ವೃತ್ತಿಶಿಕ್ಷಣ ಪಠ್ಯಕ್ರಮ ಕನ್ನಡೀಕರಿಸಿ
ಗುಲ್ಬರ್ಗ: ರಾಜ್ಯದಲ್ಲಿ ಕನ್ನಡ ಭಾಷಾಭಿಮಾನ ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ರಾಜ್ಯ ಸರ್ಕಾರ ಮೆಡಿಕಲ್ ಮತ್ತು ಎಂಜಿನಿಯರ್ ಕೋರ್ಸ್ಗಳ ಪಠ್ಯಕ್ರಮ ಕನ್ನಡಿಕರಿಸಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸಪ್ಪ ಅಪ್ಪ ಅಭಿಪ್ರಾಯಪಟ್ಟರು.
ಕನ್ನಡ ಸೇನೆ ಕರ್ನಾಟಕ ಈಶಾನ್ಯ ವಲಯ ಘಟಕ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಕನ್ನಡ ಜಾಗೃತಿ ಸಮಾವೇಶದಲ್ಲಿ ಸೇನೆ ವತಿಯಿಂದ ಕರ್ನಾಟಕ ವಿಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ವಲಸಿಗರಿಗೂ ಕನ್ನಡ ಕಲಿಸಿ: ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂದು ಇಂಗ್ಲಿಷ್ ಕಲಿಕೆ ಅನಿವಾರ್ಯ.
ಅದರಲ್ಲೂ ಮೆಡಿಕಲ್ ಮತ್ತು ಎಂಜಿನಿಯರ್ ಕೋರ್ಸ್ ಭಾಷೆ ಸಹ ಇಂಗ್ಲಿಷ್ ಆಗಿರುವುದರಿಂದ ಮುಂದಿನ ಭವಿಷ್ಯವನ್ನು ಗಮನಿಸಿ ಆರಂಭಿಕ ಶಿಕ್ಷಣ ಅನಿವಾರ್ಯವಾಗಿ ಇಂಗ್ಲಿಷ್ನಲ್ಲಿ ನೀಡಲಾಗುತ್ತಿದೆ.
ಒಂದು ವೇಳೆ ಸರ್ಕಾರವೇ ಮೆಡಿಕಲ್ ಮತ್ತು ಎಂಜಿನಿಯರ್ ಕೋರ್ಸ್ ಭಾಷೆಯನ್ನು ಕನ್ನಡೀಕರಿಸಿದರೆ ಜನತೆ ಸಹಜವಾಗಿ ಕನ್ನಡ ಭಾಷೆಗೆ ಹೆಚ್ಚಿನ ಒಲವು ತೋರುತ್ತಾರೆ ಎಂದರು.
ವಲಸೆ ಬರುವ ಜನತೆ ಕನ್ನಡ ಭಾಷೆ ಕಲಿಯುವಂತೆ ಕನ್ನಡಪರ ಸಂಘಟನೆಗಳು ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮಾತನಾಡಿ, ಹೈ-ಕ ಪ್ರದೇಶಾಭಿವೃದ್ಧಿಗೆ ಪೂರಕವಾಗಿರುವ ಸಂವಿಧಾನದ 371ನೇ(ಜೆ) ವಿಧಿ ಸಂಸತ್ತಿನಲ್ಲಿ ತಿದ್ದುಪಡಿಯಾಗಿ ರಾಷ್ಟ್ರಪತಿಯಿಂದಲೂ ಅಂಕಿತಗೊಂಡಿದ್ದು, ರಾಜ್ಯ ಸರ್ಕಾರ ಅದನ್ನು ಕಾನೂನು ರೂಪಕ್ಕೆ ತರಬೇಕಾಗಿದೆ ಎಂದರು.
ಸಮಾರಂಭದಲ್ಲಿ ಮಾಜಿ ಸಚಿವ ಎಸ್.ಕೆ. ಕಾಂತಾ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ವೇದಿಕೆ ಅಧ್ಯಕ್ಷ ಶಿವಶರಣಪ್ಪ ಖಣದಾಳ ಸೇರಿದಂತೆ ಇತರ ಗಣ್ಯರು ಇದ್ದರು.
ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸಪ್ಪ ಅಪ್ಪ, ನಾಲವಾರದ ತೋಟೇಂದ್ರ ಶಿವಾಚಾರ್ಯರಿಗೆ, ಎಂ.ಆರ್. ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಎಸ್.ಎಸ್. ಗುಬ್ಬಿ ಅವರಿಗೆ ಕರ್ನಾಟಕ ವಿಭೂಷಣ ಪ್ರಶಸ್ತಿ ನೀಡಲಾಯಿತು.
ಪತ್ರಕರ್ತ ಚಂದ್ರಕಾಂತ ಹುಣಸಗಿ, ಗಾಯತ್ರಿ ಬ್ರಾಹ್ಮಣ ಮಹಿಳಾ ಟ್ರಸ್ಟ್ ಅಧ್ಯಕ್ಷೆ ರಾಜಶ್ರೀ ದೇಶಮುಖ, ಸ್ನಾತಕೋತ್ತರ ಸಂಯೋಜಕ ಡಾ. ಪ್ರವೀಣ ಹೊನಗುಂಟಿಕರ್ ಅವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸನ್ಮಾನ: 371(ಜೆ) ತಿದ್ದುಪಡಿ ರೂವಾರಿಗಳಾದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಮಾಜಿ ಸಚಿವ ವೈಜನಾಥ ಪಾಟೀಲ್, ಮಾರುತಿರಾವ ಡಿ. ಮಾಲೆ, ಕೆ.ಆರ್. ಕುಮಾರ, ಉಮಾಕಾಂತ ನಿಗ್ಗುಡಗಿ, ಲಕ್ಷ್ಮಣ ದಸ್ತಿ, ಸಂಘಟನೆಗಳ ಮುಖಂಡರಾದ ಶರಣು ಗುದ್ದುಗೆ, ಅರುಣಕುಮಾರ ಪಾಟೀಲ್, ವೀರಣ್ಣ ಕೊರಳ್ಳಿ, ಕಲ್ಯಾಣರಾವ ಪಾಟೀಲ್, ಸುರೇಶ ಬಡಿಗೇರ, ಲಿಂಗರಾಜ ಸಿರಗಾಪುರ, ಯಶ್ವಂತ ಹತ್ತರಕಿ, ಎಂ.ಎಸ್. ಪಾಟೀಲ್ ನರಿಬೋಳ, ಅಮೃತ ಪಾಟೀಲ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖ ಮುಖಂಡರಿಗೆ ಸನ್ಮಾನಿಸಲಾಯಿತು.
ಶ್ಯಾಮ ನಾಟಿಕಾರ್, ಮಲ್ಲಿಕಾರ್ಜುನ ಭೂಸನೂರ ಮತ್ತು ಪ್ರಭುಲಿಂಗ ಬಾಳಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ನಾಗಲಿಂಗಯ್ಯ ಮಠಪತಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

