ಕಬ್ಬಿನ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ
ಅಫಜಲ್ಪುರ: ಪ್ರತಿ ಟನ್ ಕಬ್ಬಿಗೆ 3,500 ಬೆಲೆ ನಿಗದಿ ಸೇರಿದಂತೆ 15 ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ತಾಲೂಕು ಕಬ್ಬು ಬೆಳೆಗಾರರ ರೈತ ಸಂಘ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.
ಸಂಘದ ತಾಲೂಕಾಧ್ಯಕ್ಷ ರಮೇಶ ಹೂಗಾರ ಮಾತನಾಡಿ, ಕಳೆದ ವರ್ಷ ನಾಟಿ ಮಾಡಿದ ಕಬ್ಬು ಮಳೆ ಇಲ್ಲದೆ ಒಣಗುತ್ತಿರುವ ಭೀಮಾ ಅಣೆಕಟ್ಟಿನಿಂದ ನದಿಗೆ ನೀರು ಬಿಡಬೇಕು. ಒಣಗಿದ ಕಬ್ಬಿಗೆ ಪರಿಹಾರ ನೀಡಬೇಕು ಕಬ್ಬು ತೂಕ ಮಾಡುವ ಯಂತ್ರ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು.
ರೇಣುಕಾ ಕಾರ್ಖಾನೆ ಬಳಿ ಕಬ್ಬು ತೂಕ ಮಾಡುವ ಯಂತ್ರ ಸ್ಥಾಪಿಸಿಬೇಕು. ಕಳೆದ ವರ್ಷ ಕಾರ್ಖಾನೆ ನೀಡಿದ ಪ್ರತಿಭಟನೆ ಪ್ರತಿ ಟನ್ ಕಬ್ಬಿಗೆ ಇನ್ನು ಹೆಚ್ಚುವರಿ 1,200 ನೀಡಬೇಕು. ಕಬ್ಬಿಗೆ ರಿಯಾಯಿತಿಯಲ್ಲಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಕಾರ್ಖಾನೆ ಉತ್ಪಾದನೆ ಮಾಡುವ ವಿದ್ಯುತ್ನ್ನು ರೈತರ ಪಂಪ್ಸೆಟ್ಗಳಿಗೆ ನೀಡಬೇಕು, ರೈತರ ಸಭೆ ಕರೆದು ಕೂಡಲೇ ಕಬ್ಬಿಗೆ ಬೆಂಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆಗಳಿಗೆ ಆಗ್ರಹಿಸಿ ತಹಸೀಲ್ದಾರ್ ಶಿವರಂಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತಹಸೀಲ್ದಾರ್ ಶಿವರಂಗಪ್ಪ ಮನವಿ ಸ್ವೀಕರಿಸಿ ಕಾರ್ಖಾನೆ ಆಡಳಿತ ಮಂಡಳಿಯವರನ್ನು ಕರೆಯಿಸಿ ವಿಚಾರಣೆ ಮಾಡಿ ಇನ್ನೂ ಹೆಚ್ಚಿನ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಮನವಿ ಪತ್ರ ಕಳಹಿಸಿಕೊಡುವುದಾಗಿ ಭರವಸೆ ನೀಡಿದರು. ಸಂಘದ ಕಾರ್ಯದರ್ಶಿ ಧರೆಪ್ಪ ಹಾವಳಗಿ, ಗಂಗಾಧರ ಕರಭಂಟನಾಳ, ದರ್ಶನ ಸಾಲೂಟಗಿ, ಅಂಬರೀಶ್ ಮೇತ್ರಿ, ಶಿವಶರಣ ಕೋಗನೂರ, ಮಲ್ಲಯ್ಯ ಹಿರೇಮಠ, ಗುರುಪಾದಯ್ಯ ಮೇಲಿನಮಠ, ಬಸವರಾಜ ಚಾಂದಕವಟೆ, ರಮೇಶ ಶೆಟ್ಟಿ, ಸುರೇಶ ಮಾಲಿಪಾಟೀಲ್ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

