ಬಡ ರೋಗಿಗಳ ಬಾಳಿಗೆ ಬೆಳಕಾದ ಉಚಿತ ಆರೋಗ್ಯ ತಪಾಸಣೆ ಶಿಬಿರ
ಜೇವರ್ಗಿ: ಧರಂಸಿಂಗ್ ಫೌಂಡೇಶನ್ ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಆಯೋಸಿದ್ದ ಎರಡು ದಿನಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಬಡರೋಗಿಗಳಿಗೆ ಆಶಾಕಿರಣರಾಗಿ ಹೊರಹೊಮ್ಮಿತು.
ಕಳೆದ 2005ರಲ್ಲೂ ಪ್ರತಿಷ್ಠಾನವು ಬೃಹತ್ ಮಟ್ಟದ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿ ತಪಾಸಣೆಯ ನಂತರ ಕಾಯಲೆ ಗುಣಪಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ತಜ್ಞ ವೈದ್ಯರ ಮೂಲಕ ತನ್ನ ಸ್ವಂತ ವೆಚ್ಚದಲ್ಲಿ ಹತ್ತಾರು ಸಾವಿರ ಬಡರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಕೊಡಿಸಿತ್ತು.
ಆಸ್ಪತ್ರೆಯ ದುಬಾರಿ ವೆಚ್ಚ ಭರಿಸಲಾಗದೆ ಕಾಯಲೆ ಗುಣ ಪಡಿಸಿಕೊಳ್ಳುವುದು ಗಗನಕುಸುಮ ಎಂದು ಭಾವಿಸಿದ ಬಡರೋಗಿಗಳ ಬಾಳಿಗೆ ಬೆಳಕಾಗಿ ಫೌಂಡೇಶನ್ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಕಾರ್ಯನಿರ್ವಹಿಸಿದ್ದಾರೆ ಎಂಬ ಮಾತುಗಳು ಶಿಬಿರದಲ್ಲಿ ಕೇಳಿ ಬಂದವು.
ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ: ಮಂಗಳವಾರ ನಡೆದ ಶಿಬಿರದಲ್ಲಿ ವಿವಿಧ ಕಾಯಲೆಯಿಂದ ಬಳಲುತ್ತಿರುವ ಮಹಿಳಾ ರೋಗಿಗಳ ತಪಾಸಣೆಗೆ ತಜ್ಞ ವೈದ್ಯರಿಂದ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಬಡ ರೋಗಿಗಳಿಗೆ ಸಾರಿಗೆ ವೆಚ್ಚ ಸಮೇತ ಆಸ್ಪತ್ರೆಯ ಎಲ್ಲ ವೆಚ್ಚಗಳನ್ನು ತಾವು ಭರಿಸಿ ಬಡವರ ಕಾಯಿಲೆ ವಾಸಿ ಮಾಡುವ ಸಂಕಲ್ಪ ತಮ್ಮದಾಗಿದ್ದು ಎಂದು ಹೇಳಿಕೊಂಡ ಅವರು, ಈ ಭಾಗದ ವಿಶೇಷವಾಗಿ ಜೇವರ್ಗಿ ತಾಲೂಕಿನ ಜನತೆಯ ಅನುಕೂಲಕ್ಕಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಇರಾದೆ ತಮ್ಮದಾಗಿದ್ದು ಆ ನಿಟ್ಟಿನಲ್ಲಿ ಆಸ್ಪತ್ರೆ ನಿರ್ಮಿಸುವುದಾಗಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಧರ್ಮಸಿಂಗ್ ಫೌಂಡೇಷನ್ ಹಾಗೂ ಕ್ಯಾನ್ಸರ್ ಕೇರ್ ಯುನಿಟ್ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಮಟ್ಟದಲ್ಲಿ ತಪಾಸಣೆ ನಡೆಸಿ ಕ್ಯಾನ್ಸರ್ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಈಗಾಗಲೇ ಹತ್ತಾರು ಸಾವಿರ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಗಾಗಿ ಗುರುತಿಸಲಾಗಿದ್ದು, ಅವರನ್ನು ಬೆಂಗಳೂರು ಹಾಗೂ ಗುಲ್ಬರ್ಗದಲ್ಲಿ ತಮ್ಮ ಸ್ವಂತ ವೆಚ್ಚದಲ್ಲೇ ಶಸ್ತ್ರಚಿಕಿತ್ಸೆ ನೀಡುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

