ಗುಲ್ಬರ್ಗಾ

ಅಪರಾಧ ತಡೆಗೆ ಪೊಲೀಸ್ ಅಧೀಕ್ಷಕರಿಗೆ ಸೂಚನೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.21
ಜಿಲ್ಲೆಯ ಕೆಲವು ತಾಲೂಕುಗಳು, ಗುಲ್ಬರ್ಗ ನಗರ ಹಾಗೂ ಬೀದರ್ ಜಿಲ್ಲೆಯ ತಾಲೂಕುಗಳಲ್ಲಿ ಕೆಲವು ಅಪರಾಧಿಗಳು ಕಳ್ಳತನ ಮಾಡುತ್ತಿದ್ದು, ಪೊಲೀಸ್ ಅಧೀಕ್ಷಕರು ಅವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದು ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮಹ್ಮದ್ ವಜೀರ್ ಅಹ್ಮದ್  ಸೂಚಿಸಿದ್ದಾರೆ.
ಈ ಅಪರಾಧಿಗಳು ಬ್ಯಾಂಕುಗಳ ಹತ್ತಿರ ಕಾದು ಕುಳಿತು, ಗ್ರಾಹಕರು ಬ್ಯಾಂಕಿನಿಂದ ಹಣ ಪಡೆಯುತ್ತಿರುವುದನ್ನು ಗಮನಿಸಿ, ಅವರು ಹೊರಗೆ ಬಂದ ನಂತರ ಹಿಂಬಾಲಿಸುವರು. ಗ್ರಾಹಕರು ತಮ್ಮ ಹಣವನ್ನು ವಾಹನದ ಡಿಕ್ಕಿಯಲ್ಲಿ ಅಥವಾ ಬೇರೆ ವಾಹನದಲ್ಲಿ ಇಟ್ಟು ಯಾವುದೋ ಕೆಲಸದ ಕಡೆ ಗಮನ ಹರಿಸಿದಾಗ ಈ ಅಪರಾಧಿಗಳು ವಾಹನಗಳ ಡಿಕ್ಕಿ ತೆಗೆಯುವುದು ಅಥವಾ ವಾಹನದ ಕಿಟಕಿ ಗಾಜು ಒಡೆದು, ಹಣ ಅಥವಾ ಬೆಳೆಬಾಳುವ ವಸ್ತುಗಳನ್ನು ಕಳವು ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಹಗಲಿನಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ಕೆಲವು ಅಪರಾಧಿಗಳು ಹಗಲು ಮತ್ತು ರಾತ್ರಿ ವೇಳೆಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದಾರೆ. ಇಂಥ ಕಳ್ಳತನ ಪ್ರಕರಣಗಳನ್ನು ಹತೋಟಿಗೆ ತರಲು ಮತ್ತು ಈ ಪ್ರಕರಣ ಎಸಗುವ ಅಪರಾಧಿಗಳ ಪತ್ತೆಗೆ ವಲಯದ ಎಲ್ಲ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಕಾರ್ಯಪ್ರವೃತ್ತರಾನ್ನಾಗಿ ಮಾಡಿ ಗುಲ್ಬರ್ಗ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಪೊಲೀಸ್ ಅಧೀಕ್ಷಕರಿಗೆ  ಸೂಚನೆಗಳನ್ನು ನೀಡಿದ್ದಾರೆ.
ಸೂಚನೆಗಳು: ಪೊಲೀಸ್ ಅಧಿಕಾರಿಗಳು ನಗರ ಮತ್ತು ಪಟ್ಟಣಗಳಲ್ಲಿನ ಬ್ಯಾಂಕ್ ವ್ಯವಸ್ಥಾಪಕರ ಸಭೆ ನಡೆಸಿ, ಗ್ರಾಹಕರ ಮತ್ತು ಸಂಶಯಾಸ್ಪದ ವ್ಯಕ್ತಿಗಳ ಚಲನ ವಲನಗಳನ್ನು ಗಮನಿಸಲು ಗುಣಮಟ್ಟವುಳ್ಳ ಸಿಸಿ ಕ್ಯಾಮರಾವನ್ನು ಬ್ಯಾಂಕ್ ಆವರಣದ ಒಳಗಡೆ ಮತ್ತು ಹೊರಗಡೆ ಅಳವಡಿಸುವಂತೆ ಕ್ರಮ ಕೈಗೊಳ್ಳುವುದು.
ಅಪರಾಧಿಗಳು ಬ್ಯಾಂಕುಗಳ ಹತ್ತಿರ ಅಲೆದಾಡಿ ಅಪರಾಧಗಳು ಎಸಗುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರ ಮತ್ತು ಪಟ್ಟಣಗಳಲ್ಲಿನ ಸರಹದ್ದು ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವುದು. ಪೊಲೀಸ್ ವಾಹನಗಳಿಗೆ ಅಳವಡಿಸಿದ ಪಬ್ಲಿಕ್ ಅಡ್ರೆಸ್ ಸಿಸ್ಟಂ ಮುಖಾಂತರ ಅದರಲ್ಲೂ ಬ್ಯಾಂಕಿನ ವೇಳೆಯಲ್ಲಿ ಈ ಘೋಷಣೆ ಮಾಡುವುದು.
ಬ್ಯಾಂಕುಗಳ ಹತ್ತಿರ ಗಸ್ತು ಮಾಡಿ ಕೆಲವು ಸಿಬ್ಬಂದಿಯನ್ನು ಮಫ್ತಿಯಲ್ಲಿರಿಸಿ ಸಂಶಯಾಸ್ಪದ ಜನರ ಚಲನ ವಲನಗಳನ್ನು ಗಮನಿಸುವುದು.   ಒಂದು ವಿಶೇಷ ತಂಡವನ್ನು ಜಿಲ್ಲಾ ಮಟ್ಟದಲ್ಲಿ ರಚಿಸುವುದು. ಈ ತಂಡದಿಂದ ಜಿಲ್ಲೆಯಲ್ಲಿನ ಲಭ್ಯವಿರುವ ಅಪರಾಧ ದಾಖಲೆಗಳನ್ನು ಅಭ್ಯಸಿಸುವುದು.
ಸರಹದ್ದನ್ನು ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯ ಜಿಲ್ಲೆಗಳಿಗೆ ಅಪರಾಧ ಮತ್ತು ಅಪರಾಧಿಗಳ ಮಾಹಿತಿಗಾಗಿ ಈ ತಂಡವನ್ನು ಕಳುಹಿಸುವುದು.
ಸಾರ್ವಜನಿಕರು ಬ್ಯಾಂಕಿನಿಂದ ಹಣ ಪಡೆಯುವಾಗ ಬ್ಯಾಂಕಿನಿಂದ ಪಡೆದ ಹಣದ ರಕ್ಷಣೆಗಾಗಿ ಕಾಳಜಿ ವಹಿಸುವಂತೆ ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.