ಗುಲ್ಬರ್ಗಾ

ಜುಲೈ ಅರ್ಧ ಕಳೆದರೂ ಶೇ. 32ರಷ್ಟೇ ಬಿತ್ತನೆ

Published On :

ಆಳಂದ: ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಸಾಧಾರಣ ಮಳೆಯು ಈಗಾಗಲೇ ಬಿತ್ತನೆಯಾಗಿ ಬೆಳೆದ ಬೆಳೆಗೆ ಹಾಗೂ ಬಾಕಿ ಉಳಿದ ಬಿತ್ತನೆಗೆ ಪೂರಕವಾಗಿ ರೈತರ ಮುಖದಲ್ಲಿ ಸಂತಸದ ಕಳೆ ತರಿಸಿದೆ.
ಮಳೆ ಹಿನ್ನಡೆಯಿಂದಾಗಿ ತಾಲೂಕಿನಾದ್ಯಂತ ಕೇವಲ ಶೇ.32 ರಷ್ಟು ಮಾತ್ರ ಇದುವರೆಗೂ ಮುಂಗಾರು ಹಂಗಾಮಿನ ಬಿತ್ತನೆಯಾಗಿದೆ. ಇನ್ನೊಂದಡೆ ಅಂತರ್ಜಲ ಮರು ಭರ್ತಿಯಾಗದೆ ಇರುವುದು ಗ್ರಾಮೀಣ ಭಾಗದಲ್ಲಿ ನೀರಿನ ತೊಂದರೆ ಮುಂದುವರೆದಿದೆ. ಕಳೆದ ಎರಡ್ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಮೇಲಾಗಿ ಜಿಟಿ ಜಿಟಿ ಮಳೆ ಆರಂಭವಾಗಿದ್ದು ಬಿತ್ತನೆ ಮಾಡುವ ರೈತರಿಗೆ ಆಶಾದಾಯಕವಾಗಿ ಪರಿಣಮಿಸಿದ್ದು, ಅಲ್ಲದೆ ಬಿತ್ತನೆಗೆ ಬಹುತೇಕವಾಗಿ ಭೂಮಿಯ ತೇವಾಂಶವನ್ನು ಸಂಪೂರ್ಣವಾಗಿದೆ. ಹೀಗಾಗಿ ಬಾಕಿಯಿರುವ ಕಡೆ ಮಳೆ ಬಿಡುವು ಮಾಡಿದರೆ ಸೋಮವಾರದ ನಂತರವೇ ಬಿತ್ತನೆ ಬಿರುಸಿನಿಂದ ಶುರುವಾಗುವ ಸಾಧ್ಯತೆಯಿದೆ.
ಕುಸಿದ ಬಿತ್ತನೆ:  ಕೃಷಿ ಇಲಾಖೆಯ ಅಂದಾಜಿಸಿದಂತೆ ಒಟ್ಟು ಮುಂಗಾರು ವಿವಿಧ ಬೆಳೆಯ 89545 ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಜುಲೈ 8ರ ತನಕ 3057.2 ಹೆಕ್ಟೇರ್ ಮಾತ್ರ ಬಿತ್ತನೆಯಾದ ಬಗ್ಗೆ ಇಲಾಖೆ ವರದಿ ಮಾಡಿದೆ.  ಭತ್ತ 40 ಹೆಕ್ಟೇರ್, ಹೈ ಜೋಳ 85, ಜೋಳ 520, ಹೈ ಸಜ್ಜೆ 2195, ಇತರೆ ತೃಣಧಾನ್ಯ 48 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ.
ತೊಗರಿ 13430 ಹೆಕ್ಟೇರ್, ಹೆಸರು 968, ಉದ್ದು 2550, ಅಲಸಂದಿ 60, ಅವರೆ 30, ಮಟಕಿ 36, ಹುರುಳೆ 60 ಹೆಕ್ಟೇರ್ ಸೇರಿ ಒಟ್ಟು 56275 ಹೆಕ್ಟೇರ್ ಕ್ಷೇತ್ರದಲ್ಲಿ 17134 ಸಾಧನೆ ಸಾಧಿಸಿದೆ.
ಶೇಂಗಾ 72, ಎಳ್ಳು 410, ಸೂರ್ಯಕಾಂತಿ 2450, ಗುರೇಳ್ಳು 60, ಸೂಯಾ ಆವರೆ 2440, ಔಡಲ 10 ಹೆಕ್ಟೇರ್ ಸೇರಿ 5442 ಹೆಕ್ಟೇರ್ ಬಿತ್ತನೆಯಾಗಿದ್ದು, ಕಬ್ಬು 5093.2 ಹೆಕ್ಟೇರ್ ಒಟ್ಟು 30557.2 ಹೆಕ್ಟೇರ್ ಬಿತ್ತನೆಯಾಗಿದೆ.
ಕ್ಷಿಣಿಸಿದ ಮಳೆ:  ಇದುವರೆಗೆ ತಾಲೂಕಿನ ಏಳು ಮಳೆ ಮಾಪನ ಕೇಂದ್ರಗಳಲ್ಲಿ ವಾರ್ಷಿಕ ಸರಾಸರಿ ಮಳೆಗಿಂತ ಜುಲೈ 8ರ ತನಕ ಶೇ. 51ರಷ್ಟು ದಾಟ್ಟಿಲ್ಲ. ಹೀಗಾಗಿ ಬಿತ್ತನೆಗೆ ದೊಡ್ಡ ಹೊಡೆತ ಬಿದ್ದುಕೊಂಡಿದೆಯಲ್ಲದೆ. ಇಳುವರಿಯ ಮೇಲೂ ಅದರ ಪರಿಣಾಮ ಬೀರುವ ಸಾಧ್ಯತೆ ತಳ್ಳಿ ಹಾಕಲಾಗದು.
 ಮಳೆ ತಂದ ಸಂತಸ:   ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಸಾಧಾರಣ ಮಳೆಯಿಂದ ಬೆಳೆ ಬೆಳೆಯಲು ಪೂರಕವಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಇನ್ನೂ ಬಿತ್ತನೆಯಾಗದ ಭೂಮಿಗೆ ಮಳೆ ಹದವಾಗಿದ್ದು, ಬಿತ್ತನೆಗೆ ಸಕಾಲವಾಗಿ ಚುರುಕಿನಿಂದ ನಡೆಯಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಶಾಂಕ ಶಹಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.