ಮಹಾನಗರ ಪಾಲಿಕೆ: ಆರ್ಟಿಐ ಅಧಿಕಾರಿಗಳ ನೇಮಕ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.16
ಗುಲ್ಬರ್ಗ ಮಹಾನಗರ ಪಾಲಿಕೆಯಿಂದ ಮಾಹಿತಿ ಹಕ್ಕು ಅಧಿನಿಯಮ 2005ರಡಿ ಸಾರ್ವಜನಿಕರು ಕೋರುವ ಮಾಹಿತಿ ಒದಗಿಸಲು ಅಧಿನಿಯಮ ಕಲಂ 5(1), 5(2) ಮತ್ತು 19(1)ರಡಿ ಅಧಿಕಾರಿಗಳನ್ನು ನೇಮಿಸಿ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮೇಲ್ಮನವಿ ಪ್ರಾಧಿಕಾರಗಳೆಂದು ನೇಮಕ ಮಾಡಿದ್ದು, ನೇರವಾಗಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ನೇರವಾಗಿ ಉತ್ತರಿಸಿ ಅದರ ಒಂದು ಪ್ರತಿಯನ್ನು ಕರ್ನಾಟಕ ಮಾಹಿತಿ ಹಕ್ಕು ಆಯೋಗ ಬಹುಮಹಡಿಗಳ ಕಟ್ಟಡ ಬೆಂಗಳೂರು ಇವರಿಗೆ ವರದಿ ಸಲ್ಲಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಮಾಹಿತಿ ಹಕ್ಕು ಅಧಿನಿಯಮ ಕಲಂ 19(1)ರಡಿ ಮೇಲ್ಮನವಿ ಅಧಿಕಾರಿಗಳಾಗಿ ಗುಲ್ಬರ್ಗ ಮಹಾನಗರ ಪಾಲಿಕೆ ಆಯುಕ್ತ ಎಸ್.ಬಿ. ಕಟ್ಟಿಮನಿ ಕಾರ್ಯನಿರ್ವಹಿಸುವರು. ಕಲಂ 5(1)ರಡಿ ಸಾರ್ವಜನಿಕ ಮಾಹಿತಿ ಅಧಿಕಾರಿ, ಕಲಂ 5(2)ರಡಿ ಸಹಾಯಕ ಸಾರ್ವಜನಿಕ ಅಧಿಕಾರಿ ಹಾಗೂ ಸಂಬಂಧಪಟ್ಟ ಶಾಖೆಗಳ ವಿವರ ಕ್ರಮವಾಗಿ ಇಂತಿದೆ.
ಆರ್.ಪಿ. ಜಾಧವ ಕಾರ್ಯಪಾಲಕ ಅಭಿಯಂತರರು ಮಹಾನಗರ ಪಾಲಿಕೆ ಗುಲ್ಬರ್ಗ, ಅಬ್ದುಲ್ ಹಮೀದ್ ಅನ್ಸಾರಿ ಪ್ರದಸ- ತಾಂತ್ರಿಕ ಡಿ.ಬಿ. ಶಾಖೆಗೆ ಸಂಬಂಧಿಸಿದಂತೆ ಅನುಪಾಲನಾ ವರದಿಯ ಮೇಲ್ವಿಚಾರಣೆ ಉಸ್ತುವಾರಿ. ವಾಸುದೇವ ಮುಖ್ಯ ಲೆಕ್ಕಾಧಿಕಾರಿಗಳು, ಮಲ್ಲಿಕಾರ್ಜುನ ಕರ ವಸೂಲಿಗಾರ- ಲೆಕ್ಕ ಶಾಖೆಯ ಮತ್ತು ಲೆಕ್ಕ ಪರಿಶೋಧನಾ ರೂ.ನಂ. 9. ಅಭಯಕುಮಾರ್ ಪರಿಸರ ಅಭಿಯಂತರರು (ಉತ್ತರ), ಖಾಜಾ ಮೈನೋದ್ದಿನ್ ಪ್ರದಸ- ಆರೋಗ್ಯ ಶಾಖೆ (ಉತ್ತರ). ಬಾಬುರಾವ ಪರಿಸರ ಅಭಿಯಂತರರು ದಕ್ಷಿಣ, ರವಿ ಮೋರೆ ಎದಸ, ಆರೋಗ್ಯ ಶಾಖೆ(ದಕ್ಷಿಣ). ಜಗನ್ನಾಥ ಪಾಟೀಲ್ ಕಚೇರಿ ವ್ಯವಸ್ಥಾಪಕ, ಭೀಮಣ್ಣ ನಾಯಕ ಪ್ರದಸ-ಹಂಚಿಕೆ ಶಾಖೆ.
ಬಾಬುರಾವ ವಿಭೂತೆ ಪ್ರಭಾರಿ ಪರಿಷತ್ ಕಾರ್ಯದರ್ಶಿ, ಮಹ್ಮದ್ ಹಕೀಮ್ ಎದಸ, -ಪರಿಷತ್ ಶಾಖೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಗಳು. ವಿಜಯಲಕ್ಷ್ಮೀ ಆರ್. ಪಟ್ಟೇದಾರ ಸಿಎಒ, ಶಕೀಲ್ ಎಲ್ ಗುನ್ನಾಪುರ ಸಿ.ಓ ,- ಎಸ್ಜೆಎಸ್ಆರ್ವೈ(ಉತ್ತರ ಮತ್ತು ಆಶ್ರಯ ಶಾಖೆ). ಜಗನ್ನಾಥ ಪಾಟೀಲ ಕಚೇರಿ ವ್ಯವಸ್ಥಾಪಕ, ಶಿವಶರಣಯ್ಯ ಪ್ರದಸ, -ಸಿಬ್ಬಂದಿ ಶಾಖೆ. ಅಮೀನ್ ಮುಕ್ತಾರ ಸ.ಕಾಪಾ.ಅ.(ಉತ್ತರ), ಸುನೀಲ್ ಪ್ರದಸ, -ಚುನಾವಣಾಶಾಖೆ.
ಬಾಬುರಾವ ವಿಭೂತೆ ಪ್ರಭಾರಿ ಪರಿಷತ್ ಕಾರ್ಯದರ್ಶಿ (ದಕ್ಷಿಣ), ಮಹೇಶ ದೇಶಪಾಂಡೆ ಕ.ವ.,-ಚುನಾವಣಾ ಶಾಖೆ. ವಿಠ್ಠಲ್ ಹಾದಿಮನಿ ಸಿಎಒ, ಶಾಂತಪ್ಪ ಹಾದಿಮನಿ ಸಿಒ, -ಎಸ್ಜೆಎಸ್ಆರ್ವೈ (ದಕ್ಷಿಣ ಮತ್ತು 22.75). ಎಂ.ಎ. ಮಜೀದ್ ಸ.ಕಾ.ಪಾ.ಅ. ಹಾಗೂ ವಲಯ ಆಯುಕ್ತರು, ಬಸವರಾಜ ವಗ್ಗೆ ಕ.ವ್ಯ. ಶೀಘ್ರಲಿಪಿಗಾರರು -ವಲಯ ಕಚೇರಿ -1ಗೆ ಸಂಬಂಧಪಟ್ಟ ಮಾಹಿತಿಗಳು.
ಆರ್.ಪಿ. ಜಾಧವ, ಸ.ಕಾ.ಪಾ.ಅ. ಹಾಗೂ ವಲಯ ಆಯುಕ್ತರು, ಬಂಡಪ್ಪ ಹುಲಿಮನಿ ಕ.ವ್ಯ. ಪ್ರದಸ.,-ವಲಯ ಕಚೇರಿ-3ಗೆ ಸಂಬಂಧಪಟ್ಟ ಮಾಹಿತಿಗಳು. ಅಮಿನ್ ಮುಕ್ತಾರ್ ಸ.ಕ.ಪ.ಅ. ಹಾಗೂ ವಲಯ ಆಯುಕ್ತರು, ಕವಿತಾಬಾಯಿ ಕ.ವ್ಯ. ಪ್ರ.ದ.ಸ- ವಲಯ ಕಚೇರಿ- 4ಕ್ಕೆ ಸಂಬಂಧಪಟ್ಟ ಮಾಹಿತಿಗಳು. ರಿಯಾಜ್ ಅಹ್ಮದ್, ಗುರುರಾಜ ಎದಸ, -ವಿದ್ಯುತ್ ಶಾಖೆ. ಶಂಕರ ಕೊಳ್ಳೂರ ಕಂದಾಯ ಅಧಿಕಾರಿ ಕಂದಾಯ ಇಲಾಖೆ ವಲಯ ಕಚೇರಿ-1, ಬಸವರಾಜ ವಗ್ಗೆ ಕ.ವ್ಯ. ಶೀಘ್ರಲಿಪಿಗಾರರು, - ವಲಯ ಕಚೇರಿ-1 ಕಂದಾಯ ಶಾಖೆ. ಶಂಕರ ಕೊಳ್ಳೂರು ಕಂದಾಯ ಇಲಾಖೆ, ಕಂದಾಯ ಅಧಿಕಾರಿ, ವಲಯ ಕಚೇರಿ-2, ಅಕ್ರಮ ಅಹ್ಮದ್ ಪ್ರದಸ ಕ.ವ್ಯ. ವಲಯ ಕಚೇರಿ-2 ಕಂದಾಯ ಶಾಖೆಗೆ ಸಂಬಂಧ ಪಟ್ಟ ಮಾಹಿತಿ ವಲಯ ಕಚೇರಿ-2.
ಸಿದ್ರಾಮ ಕರಣಿಕ ಕಂದಾಯ ಅಧಿಕಾರಿಗಳು (ಪ್ರ), ಬಂಡಪ್ಪ ಕ.ವ್ಯ. ಪ್ರದಸ ವಲಯ ಕಚೇರಿ- 3, -ಕಂದಾಯ ಶಾಖೆಗೆ ಸಂಬಂಧಪಟ್ಟ ಮಾಹಿತಿ ವಲಯ ಕಚೇರಿ-3. ರಮೇಶ ಹಾಲು ಕಚೇರಿ ಸಹಾಯ (ಕಂ), ಕವಿತಾಬಾಯಿ ಕ.ವ್ಯ. ಪ್ರದಸ ವಲಯ ಕಚೇರಿ-4, -ಕಂದಾಯ ಶಾಖೆಗೆ ಸಂಬಂಧಪಟ್ಟ ಮಾಹಿತಿ ವಲಯ ಕಚೇರಿ- 4. ಆರ್.ಪಿ. ಜಾಧವ, ಕಾರ್ಯಪಾಲಕ ಅಭಿಯಂತರರು ಮಹಾನಗರ ಪಾಲಿಕೆ ಗುಲ್ಬರ್ಗ, ಧೀರೆಂದ್ರ ಸೀನಿಯರ್ ಪ್ರೋಗ್ರಾಮರ್, -ನಿರ್ಮಲ ನಗರ ಯೋಜನೆ ಜಿಐಎಸ್ ಜಗನ್ನಾಥ ಪಾಟೀಲ್ ಕ.ವ್ಯ.(ಕೇಂದ್ರ ಕಚೇರಿ) ಅಭಿಲೇಖಾಲಯ, ಸೌಭಾಗ್ಯಮ್ಮ ಪ್ರದಸ, -ಅಭಿಲೇಖಾಲಯ ಕೇಂದ್ರ ಕಚೇರಿ. ಜಗನ್ನಾಥ ಪಾಟೀಲ್ ಕ.ವ್ಯ.(ಕೇಂದ್ರ ಕಚೇರಿ) ಅಭಿಲೇಖಾಲಯ, ಅವಧೂತ ಡಿ. ಪ್ರದಸ, -ಖರೀದಿ ಶಾಖೆ ಮತ್ತು ಉಗ್ರಾಣ ಶಾಖೆ.
ಸಂಬಂಧಪಟ್ಟ ಸಾರ್ವಜನಿಕ ಸಂಪರ್ಕಾಧಿಕಾರಿಯವರಿಂದ ಅರ್ಜಿದಾರರಿಗೆ ಮಾಹಿತಿ ಒದಗಿಸುವಲ್ಲಿ ಏನಾದರೂ ದೂರುಗಳು, ಮೇಲ್ಮನವಿ ಸಲ್ಲಿಸಿದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಕಲಂ 19(1)ರ ಅಡಿ ಮೇಲ್ಮನವಿ ಪ್ರಾಧಿಕಾರವಾದ ಮಹಾನಗರ ಪಾಲಿಕೆಯ ಆಯುಕ್ತರನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

