5750 ಮನೆ ಹಂಚಿಕೆ ಮಾಹಿತಿಇಲ್ಲ: ಬೆನಕನಹಳ್ಳಿ
ಅಫಜಲ್ಪುರ: ಶಾಸಕ ಮಾಲೀಕಯ್ಯ ಗುತ್ತೇದಾರ್ ಮಾರ್ಚ್ ತಿಂಗಳಲ್ಲಿ ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮದಿಂದ 5750 ಮನೆಗಳು ಹಂಚಿಕೆ ಮಾಡಿದ ಬಗ್ಗೆ ತಾಪಂ ಸದಸ್ಯರಿಗೆ ಯಾವುದೇ ಮಾಹಿತಿಯಿಲ್ಲ ಎಂದು ತಾಪಂ ಸದಸ್ಯ ಸಾ.ಸಿ. ಬೆನಕನಹಳ್ಳಿ ತಕರಾರು ಮಾಡಿದರು.
ಅದಕ್ಕೆ ತಾಪಂ ಸದಸ್ಯ ಶಿವಪುತ್ರಪ್ಪ ಗೌಡಗಾಂವ ಮಾತನಾಡಿ, ಶಾಸಕರು ತಾಪಂ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ ಎಂದು ವಾದ ಮಾಡಿದ ಘಟನೆ ತಾಪಂ ಸಾಮಾನ್ಯ ಸಭೆಯಲ್ಲಿ ಜರುಗಿತು.
ಶಾಸಕರು ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಗುಡಿಸಲು ಮನೆಗಳಿಗೆ ಭೇಟಿ ನೀಡಿ ಸ್ಥಳದಲ್ಲಿಯೇ ಯಾದಿ ತಯಾರಿಸಿ ಮನೆ ಮಂಜೂರು ಮಾಡಿದ್ದಾರೆ. ಪ್ರಾಮಾಣಿಕವಾಗಿ ಮನೆ ವಿತರಣೆ ಮಾಡಲಾಗಿದೆ ಎಂದು ಶಿವಪುತ್ರಪ್ಪ ಗೌಡಗಾಂವ ತಿಳಿಸಿದರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ತಾಪಂ ಸದಸ್ಯ ಸಾ.ಸಿ. ಬೇನಕನಹಳ್ಳಿ, ಶಾಸಕರು ಮನೆ ಹಂಚಿಕೆ ಮಾಡಿರುವ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ. ಆದರೆ, ಯಾವ ಗ್ರಾಮದಲ್ಲಿ ಎಷ್ಟು ಮನೆಗಳನ್ನು ಹಂಚಿಕೆ ಮಾಡಿದ್ದಾರೆ, ಫಲಾನುಭವಿಗಳ ಯಾದಿ ನಮಗೆ ತಲುಪಿಲ್ಲ ಎಂದರು.
ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮದ ವಿಭಾಗ ನೋಡಿಕೊಳ್ಳುತ್ತಿರುವ ತಾಪಂ ಸಿಬ್ಬಂದಿ ದಿಗಂಬರ ಅವರು, ಶಾಸಕರು 20 ಗ್ರಾಮಗಳಿಗೆ ಸುಮಾರು 5750 ಮನೆ ಹಂಚಿಕೆ ಮಾಡಿದ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಶಾಸಕರು ಮನೆ ಹಂಚಿಕೆ ಮಾಡುವಾಗ ಆ ಭಾಗದ ಜಿಪಂ, ತಾಪಂ ಸದಸ್ಯರು ಜತೆಯಲ್ಲಿಯೆ ಇದ್ದರು. ಹೀಗಾಗಿ ಮನೆ ಹಂಚಿಕೆಯಲ್ಲಿ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಾಪಂ ಸಿಬ್ಬಂದಿ ದಿಗಂಬರ ಸಭೆಯ ಗಮನಕ್ಕೆ ತಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

