ಸಾಂಕ್ರಾಮಿಕ ರೋಗ ಭೀತಿ
ಕನ್ನಡಪ್ರಭ ವಾರ್ತೆ, ಆಳಂದ, ಜು.21
ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಮೂರು ದಿನಗಳಿಂದ ಆರಂಭಗೊಂಡ ಜಡಿ ಮಳೆಯೂ ಕೃಷಿ ಕಾರ್ಯವು ಸ್ಥಗಿತಗೊಂಡಿದ್ದು, ಅಲ್ಲದೆ ಜಾನುವಾರು ಮೇಯಲು ಮತ್ತು ಸಾರ್ವಜನಿಕರ ದಿನಚರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ತಾಲೂಕು ಕೇಂದ್ರ ಆಳಂದ ಪಟ್ಟಣದ ಅಲ್ಲಲ್ಲಿ ಪ್ರಮುಖ ರಸ್ತೆಗಳ ಮೇಲೆ ಕಸದ ರಾಶಿ ಗೋಚರಿಸಿದರೆ, ಮತ್ತೊಂದಡೆ ಚರಂಡಿಗಳು ಸ್ವಚ್ಛಗೊಳ್ಳದೆ ಕೊಳೆಚೆ ನೀರು ತುಂಬಿ ಗಬ್ಬುವಾಸನೆ ಹರಡಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಮಲೇರಿಯಾ, ಟೈಪಾಯಿಡ್ ಸೇರಿದಂತೆ ಸಾಂಕ್ರಾಮಿಕ ರೋಗದ ಭೀತಿ ಶುರವಾಗಿದೆ.
ಸ್ವಚ್ಛತೆಗೆ ಒತ್ತಾಯ: ಪಟ್ಟಣದ ಬಸ್ ನಿಲ್ದಾಣ, ತಹಸೀಲ್ದಾರ್ ಕಚೇರಿ, ಮುಖ್ಯರಸ್ತೆಗಳಲ್ಲಿ ತೆಗ್ಗುಗಳಲ್ಲಿ ಮಳೆನೀರು ನಿಂತು ಜನ ಹಾಗೂ ವಾಹನ ಓಡಾಡಕ್ಕೆ ಪ್ರಯಾಸ ಪಡುವಂತಾಗಿದೆ. ಈ ಕುರಿತು ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಅಲ್ಲಲ್ಲಿನ ಕಸದ ರಾಶಿ ತೆರವುಗೊಳಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಬಿತ್ತನೆಗೆ ಅಡ್ಡಿ: ರಭಸದ ಮಳೆ ಬಾರದೆ ಇಂದಿಗೂ ಹಳ್ಳ-ಕೊಳ್ಳಗಳು ತುಂಬಿ ಹರಿದಿಲ್ಲ. ಆಗಾಗ ಈ ಭಾಗದಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಬಿತ್ತನೆಯಾದ ಮತ್ತು ಬಿತ್ತನೆಯಾಗದ ಹೊಲಗಳಲ್ಲಿ ಹುಲ್ಲು ಬೆಳೆದು ನಿಂತಿದೆ. ಬಿತ್ತನೆಗೆ ಮುಂದಾದ ರೈತರಿಗೆ ಈ ಮಳೆ ಅಡ್ಡಿಯಾಗಿದೆ. ಈಗಾಗಲೇ ಕೆಲ ಭಾಗದಲ್ಲಿ ಬಿತ್ತನೆಯಾದ ಬೆಳೆಗಳು ಹುಲುಸಾಗಿ ಬೆಳೆಯಲು ಮಳೆ ಅನುಕೂಲವಾಗಿಸಿದೆ ಎಂದು ರೈತರು ಹೇಳಿಕೊಂಡಿದ್ದಾರೆ.
ಮಳೆ ವಿವರ: ಜು.18ರಂದು ಆಳಂದ 3.2 ಮಿಮೀ, ಖಜೂರಿ 1.4 ಮಿಮೀ, ನರೋಣಾ 1.0 ಮಿಮೀ, ನಿಂಬರಗಾ 2.0 ಮಿಮೀ, ಮಾದನಹಿಪ್ಪರಗಾ 1.2 ಮಿಮೀ, ಸರಸಂಬಾ 3.0 ಮಿಮೀ, ಕೊರಳ್ಳಿ 2.4 ಮಿಮೀ ಮಳೆಯಾಗಿದೆ.
ಜು.19 ರಂದು ಆಳಂದ ವಲಯದಲ್ಲಿ 11.6 ಮಿಮೀ, ಖಜೂರಿ 16.2 ಮಿಮೀ, ನರೋಣಾ 19.4 ಮಿಮೀ, ನಿಂಬರಗಾ 10.6 ಮಿಮೀ, ಮಾದನಹಿಪ್ಪರಗಾ 6.1 ಮಿ.ಮೀ, ಸರಸಂಬಾ 22.0 ಮಿಮೀ, ಕೊರಳ್ಳಿ 16.2 ಮಿಮೀ ಮಳೆಯಾಗಿದೆ.
ಜು.20ರಂದು ಆಳಂದ ವಲಯದಲ್ಲಿ 19.2 ಮಿಮೀ, ಖಜೂರಿ 18.4 ಮಿಮೀ, ನರೋಣಾ 16.4 ಮಿಮೀ, ನಿಂಬರಗಾ 20.0 ಮಿಮೀ, ಮಾದನಹಿಪ್ಪರಗಾ 10.3 ಮಿಮೀ, ಸರಸಂಬಾ 27.0 ಮಿಮೀ, ಕೊರಳ್ಳಿ 16.4 ಮಿಮೀ ಮಳೆಯಾಗಿದೆ.
ಹಳ್ಳ- ಕೆರೆಗಳಿಗೆ ನೀರಿಲ್ಲ: ತಾಲೂಕಿನ ವಿವಿಧ ಕೆರೆ, ಹಳ್ಳಗಳಿಗೆ ನೀರು ಹರಿದಿಲ್ಲ. ಬೇಸಿಗೆಯಲ್ಲಿ ಬತ್ತಿದೆ ಬಾವಿ ಬೋರ್ವೆಲ್ಗಳು ಜಡಿ ಮಳೆಯಿಂದ ಅಂತರ್ಜಲ ಹೆಚ್ಚುತ್ತಿಲ್ಲ. ಇನ್ನೂ ತೃಪ್ತಿಕರವಾಗಿ ಮಳೆಯಾಗಿ ಕೆರೆ ಗೋ ಕಟ್ಟೆಗಳು ತುಂಬಿ ಹರಿಯಬೇಕು ಎನ್ನುತ್ತಾರೆ ರೈತರು.
ಈಗಾಗಲೇ ಆಳಂದ, ಜಿಡಗಾ ಗ್ರಾಮಕ್ಕೆ ನೀರು ಪೂರೈಸುವ ಮತ್ತು ಮುಂದಿನ ದಿನಗಳಲ್ಲಿ ಕೇಂದ್ರೀಯ ವಿವಿಗೆ ನೀರು ಪೂರೈಸಬೇಕಾಗಿರುವ ಅಮರ್ಜಾ ಅಣೆಕಟ್ಟೆಗೆ ನೀರಿನ ಒಳಹರಿವು ಬಂದಿಲ್ಲ. ಮುಂದೆಯೂ ಮಳೆ ಕೈಕೊಟ್ಟರೆ ಗಂಡಾಂತರ ಎದುರಾಗಲಿದೆ. ಜೋರಾಗಿ ಮಳೆ ಬಂದು ಅಮರ್ಜಾ ಅಣೆಕಟ್ಟೆಯಲ್ಲಿ ನೀರು ತುಂಬಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

