ಗುಲ್ಬರ್ಗಾ

ಕ್ರಿಕೆಟ್‌ನಲ್ಲಿ ನವೀನ್ ಬಿಲ್ಲವ ಸಾಧನೆ

Published On :

ಗುಲ್ಬರ್ಗ: ರಾಜಸ್ಥಾನದಲ್ಲಿ ನಡೆದ ಅಖಿಲ ಭಾರತ ರಾಜೀವ್ ಗಾಂಧಿ ಸ್ಮಾರಕ ಯುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ನವೀನ್ ಬಿಲ್ಲವ ಕರ್ನಾಟಕದ ಬೆಂಗಳೂರು ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಾವಳಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಒಟ್ಟು 4 ಪಂದ್ಯ ಆಡಿ ಮೂರು ಪಂದ್ಯದಲ್ಲಿ ಜಯಗಳಿಸಿದೆ. ಒಂದು ಪಂದ್ಯವನ್ನು ಸೋತರೂ ಅಂಕಗಳ ಆಧಾರದ ಮೇಲೆ ದಿಲ್ಲಿ ತಂಡದ ವಿರುದ್ಧ ಬೆಂಗಳೂರು ಬುಲ್ಸ್‌ನ್ನು ಉಪಾಂತ್ಯ ಪಂದ್ಯಕ್ಕೆ ಆಯ್ಕೆಯಾಯಿತು. ಈ ಪಂದ್ಯಾವಳಿಯಲ್ಲಿ ನವೀನ್ ಮೊದಲ ಪಂದ್ಯದಲ್ಲಿಯೇ ಹರ್ಯಾಣದ ವಿರುದ್ಧ 2 ವಿಕೆಟ್ ಹಾಗೂ ಎರಡನೇ ಪಂದ್ಯದಲ್ಲಿ ಚಂಡೀಗಡ ವಿರುದ್ಧ 4 ವಿಕೆಟ್ ಹಾಗೂ ಮೂರನೇ ಪಂದ್ಯದಲ್ಲಿ ದಿಲ್ಲಿ ವಿರುದ್ಧ ಅಜೇಯ 75 ರನ್ ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು. ಈ ಸಾಧನೆ ಮಾಡಿದ ನವೀನ್ ಅವರಿಗೆ ಬೆಂಗಳೂರು ಬುಲ್ಸ್ ಪರವಾಗಿ ಶುಭಾಶಯ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.