ಗುಲ್ಬರ್ಗಾ

ತೊಗರಿ ಬೆಂಬೆಲೆಗೆ ಆಗ್ರಹಿಸಿ ಪ್ರತಿಭಟನೆ

Published On :

ಗುಲ್ಬರ್ಗ: ಹೈ.ಕ. ಭಾಗದ ರೈತರ ಅನುಕೂಲಕ್ಕಾಗಿ ಪ್ರತಿ ಕ್ವಿಂಟಲ್ ತೊಗರಿಗೆ ಉತ್ತೇಜಕ 5 ಸಾವಿರ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ಬುಧವಾರ ಗುಲ್ಬರ್ಗಕ್ಕೆ ಆಗಮಿಸಿದ ಸಿಎಂ ಶೆಟ್ಟರ್ ಎದುರು ಪ್ರತಿಭಟನೆ ನಡೆಸಿದ 50 ಜನ ರೈತ ಮುಖಂಡರನ್ನು ಬಂಧಿಸಿದ ಪೊಲೀಸರು, ಹೋರಾಟ ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
ಉತ್ತೇಜಕ ಬೆಲೆಗಾಗಿ ವಿದೇಶಗಳಿಂದ ಆಮದಾಗುವ ತೊಗರಿಯ ಮೇಲೆ ಶೇ. 50 ರಷ್ಟು ತೆರಿಗೆ ವಿಧಿಸಬೇಕು, ಇಲ್ಲಿನ ತೊಗರಿ ಮಂಡಳಿಗೆ 100 ಕೋಟಿ ಅನುದಾನ ನೀಡಬೇಕು, ಪ್ರತಿ ರೈತರಿಂದ 25 ಕ್ವಿಂಟಲ್ ತೊಗರಿ ಖದೀರಿಸಬೇಕು, ಬೇಳೆ ಕಾಳು ಸಂಶೋಧನಾ ಕೇಂದ್ರ ಅಭಿವೃದ್ಧಿಗೆ ಒತ್ತಾಯಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಲು ಮುಂದಾದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ರೈತ ಮುಖಂಡರನ್ನು ಬಂಧಿಸಿದರು.
ಬಂಧನ, ಬಿಡುಗಡೆ: ರೈತ ಮುಖಂಡರಾದ ಮಾರುತಿ ಮಾನ್ಪಡೆ, ಕರಿಸಿದ್ದಪ್ಪಗೌಡ ಪಾಟೀಲ್ ಹರಸೂರ, ಬಸವರಾಜ ಇಂಗಿನ್, ಮೌಲಾ ಮುಲ್ಲಾ, ಗೌರಮ್ಮ ಪಾಟೀಲ್, ಶ್ರೀಶೈಲ್ ಪಾಟೀಲ್, ವಿನೋದ, ಶರಣಬಸಪ್ಪ ಮಮಶೆಟ್ಟಿ ಸೇರಿದಂತೆ 50 ಜನ ರೈತ ಮುಖಂಡರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಯಿತು.
ಇಂದು ಪ್ರತಿಭಟನೆ: ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡುವಾಗ ಹೋರಾಟ ನಿರತ ತೊಗರಿ ಬೆಳೆಗಾರರನ್ನು ಭೇಟಿ ಮಾಡದೆ ತೊಗರಿ ಬೆಳೆಗಾರರನ್ನು ಕಡೆಗಣಿಸಿದ್ದಾರೆ. ಸರ್ಕಾರದ ಮುಖ್ಯಮಂತ್ರಿಗಳ ಈ ಧೋರಣೆ ವಿರುದ್ಧ ಜ.24ರಂದು ಮಹಾಗಾಂವ, ಅಫಜಲ್ಪುರ, ಜೇವರ್ಗಿ, ಸೇಡಂ, ಚಿತ್ತಾಪುರ, ನಂದೂರ, ಗೊಬ್ಬೂರ(ಬಿ), ಮತ್ತಿಮಡು ಇತರ ಕಡೆಗಳಲ್ಲಿ ರಸ್ತೆ ತಡೆ ಚಳವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.