ಗುಲ್ಬರ್ಗಾ

ಕನಿಷ್ಠ ಕೂಲಿಗೆ ಒತ್ತಾಯಿಸಿ ಪ್ರತಿಭಟನಾ ರ್ಯಾಲಿ

Published On :

ಗುಲ್ಬರ್ಗ: ಮಹಾನಗರ ನೀರು ಸರಬರಾಜು ಹಂಗಾಮಿ ದಿನಗೂಲಿ ನೌಕರರಿಗೆ ಸರ್ಕಾರದಿಂದ ಕನಿಷ್ಠ ಕೂಲಿ ನೀಡಬೇಕು ಎಂದು ಒತ್ತಾಯಿಸಿ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿತು.
ಕನಿಷ್ಠ ದಿನಗೂಲಿ ದರ ಜಾರಿಗೆ ತರುವುದು ಹಾಗೂ ಪ್ರತಿವರ್ಷ ಏ.1ರಿಂದ ಪರಿಷ್ಕೃತ ತುಟ್ಟಿಭತ್ಯೆ ನೀಡುವುದು ಕಾನೂನನ್ವಯ ಕಡ್ಡಾಯ. ಈ ಬಗ್ಗೆ ನಾವು ನೀರು ಸರಬರಾಜು ಕಾರ್ಮಿಕ ನೌಕರರು ಮೊದಲೇ ಕಾರ್ಯಪಾಲಕ ಅಭಿಯಂತರ ಗಮನಕ್ಕೆ ತಂದಾಗ್ಯೂ ಇದುವರೆಗೂ ಅಂತಹ ಕನಿಷ್ಠ ದಿನಗೂಲಿ ದರ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು.
ಮೈಸೂರಿನಲ್ಲಿ ಸಮಾನ ವೇತನಕ್ಕೆ ಸಮಾನ ವೇತನ ಶ್ರೇಣಿಗಳನ್ನು ನೀಡುತ್ತಿದ್ದು, ಇಲ್ಲಿಯೂ ಕನಿಷ್ಠ ಕೂಲಿಯ ಬದಲು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿ.ಎನ್. ಹಳಕಟ್ಟಿ, ವೆಂಟಕೇಶ ಬಕ್ಕಪ್ಪ, ಅಹ್ಮದ್ ಅಲಿ, ಬಸವರಾಜ ನಂದೂರ, ನಾರಾಯಣ ರಂಗದಾಳ, ರಾಜು ನಿಂಗಪ್ಪ, ನಾಗರ ಎಸ್.ರವಿದಾಸ, ರುಕ್ಕಪ್ಪ, ಶಿವರಾಜ್, ಭೀಮಾಶಂಕರ, ವಿನೋದ, ವೀರೇಶ, ಅಪ್ಪಾರಾವ, ಶಂಕರ, ಶಿವಕುಮಾರ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.