದಿದ್ದರು. ಅವರ ಆಸೆ ಈಡೇರಿಸಿದ್ದು ಭೀಮಾ, ಅಮರ್ಜಾ, ಬೋರಿ ನದಜಿಗಳಿಗೆ ನಿರ್ಮಾಣ ಮಾಡಿ ಹಸಿರು ಕ್ರಾಂತಿ ಮಾಡಲಾಗಿದೆ. 148 ಕಿ.ಮಿ ನೀರು ನಿಲ್ಲಿಸಿದ್ದೇವೆ. 48 ಕಿಮಿ ಕಾಲುವೆಗೆ ನೀರು ಹರಿದಿದೆ. ಭೀಮಾ ನದಿಯ ಕೆಳಗಡೆ ಭಾಗದ ಘತ್ತರಗಾ, ದೇವಲಗಾಣಗಾಪುರ ಕಲ್ಲೂರ ಬ್ಯಾರೇಜ್‌ಗಳು ಭರ್ತಿಯಾಗಿದ್ದು, ತಾಲೂಕಿನಲ್ಲಿ(ಬರುವ) ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ ಎಂದು ಹೇಳಿದ್ದರು.
ಮುಖಂಡರಾದ ಅರವಿಂದ ಗುತ್ತೇದಾರ ಮಲ್ಲಿನಾಥ ಕುಂಬಾರ ಬಸವಣ್ಣಪ್ಪ ಪಾಟೀಲ ಅಂಕಲಗಿ ತಾ.ಪಂ. ಸದಸ್ಯೆ ಶಿವಪುತ್ರಪ್ಪ ಗೌಡಗಾಂವ ದೇವಿಂದ್ರ ಜಮಾದಾರ ಬಾಬುರಾವ ಮಾಲಿಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.