ಗುಲ್ಬರ್ಗಾ

ಚಿತ್ತಾಪುರದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ

Published On :

ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಜು.8
ತಾಲೂಕಿನೆಲ್ಲೆಡೆ ರೈತರು ತಮ್ಮ ಮನೆಯಲ್ಲಿ ಮಣ್ಣಿನಿಂದ ಎತ್ತು ತಯಾರಿಸಿ ಪೂಜೆ ಸಲ್ಲಿಸಿ ಸಂಭ್ರಮದಿಂದ ಅಮವಾಸ್ಯೆ ಆಚರಣೆ ಮಾಡಿದರು.
ರೈತರು ಭೂಮಿ ತಾಯಿಯಿಂದ ಉತ್ತಮ ಬೆಳೆ ಬರಲಿ, ಸುಖ- ಶಾಂತಿ, ಸಮೃದ್ಧಿ ಸಿಗಲಿ ಎಂಬ ಭಾವನೆಯಿಂದ ರೈತರು ಮಣ್ಣೆತ್ತಿನ ಅಮವಾಸ್ಯೆಯಂದು ವಿಶೇಷವಾಗಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ಬಜಾರದಿಂದ ತಂದು ವಿಶೇಷ ಪೂಜೆ ಮಾಡಿ ಹೋಳಿಗೆ ಸಜ್ಜಕ, ಕಡಬು, ಶಾವಿಗಿ ನೈವೇದ್ಯ ಮಾಡಿ ಅರ್ಪಿಸಿದರು.
ಎತ್ತಿನ ಜತೆಯಲ್ಲಿ ತಂದ ಮಣ್ಣಿನ ದೋಣಿಯಲ್ಲಿ ಕಾಳುಗಳನ್ನು ಹಾಕಿ ಬೆಳೆ ಹುಲುಸಾಗಿ ಬೆಳೆಯಲಿ ಎಂದು ಪ್ರಾರ್ಥಿಸಿದರು. ಕೃಷಿ ಪರಿಕರಗಳನ್ನು ಸಹ ಪೂಜಿಸಿದರು. ರೈತರ ಪಾಲಿಗೆ ಇದು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ಮುಂಗಾರು ಮಳೆ ಆರಂಭಗೊಂಡಿದೆ. ರೈತರು ಕೃಷಿ ಚಟವಟಿಕೆಯಲ್ಲಿ ತೊಡಗಿದ್ದಾರೆ. ರೈತ ಜೀವನಕ್ಕೆ ಬೆಳಕು ನೀಡುವ ಎತ್ತುಗಳಿಗೆ ಯಾವುದೇ ಕಷ್ಟ ಕಾರ್ಪಣ್ಯ ಬರಬಾರದು ಎಂದು ಭಕ್ತಿ ಭಾವದಿಂದ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.