ಅಣೆಕಟ್ಟೆಗೆ ಸಿಸಿ ಕ್ಯಾಮರಾ ಅಳವಡಿಸಲು ಟೆಂಡರ್
ಹುಣಸಗಿ: ನಾರಾಯಣಪುರ ಜಲಾಶಯ, ಡೋಣಾ ಮೇಲ್ಸೇತುವೆ, ಎಸ್ಕೇಪ್ ಗೇಟ್, ಎಡದಂಡೆ ಮುಖ್ಯ ಕಾಲುವೆ ಗೇಟಗಳ ದುರಸ್ತಿ ಸೇರಿದಂತೆ 30 ಕೋಟಿ ವೆಚ್ಚದಲ್ಲಿ 90 ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಕೆಬಿಜೆಎನ್ನೆಲ್ ಟೆಂಡರ್ ಕರೆಯಲಾಗಿದೆ ಎಂದು ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಪಾಟೀಲ್ ತಿಳಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಣೆಕಟ್ಟು ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಡಾಂಬರೀಕರಣ, ಮಣ್ಣಿನ ಏರಿಗೆ ಹಸಿರು ಹುಲ್ಲಿನ ಹೊದಿಕೆ ಹಾಕುವುದು, ಸಿಸಿ ಕ್ಯಾಮರಾ ಅಳವಡಿಕೆ, ಡ್ಯಾಂನ ಡೈಕ್ ಅಪ್ರೋಚ್ ದುರಸ್ತಿ ಮತ್ತು ಗೇಟುಗಳ ದುರಸ್ತಿ, ಬಣ್ಣ ಮಾಡುವುದು ಸೇರಿದಂತೆ ಅನೇಕ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಪ್ರಮುಖ ಸ್ಥಳಗಳಾದ ಆಣೆಕಟ್ಟು, ಡೋಣಾ ಮೇಲ್ಸೇತುವೆ, ಮುಖ್ಯ ಕಾಲುವೆಯ ಗೇಟ್ ಹತ್ತಿರ ತಾಂತ್ರಿಕ ಮಾಹಿತಿಯನ್ನು ಅಳವಡಿಸಲಾಗುವುದು. ಬರುವ 15 ದಿನಗಳ ಒಳಗಾಗಿ ನಮ್ಮ ವಿಭಾಗದ ವ್ಯಾಪ್ತಿಯ ಎಲ್ಲ ಕಾಮಗಾರಿಗಳ ದುರಸ್ತಿ ಮಾಡಲಾಗುವುದು ಎಂದರು. ಎಇಇ ಗುರುಲಿಂಗಪ್ಪ, ಬೆಳಗಲಿ,ಪಾಟೀಲ್, ನರಸಿಂಹಮೂರ್ತಿ, ಶಿವುಕುಮಾರ, ಪ್ರಶಾಂತ, ಹೀರಾಲಾಲ, ಸಾದೀಕ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

