ಗುಲ್ಬರ್ಗಾ

ಜಡಿ ಮಳೆಯಿಂದ ಕೃಷಿ ಕಾರ್ಯಕ್ಕೆ ಹಿನ್ನಡೆ

Published On :

ಚಿಂಚೋಳಿ:  ತಾಲೂಕಿನಲ್ಲಿ ಒಂದು ವಾರದಿಂದ ಜಿಟಿ ಜಿಟಿ ಮಳೆ. ಇಲ್ಲಿನ ಜನ ಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ಅನೇಕ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ.
ತಾಲೂಕಿನಲ್ಲಿ ಮುಂಗಾರು ಮಳೆ ಅಲ್ಪ ಪ್ರಮಾಣದಲ್ಲಿ ಆಗಿದ್ದು, ಅನೇಕ ಗ್ರಾಮಗಳಲ್ಲಿ ಮುಂಗಾರು ಬಿತ್ತನೆ ಬೆಳೆಗಳಾಗಿರುವ ಹೆಸರು, ತೊಗರಿ, ಉದ್ದು, ಹೈಬ್ರಿಡ್ ಜೋಳ, ಅಧಿಕ ಪ್ರಮಾಣದಲ್ಲಿ ಬಿತ್ತಲಾಗಿದೆ. ಸದ್ಯ ಐನಾಪುರ, ಚಂದನಕೇರಾ, ರಾಣಾಪುರ, ಸಾಸರಗಾಂವ, ಕನಕಪುರ, ಚಿಮ್ಮನಚೋಡ, ನಿಡಗುಂದಾ, ಕೆರೊಳ್ಳಿ, ಮಿರಿಯಾಣ, ಸಾಲೇಬೀರನಳ್ಳಿ, ಹಸರಗುಂಡಗಿ, ಐನೋಳಿ, ದೇಗಲಮಡಿ, ಕುಂಚಾವರಂ, ಚಿಮ್ಮಾಇದಲಾಯಿ, ಸುಲೇಪೇಟ್ ಮುಂತಾದ ಪ್ರಮುಖ ಗ್ರಾಮಗಳ ಹೊಲದಲ್ಲಿನ ಹೆಸರು ಹೂ ಬಿಡುವ ಮತ್ತು ಕೆಲವು ಕಡೆಗಳಲ್ಲಿ ಮೊಗ್ಗು ಕಾಯಿ ಕಾಣಿಸಿಕೊಂಡಿವೆ.
ಕೃಷಿ ಕಾರ್ಯಕ್ಕೆ ತೊಂದರೆ: ಹುಲ್ಲು ಕೀಳುವ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ತುಂತುರು ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಭಾರಿ ತೊಂದರೆಯಾಗಿದೆ. ಕೂಲಿ ಕಾರ್ಮಿಕರು ಕೂಲಿ ಕೆಲಸವಿಲ್ಲದೇ ಕುಳಿತುಕೊಳ್ಳಬೇಕಾಗಿದೆ. ಗುರುವಾರ ಚಿಂಚೋಳಿಯಲ್ಲಿ 58 ಮಿಮೀ, ಕುಂಚಾವರಂ-19.2 ಮಿಮೀ, ಐನಾಪುರ-33.4 ಮಿಮೀ,  ಸುಲೇಪೇಟ್- 68 ಮಿಮೀ, ಚಿಮ್ಮನಚೋಡ- 46.2 ಮಿಮೀ, ಕೋಡ್ಲಿ- 46.2 ಮಿಮೀ ಮಳೆಯಾಗಿದೆ.
ಜು.1ರಿಂದ 19ನೇ ತಾರೀಕಿನವರೆಗೆ ತಾಲೂಕಿನ ಎಲ್ಲ 6 ಮಳೆಮಾಪನ ಕೇಂದ್ರದ ವರದಿಯಂತೆ ಚಿಂಚೋಳಿ-187.3 ಮಿಮೀ ಕುಂಚಾವರಂ- 230.4 ಮಿಮೀ, ಐನಾಪುರ- 202.8 ಮಿಮೀ, ಸುಲೇಪೇಟ್-164.2 ಮಿಮೀ, ಚಿಮ್ಮನಚೋಡ- 250.4 ಮಿಮೀ, ಕೋಡ್ಲಿ- 162 ಮಿಮೀ ಮಳೆಯಾಗಿದೆ ಎಂದು  ಚಿಂಚೋಳಿ ಜಲ ಹವಾಮಾನ ಕೇಂದ್ರದ ಕಲಿಕ ಸಹಾಯಕ ಶ್ರೀಮಂತರಾವ ತಿಳಿಸಿದ್ದಾರೆ.
ತಾಲೂಕಿನಲ್ಲಿ ಜಿಟಿ ಜಿಟಿ ಮಳೆಯಿಂದಾಗಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟು, ಸರ್ಕಾರಿ ಕಚೇರಿಗಳಲ್ಲಿ  ಜನರ ಓಡಾಟವಿಲ್ಲದೆ ಕಚೇರಿಗಳು ಬಿಕೋ ಎನ್ನುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.