ಗುಲ್ಬರ್ಗಾ

ಪತ್ತುನಾಯಕ ತಾಂಡಾ ಮೃತರ ಕುಟುಂಬಕ್ಕೆ ಪರಿಹಾರ

Published On :

ಗುಲ್ಬರ್ಗ/ಶಹಾಬಾದ್: ಇತ್ತೀಚೆಗೆ ಯಾಗಾಪುರ ಬಳಿಯ ಪತ್ತುನಾಯಕ ತಾಂಡಾದ ಜನ ಪಡಿತರ ಚೀಟಿಗಾಗಿ ಚಿತ್ತಾಪುರಕ್ಕೆ ಬಂದು ಹಿಂತಿರುಗಿ ಹೋಗುತ್ತಿದ್ದಾಗ ಟಂಟಂ ಲಾರಿ ನಡುವೆ ಡಿಕ್ಕಿ ಸಂಭವಿಸಿದರಿಂದ ಏಳು ಜನ ಸ್ಥಳದಲ್ಲಿ ಮೃತಪಟ್ಟವರಲ್ಲಿ ಆರು ಕುಟುಂಬಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ತಲಾ 20 ಸಾವಿರ ತಾತ್ಕಾಲಿಕ ಪರಿಹಾರ ಚೆಕ್ ವಿತರಿಸಿದರು.
ಭಾನುವಾರ ತಾಲೂಕು ತಹಸೀಲ್ದಾರ್ ಮಲ್ಲೇಶಿ ತಂಗಾ ಜೊತೆ ಪತ್ತು ನಾಯಕ ತಾಂಡಾಕ್ಕೆ ಆಗಮಿಸಿದ ಶಾಸಕ ಪ್ರಿಯಾಂಕ್ ಖರ್ಗೆ ಆರು ಕುಟುಂಬಕ್ಕೆ ಚೆಕ್ ವಿತರಿಸಿ, ಮಾತನಾಡಿದರು.
ಸರ್ಕಾರದಿಂದ ಮೃತರ ಕುಟುಂಬಕ್ಕೆ 1.5 ಲಕ್ಷ ಪರಿಹಾರ ನೀಡುತ್ತಿದ್ದು, ಅದನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ. ತಂದೆ ತಾಯಿ ಮೃತ ಪಟ್ಟು ಅನಾಥವಾದ ಮಗುವಿನ ಶಿಕ್ಷಣಕ್ಕೆ ಸರ್ಕಾರದ ವತಿಯಿಂದ ಅವಶ್ಯಕ ಸಹಕಾರ ನೀಡಲಾಗುವುದು ಎಂದು ಹೇಳಿದರು. ಮೃತರು ಕಡು ಬಡವರಾಗಿದ್ದು, ಅವರಿಗೆ ಯಾವುದೇ ಸ್ವಂತ ಜಮೀನು ಇಲ್ಲದೆ ಇದ್ದು, ಅಂಥ ದಾಖಲೆಗಳನ್ನು ತೋರಿಸಿದರೆ ಅಂಥವರ ಕುಟುಂಬಕ್ಕೆ 2 ಎಕರೆ ಭೂಮಿಯನ್ನು ಮಂಜೂರು ಮಾಡಲಾಗುವುದು ಎಂದು ಹೇಳಿದರು.
ರಾಜಕೀಯ ಬೇಡ: ಮೃತ ಕುಟುಂಬ ಬೀದಿ ಪಾಲಾಗುವುದನ್ನು ತಪ್ಪಿಸಲು ಅವಶ್ಯಕ ಚಿಂತನೆ ಮಾಡಬೇಕಾಗಿದೆ. ಸತ್ತವರ ಶವದ ಮೇಲೆ ರಾಜಕೀಯ ಮಾಡುವುದು ಬೇಡ ಎಂದು ಪರೋಕ್ಷವಾಗಿ ಮಾಜಿ ಶಾಸಕ ವಾಲ್ಮೀಕಿ ನಾಯಕ ವಿರುದ್ಧ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.