ಗುಲ್ಬರ್ಗಾ

ಮತದಾರರ ಪಟ್ಟಿಯಲ್ಲಿ ದೋಷ: ಅಭ್ಯರ್ಥಿಗಳಿಗೆ ಗೊಂದಲ

Published On :

ಚಿಂಚೋಳಿ: ಸ್ಥಳೀಯ ಪಟ್ಟಣ ಪಂಚಾಯತಿ 18 ವಾರ್ಡುಗಳಿಗೆ ಮಾ. 7ರಂದು ನಡೆಯುವ ಚುನಾವಣೆಗೆ ಮತದಾರರ ಪಟ್ಟಿಗಳು ತುಂಬಾ ದೋಷಪೂರಿತವಾಗಿದ್ದರಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಗೊಂದಲವನ್ನುಂಟು ಮಾಡಿದೆ.
  ಪಟ್ಟಣ ಪಂಚಾಯತಿ ವಾರ್ಡ್- 7ರಲ್ಲಿ ಒಟ್ಟು 720 ಮತದಾರರಿದ್ದು, ಇವುಗಳಲ್ಲಿ ಒಬ್ಬ ಮತದಾರನ ಹೆಸರುಗಳು ಎರಡು ಕಡೆ ಮುದ್ರಿತವಾಗಿವೆ ಮತ್ತು ಕ್ರಮ ಸಂಖ್ಯೆಗಳು ಸಹಾ ಕ್ರಮಬದ್ದವಾಗಿಲ್ಲ. 2012 ಮತದಾರರ ಪಟ್ಟಿಯಲ್ಲಿ ಒಂದು ಕ್ರಮ ಸಂಖ್ಯೆ ಇದ್ದರೆ ಅದೇ ವರ್ಷದ ಮತದಾರರ ಪಟ್ಟಿಯಲ್ಲಿ ಕ್ರಮಸಂಖ್ಯೆ ಬೇರೆಯಾಗಿದೆ. ಹೀಗಾಗಿ ಮತದಾರರು ಮತ್ತು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಯಾವ ಕ್ರಮ ಸಂಖ್ಯೆಯನ್ನು ಬಳಸಬೇಕೆಂಬುದು ಚಿಂತೆಗೀಡು ಮಾಡಿದೆ.
  ಸ್ಥಳೀಯ ಪಟ್ಟಣ ಪಂಚಾಯತ 18 ವಾರ್ಡುಗಳ ಮತದಾರರ ಪಟ್ಟಿಯನ್ನು ಸಿದ್ದಪಡಿಸುವಾಗ ಹಾಗೂ ವಾರ್ಡ್ ವಿಂಗಡಣೆ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿಗಳು ಸರಿಯಾದ ಮಾಹಿತಿಯಿಲ್ಲದೆ ತರಾತುರಿಯಲ್ಲಿ ಮತದಾರರ ಪಟ್ಟಿಯನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ.
  2007 ಮೀಸಲಾತಿಯಂತೆ ಚುನಾವಣೆ ನಡೆದರೆ, ಮತದಾರರ ಪಟ್ಟಿಯೂ ಸಹಾ ಯಥಾಸ್ಥಿತಿಯಲ್ಲಿಡಬೇಕಾಗಿತ್ತು. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಅನೇಕ ವಾರ್ಡುಗಳಲ್ಲಿ ಮತದಾರರ ಪಟ್ಟಿ ತುಂಬಾ ಗೊಂದಲಕ್ಕೀಡು ಮಾಡಿದೆ ಎಂಬುದು ಇಲ್ಲಿನ ಸಾರ್ವಜನಿಕರ ಆರೋಪವಾಗಿದೆ.
  ಕಳೆದ 2007 ರಲ್ಲಿ ಜರುಗಿದ ಚುನಾವಣೆಯಲ್ಲಿ ಪಪಂ ವಾರ್ಡ್- 7 ಹರಿಜನವಾಡ ಪರಿಶಿಷ್ಟ ಜಾತಿ ಮೀಸಲು ಮತಕ್ಷೇತ್ರಕ್ಕೆ ಮತದಾರರ ಪಟ್ಟಿ ಇಲ್ಲಿನ ಪರಿಶಿಷ್ಟ ಜಾತಿಯ ಎಡ ಮತ್ತು ಬಲ ಜನಾಂಗದವರು ಕೇವಲ ವಾರ್ಡ್ 7ಕ್ಕೆ ಮಾತ್ರ ಸೀಮಿತವಾಗಿದ್ದವು. ಈಗ ನಡೆಯುತ್ತಿರುವ ಚುನಾವಣೆಗೆ ಎಡ ಮತ್ತು ಬಲ ಪರಿಶಿಷ್ಟ ಜಾತಿ ವಾರ್ಡ್-6 ವಾರ್ಡ್- 8ರ ಮತದಾರರ ಪಟ್ಟಿಯಲ್ಲಿ ಪ್ರಕಟಗೊಂಡಿವೆ. ಹೀಗಾಗಿ ವಾರ್ಡ್ 7ರ ಮತದಾರರ ಪಟ್ಟಿ ದೋಷಪೂರಿತವಾಗಿದೆ.
  ಮತದಾರರ ಪಟ್ಟಿದೋಷಪೂರಿತವಾಗಿರುವ ಕುರಿತು ತಹಸೀಲ್ದಾರ್ ಜಗನ್ನಾಥರೆಡ್ಡಿ ಅವರನ್ನು ಸಂಪರ್ಕಿಸಿ ಮಾತನಾಡಿಸಿದಾಗ ಮತದಾರರ ಪಟ್ಟಿಯನ್ನು ಹೊಸದಾಗಿ ಪ್ರಕಟಿಸಲಾಗಿದೆ. ಯಾವುದೇ ಗೊಂದಲವಿಲ್ಲವೆಂದು ಉತ್ತರಿಸಿದರು. ಪಟ್ಟಣ ಪಂಚಾಯತಗೆ ನಾಮಪತ್ರ ಸಲ್ಲಿಸಲು ಫೆ.23 ಕೊನೆ ದಿನವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.