ಗುಲ್ಬರ್ಗಾ

ವಸತಿ ಯೋಜನೆಯಲ್ಲಿ ಅಕ್ರಮ, ಕ್ರಮಕ್ಕೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ  ಜು.4
ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಪಂ.ನಲ್ಲಿ ಅಂಬೇಡ್ಕರ್, ಬಸವ ಮತ್ತು ಇಂದಿರಾ ಆವಾಸ್ ಯೋಜನೆಯಡಿ ಮಂಜೂರಾದ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡದೆ ಪ್ರಭಾವಿ ವ್ಯಕ್ತಿಗಳಿಗೆ, ಪಂಚಾಯ್ತಿ ಸದಸ್ಯರ ಸಂಬಂಧಿಕರಿಗೆ ವಿತರಿಸಿದ್ದಾರೆ. ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಚಟ್ನಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
  ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಡಾ. ಶಿವಪುತ್ರರಡ್ಡಿ ಪಾಟೀಲ್, ಉದ್ಯೋಗ ಖಾತ್ರಿಯಡಿ  ಮಂಜೂರಾದ ಕಾಮಗಾರಿಗಳಲ್ಲಿ ಗ್ರಾಮದ ಕೂಲಿಕಾರರಿಗೆ ನೀಡದೆ ಯಂತ್ರದಿಂದ ಕಾಮಗಾರಿ ಪೂರೈಸಿ ಬಿಲ್ ಪಡೆದುಕೊಳ್ಳಲಾಗಿದೆ. ಚೆಕ್ ಡ್ಯಾಂಗಳನ್ನು ಅವಶ್ಯಕತೆ ಇದ್ದಲ್ಲಿ ನಿರ್ಮಿಸದೇ ಅವೈಜ್ಞಾನಿಕ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಕೂಡಲೇ ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೋಗಸ್ ದಾಖಲೆ: 2009ರಿಂದ 2012ರ ವರೆಗೆ ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಮಂಜೂರಾದ ರಸ್ತೆ, ಒಳಚರಂಡಿ ನಿರ್ಮಾಣ ಕಾಮಗಾರಿಗಳನ್ನು ಗ್ರಾಮ ಸ್ವರಾಜ್ ಯೋಜನೆಯ ಹೆಸರಿನಲ್ಲಿ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ಹಣ ನುಂಗಿ ಹಾಕಲಾಗಿದೆ.
ಗ್ರಾಮದಲ್ಲಿ ಕೆಲ ರಾಜಕೀಯ ಪ್ರಭಾವಿ ವ್ಯಕ್ತಿಗಳು ಪಂಚಾಯಿತಿ ಆಡಳಿತದಲ್ಲಿ ತಲೆ ಹಾಕುತ್ತಿದ್ದು, ಇದರಿಂದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗದೆ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಆರೋಪಿಸಿದರು. ಆದ್ದರಿಂದ ಪಿಡಿಒ ಹಾಗೂ ಗಣಕಯಂತ್ರ ಆಪರೇಟರ್‌ನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರಾದ ಆಂಜನೇಯ ಹಳ್ಳಿ, ಶರಣಪ್ಪ ಗುಂಡಗುರ್ತಿ, ತಾಯಮ್ಮ, ದೇವಮ್ಮ, ಮರೆಮ್ಮ, ಮಲ್ಲಿಕಾರ್ಜುನ, ಸೋಮಶೇಖರ, ದೇವಿಂದ್ರಮ್ಮ, ಹಣಮಂತ ಬಾವರ, ಸಾಬಣ್ಣ, ಮಲ್ಲಯ್ಯ, ಸಿದ್ದಯ್ಯ ಇತರರು ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.