ಗುಲ್ಬರ್ಗಾ

ಚಾಲಕನ ಅಮಾನತು: ಸಾರಿಗೆ ಘಟಕಕ್ಕೆ ಮುತ್ತಿಗೆ

Published On :

ಜೇವರ್ಗಿ:  ಸಾರಿಗೆ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕನ ಅಮಾನತು ಖಂಡಿಸಿ ಕನ್ನಡಪರ ಸಂಘಟನೆಗಳು ಸೋಮವಾರ ಪಟ್ಟಣದ ಹೊರ ವಲಯದಲ್ಲಿರುವ ಸಾರಿಗೆ ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು.
ಸಾರಿಗೆ ಘಟಕದ ಚಾಲಕ ಸ್ಥಳೀಯ ಪೆಟ್ರೋಲ್ ಬಂಕ್‌ನಲ್ಲಿ ಬಸ್‌ಗೆ 158 ಲೀಟರ್ ಇಂಧನ ಹಾಕಿಸಿದರು. ಆದರೆ ಘಟಕದ ಸಿಬ್ಬಂದಿ ಸತ್ಯಪ್ಪ ಪೂಜಾರಿ 160 ಲೀಟರ್ ಇಂಧನದ ರಶೀದಿ ಪಡೆದರು. ಇದಕ್ಕೆ ಚಾಲಕ ಕಾಮಣ್ಣ ಪ್ರತಿರೋಧ ವ್ಯಕ್ತಪಡಿಸಿದರು. ಇದನ್ನೇ ಕಾರಣವಾಗಿಟ್ಟುಕೊಂಡ ಸಿಬ್ಬಂದಿ ಸತ್ಯಪ್ಪ ಘಟಕದ ವ್ಯವಸ್ಥಾಪಕರೊಂದಿಗೆ ಶಾಮೀಲಾಗಿ ಅಮಾಯಕ ಚಾಲಕ ಕಾಮಣ್ಣನನ್ನು ಅಮಾನತು ಮಾಡಲಾಗಿದೆ ಎಂದು ಆರೋಪಿಸಿದರು.
ಅಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹ: ಅಮಾನತು ಸಂದರ್ಭ ಸಾರಿಗೆ ಇಲಾಖೆ ಅಧಿಕಾರಿಗಳು ಆದೇಶ ಪತ್ರದಲ್ಲಿ ಕನ್ನಡಪರ ಸಂಘಟನೆಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಚಾಲಕನನ್ನು ಅಮಾನತು ಮಾಡಲಾಗಿದೆ. ಕೂಡಲೇ ಅಮಾಯಕ ಚಾಲಕನನ್ನು ಮತ್ತೆ ಕರ್ತವ್ಯಕ್ಕೆ ಅಣಿ ಮಾಡಬೇಕು, ಸಂಘಟನೆಗಳ ಹೆಸರು ದುರ್ಬಳಕೆ ಮಾಡಿಕೊಂಡ ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.
ಪ್ರತಿಭಟನೆ ಹಿಂದಕ್ಕೆ: ನಂತರ ಸ್ಥಳಕ್ಕೆ ಆಗಮಿಸಿದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಮಾನತುಗೊಂಡ ಅಮಾಯಕ ಚಾಲಕನನ್ನು ಮತ್ತೆ ಕರ್ತವ್ಯಕ್ಕೆ ಹಾಜರಾಗುವ ಕುರಿತು ಲಿಖಿತ ಪತ್ರ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರಾದ ಶಂಕರಗೌಡ ಹಾಲಗಡ್ಲಾ, ಭಗವಂತರಾಯ ಬೆಣ್ಣೂರ, ಸುಧೀಂದ್ರ ಇಜೇರಿ, ರಾಜಶೇಖರ ಸಿರವಾಳ, ಶಿವಲಿಂಗ ಹಳ್ಳಿ, ವೀರೇಶ ಪಾಟೀಲ್, ಬಸವರಾಜ ಮಾಲಿಪಾಟೀಲ್, ಈರಣ್ಣಗೌಡ ಗುಳ್ಯಾಳ, ಅರುಣಕುಮಾರ ಶಿವಪುರ, ಶರಬು ಕಲ್ಯಾಣಿ, ಸಂತೋಷ ಗುಡುರ್, ಸುರೇಶ ಕುನ್ನೂರ್, ಸಂತೋಷ ಬಾವಿ, ಶರಣು ಕೋಳಕೂರ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.