2 ದಿನಗಳ ಕಾಲ ತಜ್ಞ ವೈದ್ಯರಿಂದ ಸಾಮೂಹಿಕ ತಪಾಸಣೆ: ಅಜಯ್ ಸಿಂಗ್
28ರಿಂದ ಉಚಿತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ
ಗುಲ್ಬರ್ಗ: ಇಲ್ಲಿನ ಧರ್ಮಸಿಂಗ್ ಪ್ರತಿಷ್ಠಾನ ಜ.28, 29ರಂದು ಜೇವರ್ಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದೆ.
ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿರುವ ಈ ಆರೋಗ್ಯ ಶಿಬಿರಕ್ಕೆ ಕಳೆದ ತಿಂಗಳಿಂದ ಭರದ ಸಿದ್ಧತೆಗಳು ಸಾಗಿವೆ. ಜೇವರ್ಗಿ ಹಾಗೂ ಸುತ್ತಲಿನ 160 ಹಳ್ಳಿಗಳ ಸಾರ್ವಜನಿಕರ ಆರೋಗ್ಯ ಕಾಳಜಿ ದೃಷ್ಟಿಲ್ಲಿಟ್ಟುಕೊಂಡು ಈ ಮೇಳ ಸಂಘಟಿಸಲಾಗುತ್ತಿದೆ ಎಂದು ಧರಂ ಪುತ್ರ, ಪ್ರತಿಷ್ಠಾನದ ರೂವಾರಿ ಡಾ. ಅಜಯ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಯಾವುದೇ ಲಾಭದ ಉದ್ದೇಶವಿಲ್ಲ: ತಾವು ಖುದ್ದು ವೈದ್ಯರಾಗಿರುವುದರಿಂದ ಜನಾರೋಗ್ಯ ಕಾಳಜಿ ಇದೆ. ಇದರ ಜೊತೆಗೇ ಜೇವರ್ಗಿ ಜೊತೆಗೇ ತಂದೆಯವರು ಹಾಗೂ ತಾವು ಭಾವನಾತ್ಮಕವಾಗಿ ನಂಟು ಬೆಳೆಸಿಕೊಂಡಿದ್ದರಿಂದ ಹಾಗೂ ನೆಲೋಗಿ ತಮ್ಮ ತವರಾಗಿದ್ದಿರಂದ ಇಂತಹ ಜನಮುಖಿ ಕಾರ್ಯಗಳನ್ನು ಜೇವರ್ಗಿಯಲ್ಲಿ ಸಂಘಟಿಸಲಾಗುತ್ತಿದೆ. ಇಂತಹ ಸಮಾರಂಭಗಳನ್ನೇ ಹಿನ್ನೆಲೆಯಾಗಿಟ್ಟುಕೊಂಡು ರಾಜಕೀಯವಾಗಿಯಾಗಲಿ, ವೈಯಕ್ತಿಕವಾಗಿಯಾಗಲಿ ಯಾವುದೇ ರೀತಿಯ ಲಾಭದ ಲೆಕ್ಕ ಹಾಕುವವರು ತಾವಲ್ಲ ಎಂದು ಅವಕು ಸ್ಪಷ್ಟಪಡಿಸಿದರು.
ತಪಾಸಣೆ, ತಜ್ಞರ ಸಲಹೆ: ಬೆಂಗಳೂರಿನ ನಾರಾಯಣ ಹೃದಯಾಲಯ, ರಾಮಯ್ಯ ವೈದ್ಯ ವಿದ್ಯಾಲಯ- ಆಸ್ಪತ್ರೆ, ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆ ಸಹಯೋಗದಲ್ಲಿ ಧರ್ಮಸಿಂಗ್ ಪ್ರತಿಷ್ಠಾನ ಆರೋಗ್ಯ ಮೇಳವನ್ನು ಸಂಘಟಿಸುತ್ತಿದೆ. ಇವೆಲ್ಲ ಆಸ್ಪತ್ರೆಗಳಿಂದ 50ಕ್ಕೂ ಹೆಚ್ಚು ತಜ್ಞ ವೈದ್ಯರು, ಅವರ ತಂಡಗಳು 2 ದಿನಗಳ ಕಾಲ ಜೇವರ್ಗಿಯಲ್ಲಿ ತಂಗಲಿದ್ದು ಜನರ ಆರೋಗ್ಯ ತಪಾಸಣೆ ನಡೆಸಲಿವೆ.
ಇದೇ ಮೊದಲ ಬಾರಿಗೆ ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್ ಸೇರಿದಂತೆ ಹಲವು ನಮೂನೆಯ ಕ್ಯಾನ್ಸರ್ ರೋಗ ತಪಾಸಣೆ ಮಾಡಿ ಪ್ರಥಮ ಹಂತದಲ್ಲೇ ಚಿಕಿತ್ಸೆ ಕೊಡಿಸುವ ಕೆಲಸಕ್ಕೆ ಪ್ರತಿಷ್ಠಾನ ಮುಂದಾಗಿದೆ. ಸಕಲ ಸೌಕರ್ಯಗಳು ಶಿಬಿರದಲ್ಲಿ ಲಭ್ಯವಿರಲಿವೆ.
ಗದಗ- ಡಂಬಳ ತೋಂಟದ ಸಿದ್ದಲಿಂಗ ಸ್ವಾಮೀಜಿ ಸನ್ನಿಧಿಯಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ಡಾ. ಮಲಕರೆಡ್ಡಿ ಸೇರಿದಂತೆ ಗುಲ್ಬರ್ಗ, ಯಾದಗಿರಿ ಜನನಾಯಕರು ಭಾಗವಹಿಸುತ್ತಿದ್ದಾರೆ.
ಜೇವರ್ಗಿಯವರಾಗಿ ವೈದ್ಯ ರಂಗದಲ್ಲಿ ಸಾಧನೆ ಮಾಡಿರುವ ಡಾ. ಎಸ್.ಎಸ್. ಪಾಟೀಲ್, ಡಾ. ವಿಜಯಲಕ್ಷ್ಮೀ ದೇಶಮಾನೆ, ಡಾ. ಸಂಕರಗೌಡ ಆಂದೋಲಾ, ಡಾ. ಎಸ್.ಬಿ. ಪಾಟೀಲ್ ದುಮ್ಮದ್ರಿ, ಡಾ. ಎಸ್.ಆರ್. ಹರವಾಳ, ಡಾ. ಶಿವಾನಂದ ಪಾಟೀಲ್ ಗಂವ್ಹಾರ್, ಡಾ. ಕೆಜಿ ಬಿರಾದಾರ್, ಡಾ. ವೀರಣ್ಣ ವಾಲೀಕಾರ್, ಡಾ. ಎಸ್.ಎನ್. ಪಾಟೀಲ್ ಕಲ್ಲೂರ್, ಡಾ. ಮಲ್ಲಾರರಾವ ಮಲ್ಲೆ, ಡಾ. ಬಿಬಿ ಮಲ್ಹಾರ್, ಡಾ. ಎಸ್.ಎಸ್. ದೇವರಮನಿ, ಡಾ. ಸಿದ್ದು ಪಾಟೀಲ್ ಜೇರಟಗಿ, ಡಾ. ಬಸವರಾಜ ಗುಳಗಿ, ಡಾ. ಉಮೇಶ ಶರ್ಮ ಇವರಿಗೆ ಈ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಸತ್ಕರಿಸಲಾಗುತ್ತಿದೆ.
ಆ್ಯಂಬುಲನ್ಸ್ ಸೇವೆ: ಜೇವರ್ಗಿ, ಯಡ್ರಾಮಿ, ಬಿಳವಾರ ಹಾಗೂ ಮಂದೇವಾಲಗಳಲ್ಲಿ ಪ್ರತಿಷ್ಠಾನ 4 ಆ್ಯಂಬುಲನ್ಸ್ ಸೇವೆ ವ್ಯವಸ್ಥೆ ಮಾಡಿದ್ದು, ಕಳೆದ 5 ವರ್ಷಗಳಲ್ಲಿ 7 ಸಾವಿರ ಜನರಿಗೆ ಸೇವೆ ಲಭಿಸಿದೆ. ತುರ್ತು ಚಿಕಿತ್ಸೆ ಬಯಸುವ ಪ್ರಕರಣಗಳಲ್ಲಿ ಜೇವರ್ಗಿ ಜನರ ಮನ ಗೆದ್ದಿದೆ ಎಂದು ಡಾ. ಅಂಜಯ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

