ಗುಲ್ಬರ್ಗಾ

ಆಶ್ರಯ ನಿವೇಶಗಳ ನಕಲಿ ಪ್ರಮಾಣ ಪತ್ರ ಸೃಷ್ಟಿ ಆರೋಪ

Published On :

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಸರ್ವೇ ನಂ. 184ರಲ್ಲಿ ಆಶ್ರಯ ನಿವೇಶನಗಳನ್ನು ಕೆಲವು ಭೂಗಳ್ಳರು ನಕಲಿ ಪ್ರಮಾಣ ಪತ್ರ ಸೃಷ್ಟಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಅಬ್ದುಲ್ ರಜಾಕ್ ಆರೋಪಿಸಿ, ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಫಲಾನುಭವಿ ಅಬ್ದುಲ್ ರಜಾಕ್ ಮಾತನಾಡಿ, ಸರ್ವೇ ನಂ.184ರಲ್ಲಿ ಬಡ ಹಾಗೂ ದಲಿತ ಜನತೆಗೆಗಾಗಿ ನಿರ್ಮಿಸಿದಲಾದ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಗ್ರಾಮದ ಕೆಲವು ಭೂಗಳ್ಳರು ತಹಸೀಲ್ದಾರ್ ಸಹಿ ಇಲ್ಲದೆ ನಕಲಿ ಹಕ್ಕು ಪತ್ರವನ್ನು ಸೃಷ್ಟಿಸಿ, ಅರ್ಹ ಪಲಾನುಭವಿಗಳಿಗೆ ಹೊರತು ಪಡಿಸಿ ಹೊರಗಿನ ಫಲಾನುಭವಿಗಳಿಗೆ ನಕಲಿ ಹಕ್ಕು ಪತ್ರಗಳನ್ನು ನೀಡಿದ್ದಾರೆ. ಮುಗ್ದ ಗ್ರಾಮಸ್ಥರಿಂದ ಪ್ರತಿ ನಿವೇಶನಕ್ಕೆ ರು. 50 ಸಾವಿರದಿಂದ 1 ಲಕ್ಷದವರೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಉತ್ತರ ನೀಡಿಲ್ಲ: ಕಾನೂನು ರೀತಿಯ ಫಲಾನುಭವಿಯಾದ ನನಗೆ ನಿವೇಶನ ಸಂಖ್ಯೆ 44ಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ಪಂಚಾಯಿತಿ ಕರವನ್ನು ತುಂಬಿದ್ದು, ಅಲ್ಲಿ ನೋಡಲು ಬೇರೊಬ್ಬ ವ್ಯಕ್ತಿ ವಾಸಮಾಡಿ ಸುಮಾರು ರು. 1 ಲಕ್ಷಕ್ಕೆ  ಮಾರಾಟ ಮಾಡಿರುವುದಾಗಿ ತಿಳಿಸಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಇಂದಿಗೂ ಗ್ರಾಪಂ, ತಾಪಂ ಹಾಗೂ ಜಿಪಂ ಅಧಿಕಾರಿಗಳು ಯಾವಉತ್ತರ ನೀಡಿಲ್ಲ ಎಂದು ಆರೋಪಿಸಿದರು.
ಕೂಡಲೇ ಜಿಲ್ಲಾಡಳಿತ ತನಿಖೆ ಕೈಗೊಂಡು ದಲಿತ ಹಿಂದುಳಿದ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಾಪಂ ಮಾಜಿ ಅಧ್ಯಕ್ಷ ರಾಮನಗೌಡ ಗೋಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಹಲವಾರು ಜನ ಫಲಾನುಭವಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.