ಜಿಪಂಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ: ಯೋಜನಾಧಿಕಾರಿ
ಸುರಪುರ: 2013-14ನೇ ಸಾಲಿನ 13ನೇ ಹಣಕಾಸು ಯೋಜನೆ, ಬಿಆರ್ಜಿಎಫ್ ಯೋಜನೆಯಲ್ಲಿ ಶಾಲಾ ಕೋಣೆ ಕಂಪೌಂಡ್, ಅಂಗನವಾಡಿ, ಸಿಸಿ ರಸ್ತೆಗಳ ಕಾಮಗಾರಿಗಳನ್ನು ತಾಪಂ ಸದಸ್ಯರ ಸಲಹೆ ಮೇರೆಗೆ ಆಯ್ಕೆ ಮಾಡಿಕೊಂಡು ಅದರ ಕ್ರಿಯಾ ಯೋಜನೆಯನ್ನು 15 ದಿನಗಳ ಒಳಗಾಗಿ ಸಿದ್ಧಪಡಿಸಿ ಜಿಪಂಗೆ ಸಲ್ಲಿಸಬೇಕು ಎಂದು ಜಿಪಂ ಯೋಜನಾಧಿಕಾರಿ ಬಸವರಾಜ ಸುಣ್ಣದ ತಿಳಿಸಿದರು.
ಇಲ್ಲಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಈ ಸಾಲಿನ ಕ್ರಿಯಾಯೋಜನೆ ಸಿದ್ಧಪಡಿಸಿಲು ಮಂಗಳವಾರ ಕರೆದಿದ್ದ ತಾಪಂ ಸದಸ್ಯ ಮತ್ತು ತಾಲೂಕು ಅನುಷ್ಠನಾಧಿಕಾರಿಗಳಿಗೆ ಮಾರ್ಗಸೂಚಿ ಸಭೆಯಲ್ಲಿ ಮಾತನಾಡಿ, ಕಳೆದ ಸಾಲಿನ ಯಾವುದೇ ಕಾಮಗಾರಿಗಳು ನಿಂತು ಹೋದಲ್ಲಿ ರಿಪೇರಿಗಾಗಿ ಈ ಯೋಜನೆ ಹಣ ಬಳಸಿಕೊಳ್ಳಲು ಬರುವುದಿಲ್ಲ. ಹೊಸ ಕಾಮಗಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಯೋಜನೆಯಲ್ಲಿ 3 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಅವಕಾಶವಿದೆ ಎಂದರು.
ನೀತಿ ಸಂಹಿತೆ: 2013ನೇ ಸಾಲಿನ ರು. 144 ಲಕ್ಷ ಅನುದಾನವನ್ನು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾರ್ಗಸೂಚಿ ಬಾರದ ಕಾರಣ ಬಳಸಿಕೊಳ್ಳಲಾಗಲಿಲ್ಲ. ಈ ಸಾಲಿನ ರು. 149.98 ಲಕ್ಷ ಸೇರಿದಂತೆ ಒಟ್ಟು ರು. 293.98 ಲಕ್ಷ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದರು.
ಅಂಗನವಾಡಿ ಕಟ್ಟಡಗಳನ್ನು ಸರ್ಕಾರಿ ಶಾಲೆ ಅಥವಾ ವಸತಿ ನಿಲಯಗಳ ಸ್ಥಳದಲ್ಲಿ ಮಾತ್ರ ಕಟ್ಟಡಬೇಕು. ಸ್ಥಳದ ಕೊರತೆಯಿದ್ದಲ್ಲಿ ಗ್ರಾಮ ಪಂಚಾಯಿತಿಯವರು ಸ್ಥಳ ಒದಗಿಸಿ ಕೊಡಬೇಕು. ಪ್ರತಿ ಯೋಜನೆಯಲ್ಲಿ ಶೇ.25ರಷ್ಟು ಎಸ್ಸಿ, ಎಸ್ಟಿಗೆ ಹಾಗೂ ಶೇ.3 ರಷ್ಟು ಅಂಗವಿಕಲರ ಯೋಜನೆಗಳಿಗೆ ಮೀಸಲಿಡಬೇಕು. ಶೇ.20ರಷ್ಟು ಮಾತ್ರ ಸಿಸಿ ರಸ್ತೆಗೆ ಬಳಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಅನುದಾನ: ಬಿಸಿಯೂಟದ 144 ಕೋಣೆಗಳಿಗೆ ಈಗಾಗಲೇ ಪ್ರತ್ಯೇಕ ಅನುದಾನವನ್ನು ಒದಗಿಸಲಾಗಿದೆ. ಬಾಕಿಯಿರುವ 102 ಕೋಣೆಗಳ ಅನುಮೋದನೆಗೆ ಕಳುಹಿಸಲಾಗಿದೆ. ಯಾವುದೇ ಕಾರಣಕ್ಕೆ ಈ ಯೋಜನೆಯಲ್ಲಿ ಬಿಸಿಯೂಟ ಕೋಣೆಗಳನ್ನು ಕಟ್ಟುವಂತಿಲ್ಲ. ಅವಶ್ಯಕತೆಯಿರುವ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ನೀರು ಒದಗಿಸಲು ಬಳಸಿಕೊಳ್ಳಬಹುದು ಎಂದು ಸೂಚಿಸಿದರು.
ತಾಪಂ ಅಧ್ಯಕ್ಷೆ ಸಾಬಮ್ಮ ದೇಸಾಯಿ, ಉಪಾಧ್ಯಕ್ಷೆ ಅನ್ನಪೂರ್ಣ ಪಾಟೀಲ್, ಇಒ ಪ್ಯಾರೆ ಮಹ್ಮದ್ ಕುತುಬದ್ದೀನ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ದೇವಿಂದ್ರಪ್ಪ ಪೋಟ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

