ಗುಲ್ಬರ್ಗಾ

ಸನ್ಮಾನ, ಸತ್ಕಾರಕ್ಕೆ ದಿ. ಶೆಟ್ಟರ್ ಪ್ರೇರಕ ಶಕ್ತಿ: ಪೂಜಾರ್

Published On :

ಸುರಪುರ: ನನ್ನ ಜೀವಮಾನದಲ್ಲಿ ಪಡೆಯುವ ಸನ್ಮಾನ, ಸತ್ಕಾರಗಳಿಗೆ ದಿ. ಬುದ್ಧಿವಂತ ಶೆಟ್ಟರ್ ಪ್ರೇರಕ ಶಕ್ತಿಯಾಗಿದ್ದಾರೆ. ನಾನು ಸಾಹಿತ್ಯಿಕವಾಗಿ ಬೆಳೆಯಲು ಮತ್ತು ಸಾಹಿತ್ಯದ ಗೀಳು ಮೈಗೂಡಿಸಿಕೊಳ್ಳಲು ಅವರ ಆತ್ಮೀಯ ಪ್ರೇರಣೆಯೇ ಕಾರಣ ಎಂದು ಗುವಿವಿಯ ಕನ್ನಡ ಪ್ರಾಧ್ಯಾಪಕ ಡಾ. ವಿ.ಜಿ. ಪೂಜಾರ್ ಹೇಳಿದರು.
  ಸಮೀಪದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಆವರಣದಲ್ಲಿ ದಿ. ಬುದ್ಧಿವಂತ ಶೆಟ್ಟರ್ ಮೂರ್ತಿ ಅನಾವರಣ ಹಾಗೂ ಸಾಹಿತ್ಯ ಸಮಾವೇಶದಲ್ಲಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
  ಬುದ್ಧಿವಂತ ಶೆಟ್ಟರ್ ಸಾಹಿತಿ ಅಲ್ಲದಿದ್ದರೂ ಸಾಹಿತ್ಯದ ಪ್ರೇಮಿಯಾಗಿದ್ದರು. ಕವಿಗೋಷ್ಠಿಗಳನ್ನು ಏರ್ಪಡಿಸಿ ಯುವ ಸಾಹಿತಿಗಳ ಬರವಣಿಗೆಯನ್ನು ಪ್ರೋತ್ಸಾಹ ನೀಡುತ್ತಿದ್ದರು. ಆದ್ದರಿಂದಲೇ ಈ ಭಾಗದಲ್ಲಿ ಸಾಕಷ್ಟು ಸಾಹಿತಿಗಳಾಗಲು ಸಾಧ್ಯವಾಯಿತು ಎಂದು ಶೆಟ್ಟರ್ ಗುಣಗಾನ ಮಾಡಿದರು.
  ಈ ಸಂದರ್ಭದಲ್ಲಿ ಶೆಟ್ಟರ್ ಪುತ್ಥಳಿಗೆ ವೈಯಕ್ತಿಕ ಧನಸಹಾಯ ನೀಡಿದ ಸಣ್ಣ ಕೈಗಾರಿಕಾ ಸಚಿವ ರಾಜುಗೌಡ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಗಿರೀಶ್ ಶಾಬಾದಿ ಮತ್ತು ಸಾಹಿತಿ ಶ್ರೀನಿವಾಸ ಜಾಲವಾದಿ ಮತ್ತು ಹಿರಿಯ ಸಂಶೋಧಕ ಸೀತಾರಾಮ ಜಹಗೀರದಾರ್ ಅವರನ್ನು ಕನ್ನಡ ಸಾಹಿತ್ಯ ಸಂಘದ ವತಿಯಿಂದ ಸನ್ಮಾನಿಸಲಾಯಿತು.
  ದೇವಪುರದ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು, ಸಂಘದ ಅಧ್ಯಕ್ಷ ಸುರೇಶ ಸಜ್ಜನ್, ಪುರಸಭೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ್, ಸಂಘದ ಕಾರ್ಯದರ್ಶಿ ಶಾಂತಪ್ಪ ಬೂದಿಹಾಳ್, ಚಂದ್ರಕಾಂತ ಕಡೇಚೂರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.