ಉತ್ತಮ ರಸ್ತೆ ಅಭಿವೃದ್ಧಿಯ ಸಂಕೇತ: ಶಾಸಕ ಗುರು ಪಾಟೀಲ
ಕೆಂಭಾವಿ: ಒಂದು ಪ್ರದೇಶದ ಅಭಿವೃದ್ಧಿಯು ಅಲ್ಲಿಯ ರಸ್ತೆಯನ್ನೂ ಅವಲಂಬಿಸಿರುತ್ತದೆ. ಉತ್ತಮ ರಸ್ತೆಗಳು ಅಭಿವೃದ್ಧಿಯ ಸಂಕೇತವಾಗಿದ್ದು, ಇದರಿಂದ ಜನರ ಸಂಚಾರದ ಜತೆಗೆ ಸರಕು ಸಾಗಾಣಿಕೆ ಮಾಡಲು ಅನುಕೂಲವಾಗುತ್ತದೆ ಎಂದು ಶಾಸಕ ಗುರು ಪಾಟೀಲ ಹೇಳಿದರು.
ಪಟ್ಟಣದ ಸಂಜೀವ ನಗರದಲ್ಲಿ ಲೋಕೋಪಯೋಗಿ ಮತ್ತು ಬಂದರು ಒಳನಾಡು ಸಾರಿಗೆ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ಸುಮಾರು 48 ಕೋಟಿ ವೆಚ್ಚದ ಸುರಪುರ- ಹುನಗುಂದ ರಾಜ್ಯ ಹೆದ್ದಾರಿಯ 37 ಕಿಮೀ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಗುಣಮಟ್ಟದ ಕಾಮಗಾರಿಗೆ ಸೂಚನೆ: ಬಹಳ ದಿನಗಳಿಂದ ಹದಗೆಟ್ಟಿದ್ದ ಸುರಪುರ- ಕೆಂಭಾವಿ ರಸ್ತೆ ದುರಸ್ತಿಯಾಗಲು ಈಗ ಕಾಲ ಕೂಡಿ ಬಂದಿದೆ. ಉತ್ತಮ ರಸ್ತೆಯಾಗಿ ಜನರ ಹಾಗೂ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿ. ಈ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.
ವಿದ್ಯುದ್ದೀಕರಣಕ್ಕೆ ಕ್ರಮ: ಈ ರಾಜ್ಯ ಹೆದ್ದಾರಿಯಲ್ಲಿ ಬರುವ ಕೆಂಭಾವಿ ಪಟ್ಟಣದ ನೂತನ ಬಸ್ ನಿಲ್ದಾಣದಿಂದ ಸಂಜೀವ ನಗರದವರೆಗೆ ರಸ್ತೆಯ ಮಧ್ಯದಲ್ಲಿ ವಿದ್ಯುತ್ ಅಲಂಕಾರಕ್ಕಾಗಿ ಶಾಸಕರ ನಿಧಿಯಿಂದ ಹಣ ಬಿಡುಗಡೆ ಮಾಡುವುದಾಗಿ ಹೇಳಿ, ಇದರ ಬಗ್ಗೆ ಅನುಮೋದನೆ ಪಡೆಯಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಕೆಜೆಪಿ ತಾಲೂಕಾಧ್ಯಕ್ಷ ಭೀಮಯ್ಯಗೌಡ ಕಟ್ಟಿಮನಿ, ರಾಜಶೇಖರ ಗೂಗಲ, ಮಷಾಕಸಾಬ ಸಾಸನೂರ, ಬಸನಗೌಡ ಹೊಸಮನಿ, ಪ್ರಕಾಶ ನಾಡಿಗೇರ, ಸಂಜೀವರಾವ ಕುಲಕರ್ಣಿ, ಟಿ.ಪ್ರಹ್ಲಾದ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

