2010ರ ಹಿಂದೆ ಪಡೆದ ರೇಷನ್ ಕಾರ್ಡ್ಗೂ 'ಅನ್ನಭಾಗ್ಯ'
ಕನ್ನಡಪ್ರಭ ವಾರ್ತೆ , ಆಳಂದ , ಜು.20
2010ನೇ ಸಾಲಿನ ಹಿಂದೆ ನೀಡಲಾದ ಪಡಿತರ ಚೀಟಿ ಫಲಾನುಭವಿಗಳ ಫೋಟೋ ಮತ್ತು ಬಯೋವುಟ್ರಿಕ್ ಮಾಹಿತಿಯನ್ನು ಮತ್ತೊಮ್ಮೆ ಸಂಗ್ರಹಿಸಲು ಆದೇಶಿಸಿದ ಸರ್ಕಾರ ತಾತ್ಕಾಲಿಕವಾಗಿ 31 ಆಗಸ್ಟ್ 2013ರವರೆಗೆ ತಡೆಹಿಡಿದು ಇದ್ದ ಕಾರ್ಡ್ಗಳಿಗೆ ಆಹಾರಧಾನ್ಯ ಪೂರೈಸಲು ನಿರ್ಧರಿಸಿದೆ.
2010 ಹಿಂದೆ ಪಡೆದ ರೇಷನ್ ಕಾರ್ಡ್ಗೆ ಫೋಟೋ- ಬಯೋವುಟ್ರಿಕ್ ಸದ್ಯಕ್ಕೆ ಅಗತ್ಯವಿಲ್ಲ. ಈ ಕಾರ್ಡ್ಗಳಿಗೆ ಆಹಾರಧಾನ್ಯ ದೊರೆಯಲಿದೆ. ಆದರೆ ಕಾರ್ಡ್ಗಳಿಲ್ಲದೆ ಇರುವ ಗ್ರಾಹಕರಿಗೆ ಮಾತ್ರ ಆನ್ಲೈನ್ ಮೂಲಕ ಹೊಸ ಅರ್ಜಿ ಸಲಿಸಲು ಅವಕಾಶವಿದೆ ಎಂದು ಸರ್ಕಾರದ ಸುತ್ತೋಲೆಯನ್ನು ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ 'ಕನ್ನಡಪ್ರಭ'ಕ್ಕೆ ವಿವರಿಸಿದ್ದಾರೆ.
ಇಲಾಖೆ ಹೇಳಿದ್ದೇನು?: ಡಿಸೆಂಬರ್ 2010ರ ಹಿಂದೆ ವಿತರಿಸಲಾದ ಕಾಯಂ ಪಡಿತರ ಚೀಟಿಗಳಲ್ಲಿ ಸಂಗ್ರಹಿಸಿರುವ ಬೆರಳಚ್ಚು-ಬಯೋವುಟ್ರಿಕ್ ತಾಂತ್ರಿಕವಾಗಿ ದೋಷದಿಂದಿದ್ದ ಕಾರಣ ಇಂಥ ಕಾಯಂ ಪಡಿತರ ಚೀಟಿ ಫಲಾನುಭವಿಗಳ ಬೆರಳಚ್ಚು- ಬಯೋವುಟ್ರಿಕ್ಅನ್ನು ಮತ್ತೊಮ್ಮೆ ನೀಡಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆದೇಶ ನೀಡಿತ್ತು.
ಆದರೆ, ಪ್ರಸ್ತುತ ರಾಜ್ಯದ ಎಲ್ಲ ಗ್ರಾಪಂ ಕೇಂದ್ರಗಳಲ್ಲಿ ಹಾಗೂ ನಗರ ಪ್ರದೇಶದ ಸೇವಾ ಕೇಂದ್ರಗಳಲ್ಲಿ 2010ರ ಹಿಂದೆ ಪಡೆದ ಚೀಟಿದಾರರು ಬಹುಸಂಖ್ಯೆಯಲ್ಲಿ ಬೆರಳಚ್ಚು, ಬಯೋವುಟ್ರಿಕ್ ನೀಡಲು ಬರುತ್ತಿದ್ದು, ಇದರಿಂದ ಆನ್ಲೈನ್ಲ್ಲಿ ಹೊಸ ಕಾರ್ಡ್ ಕೋರಿ ಅರ್ಜಿ ಸಲ್ಲಿಸವವರೆಗೆ ತೊಂದರೆಯಾಗುತ್ತಿದೆ. ಇದೇ ರೀತಿ ತಾತ್ಕಾಲಿಕವಾಗಿ ಪಡಿತರ ಚೀಟಿಯಿಂದ ಕಾಯಂ ಪಡಿತರ ಚೀಟಿಯಾಗಿ ಬದಲಾವಣೆ ಮಾಡಿಕೊಂಡಿರುವ ಪಡಿತರ ಚೀಟಿದಾರರು ತಮ್ಮ ಬಯೋವುಟ್ರಿಕ್ ನೀಡಿ ಕಾಯಂ ಪಡಿತರ ಚೀಟಿಗಳನ್ನು ತಾಲೂಕು ಕೇಂದ್ರಗಳಿಂದ ಮತ್ತು ಗ್ರಾಪಂ ಕಚೇರಿಗಳಿಂದ ಪಡೆದುಕೊಳ್ಳಲು ತೊಂದರೆಯಾಗುತ್ತಿದೆ.
ತಹಸೀಲ್ದಾರರ ಸ್ಪಷ್ಟನೆ: ಹೀಗಾಗಿ ಡಿಸೆಂಬರ್ 2010ರ ಹಿಂದೆ ನೀಡಲಾಗಿರುವ ಕಾಯಂ ಪಡಿತರ ಚೀಟಿಗಳಿಗೆ ಸರ್ಕಾರದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಯಾವುದೇ ಅಡೆತಡೆಗಳು ಇರುವುದಿಲ್ಲ. ಆದರೂ ಈ ಪಡಿತರ ಚೀಟಿದಾರರು ಪಡಿತರ ಹಂಚಿಕೆಯನ್ನು ಸರ್ಕಾರ ತಡೆಹಿಡಿಯತ್ತದೆ ಎಂಬ ಉದ್ವೇಗದಲ್ಲಿ ಮತ್ತು ಗೊಂದಲದಲ್ಲಿ ಸೇವಾ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬಯೋವುಟ್ರಿಕ್ ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 2010ರ ಹಿಂದೆ ನೀಡಲಾಗಿರುವ ಕಾಯಂ ಪಡಿತರ ಚೀಟಿದಾರರಿಗೂ ಅನ್ನಭಾಗ್ಯ ಯೋಜನೆ ಜಾರಿಗೊಳಿಸುವುದರಲ್ಲಿ ಯಾವುದೇ ತೊಂದರೆಯಿಲ್ಲ. ಇಂಥವರು ಈಗ ಬಯೋವುಟ್ರಿಕ್ ಮಾಹಿತಿ ನೀಡುವ ಅವಶ್ಯಕತೆ ಪ್ರಸ್ತುತ ಇರುವುದಿಲ್ಲ ಎಂದು ತಹಸೀಲ್ದಾರರು ಸ್ಪಷ್ಪಪಡಿಸಿದ್ದಾರೆ.
ಹೊಸ ಅರ್ಜಿ ಸ್ವೀಕಾರ ಮುಂದುವರಿಕೆ: 2010ರ ಡಿಸೆಂಬರ್ ಹಿಂದೆ ಕಾಯಂ ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಆಗಸ್ಟ್ 2013 ಮಾಹೆಯ ಕೊನೆಯವರೆಗೆ ಬಯೋವುಟ್ರಿಕ್ ಮಾಹಿತಿಯನ್ನು ನೀಡುವ ಅವಶ್ಯಕತೆಯಿಲ್ಲ ಎಂದು ಹೊರಡಿಸಿದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ ತಹಸೀಲ್ದಾರರು, ಫೋಟೋ ಮತ್ತು ಬಯೋವುಟ್ರಿಕ್ ಹಿಡಿದಿಟ್ಟುಕೊಳ್ಳುವ ಕೇಂದ್ರಗಳ ಪ್ರಕ್ರಿಯೆ ತಾತ್ಕಾಲಿಕವಾಗಿ ತಡೆಹಿಡಿಯಲು ಸೂಚಿಸಿದೆ. ಆದರೆ ಹೊಸ ಅರ್ಜಿಗಳ ಸ್ವೀಕಾರ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

