ಪರಿಸರ ಸಂರಕ್ಷಣೆ ಎಲ್ಲರ ಹೊಣೆ: ನ್ಯಾ. ಬಡಿಗೇರ
ಕನ್ನಡಪ್ರಭ ವಾರ್ತೆ ಆಳಂದ ಜೂ.6
ಕಲುಷಿತಗೊಳ್ಳುತ್ತಿರುವ ನಿಸರ್ಗದ ವಾತಾವರಣವನ್ನು ಸಮತೋಲನ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಭು ಎನ್.ಬಡಗೇರ ಹೇಳಿದರು.
ಪಟ್ಟಣದ ಕೋರ್ಟ್ ಆವರಣದಲ್ಲಿ ಬುಧವಾರ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯ ಹಾಗೂ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿಗೆ ನೀರುಣಿಸಿದ ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಡೆ ಪರಿಸರ ಗದಗೆಡುತ್ತಿದೆ. ಶುದ್ಧವಾದ ಕುಡಿಯಲು ನೀರು ಗಾಳಿ ಇಲ್ಲವಾಗಿದೆ. ಇದರಿಂದ ಮಾನವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮದಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ನಿಸರ್ಗದಿಂದ ಏನೆಲ್ಲವನ್ನು ಪಡೆಯುವ ನಾವು ಅದಕ್ಕಾಗಿ ಮರಳಿ ಕೊಡುಗೆ ನೀಡಲು ಗಿಡ, ಮರಗಳನ್ನು ಬೆಳೆಸಿ ಉತ್ತಮ ಪರಿಸರ ಕಾಪಾಡಲು ಮುಂದಾಗಬೇಕೆಂದು ಕರೆ ನೀಡಿದರು.
ನ್ಯಾಯವಾದಿ ದೇವಾನಂದ ಹೋದಲರಕರ್ ಮತ್ತು ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ನಾಗೇಶ ರೆಡ್ಡಿ ಮಾತನಾಡಿದರು. ಸಾಮಾಜಿಕ ಅರಣ್ಯ ಅಧಿಕಾರಿ ಮೊಹಮದ್ ಅಲಿ, ಪ್ರಾದೇಶಿಕ ಅರಣ್ಯ ಸಹಾಯಕ ಅಧಿಕಾರಿ ಹಣಮಂತ ಮೇಲ್ಕೇರಿ, ಶಿವಪ್ಪ ಭೂಸನೂರ, ನ್ಯಾಯವಾದಿ ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾಮಿರಾವ ಚನ್ನಿಗುಂಡ, ಡಿ.ಎಸ್. ನಾಡಕರ್, ಎಚ್.ಎಂ. ಪಟೇಲ್, ಎ.ಸಿ. ತೋಳೆ, ಬಿ.ಜಿ. ಬೀಳಗಿ, ಮಹಾದೇವ ಹತ್ತಿ, ಕೆ. ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಶಿವಶಂಕರ ಮುನ್ನಹಳ್ಳಿ ನಿರೂಪಿಸಿದರು. ಬಿ.ಟಿ. ಶಿಂಧೆ ವಂದಿಸಿದರು.
ಚಿಣ್ಣರಿಂದ ಸಸಿ ನೆಟ್ಟು ಪರಿಸರ ದಿನಾಚರಣೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ನ ಚವ್ಹಾಣ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗಮ್ಮ ಚೆನ್ನಪ್ಪ ಇಂಗಿನಶೆಟ್ಟಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದಿನವನ್ನು ಚಿಣ್ಣರು ಸಸಿಗಳನ್ನು ನೆಟ್ಟು ಆಚರಿಸಿದರು. ಶಾಲಾ ಆವರಣದಲ್ಲಿ ಮಕ್ಕಳಾದ ರಾಘವೇಂದ್ರ, ಕೀರ್ತಿ, ಅಂಬರೀಶ ಸಸಿ ನೆಟ್ಟರು. ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಈರಣ್ಣ ಹಳ್ಳಿ ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲೇ ಪರಿಸರದ ಬಗ್ಗೆ ಆಸಕ್ತಿ ಮೂಡಿಸಬೇಕು. ಅಭಿವೃದ್ಧಿಯ ಹೆಸರಲ್ಲಿ ಗಿಡಗಳ ಮಾರಣ ಹೋಮ ಬೇಡ ಎಂದರು. ನಗರಸಭೆ ಮಾಜಿ ಸದಸ್ಯ ಸಾಹೇಬಗೌಡ ಬೋಗುಂಡಿ, ಭಂಕೂರ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಕಾಂತ ಮಾಚನೂರ, ಶರಣಗೌಡ ಪಾಟೀಲ್, ಮುಖ್ಯಗುರು ಮಮತಾ ವಾಲಿ, ಶಿಕ್ಷಕಿ ಶೋಭಾ ಹೆಬ್ಬಾಳ, ಸಂಸ್ಥೆಯ ನಿರ್ದೇಶಕ ವಾಸುದೇವ ಚವ್ಹಾಣ, ಮರಲಿಂಗ ಯಾದಗಿರಿ ಹಾಗೂ ಪಾಲಕರು ಪಾಲ್ಗೊಂಡಿದ್ದರು. ನಂತರ ಬಡಾವಣೆಯಲ್ಲಿ ಮಕ್ಕಳಿಂದ ಪರಿಸರ ಜಾಥಾ ನಡೆಯಿತು.
ವನ್ಯಜೀವಿ ಅಳಿವಿಗೆ ಹಸಿರು ನಾಶ ಕಾರಣ
ಗುಲ್ಬರ್ಗ: ದೇಶದ ವನ್ಯ ಸಂಪತ್ತು ನಶಿಸಿ ಹೋಗಲು ಗಿಡ-ಮರಗಳ ನಾಶವೇ ಕಾರಣ ಎಂದು ವಿಶ್ವ ಸೇವಾ ಮಿಷನ್ ಸಂಸ್ಥೆ ವಿಶ್ವನಾಥ ಸ್ವಾಮೀಜಿ ತಿಳಿಸಿದರು.
ನಗರದ ಪ್ರೇರಣಾ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ವಿಶ್ವ ಸೇವಾ ಮಿಷನ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಡೈನಾಸರ್, ನವಿಲು, ಮಂಗಗಳಂತಹ ಪ್ರಾಣಿ ಪ್ರಬೇಧಗಳು ಇಂದು ನೋಡಲು ಸಿಗದೆ ಮಕ್ಕಳಿಗೆ ಕೇವಲ ಚಿತ್ರದಲ್ಲಿ ತೋರಿಸುವ ಪರಿಸ್ಥಿತಿ ಬಂದಿದೆ. ಇದಕ್ಕೆ ಮುಖ್ಯ ಕಾರಣ ತೀವ್ರಗತಿಯಲ್ಲಿ ನಡೆಯುತ್ತಿರುವ ಗಿಡ-ಮರಗಳ ನಾಶ ಎಂದರು.
ಶಾಲೆಯ ಮುಖ್ಯಗುರುಗಳಾದ ಪಂಚಾಕ್ಷರಿ ಎಚ್. ಎಡ್ಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಜಯಕುಮಾರ ಬಾಬಾ ಉಪಸ್ಥಿತರಿದ್ದರು. ನಿವೇದಿತ ಮತ್ತು ಸಂಗಡಿಗರು ಪ್ರಾಥಿಸಿದರು. ಅಂಬರೀಶ ಇಟಗಿಕರ್ ನಿರೂಪಿಸಿದರು.
20 ಸಾವಿರ ಸಸಿಗಳ ನೆಡಲು ಎಸಿಸಿ ಯೋಜನೆ
ಗುಲ್ಬರ್ಗ/ಶಹಾಬಾದ್: ತ್ಯಾಜ್ಯ ವಸ್ತುಗಳನ್ನು ಬಳಸಿ, ಹೊರಹೊಮ್ಮುವ ನೀರನ್ನು ಸಂರಕ್ಷಣಾ ಘಟಕದ ಮುಖಾಂತರ ಶುದ್ದೀಕರಿಸಿ ಕಾರ್ಖಾನೆಯ ಒಳಗೆ, ಸುತ್ತಲಿನ ಪ್ರದೇಶದಲ್ಲಿ ಗಿಡಮರಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಎಸಿಸಿ ಘಟಕ ನಿರ್ದೇಶಕ ಡಾ.ಎಸ್. ಬಿ. ಸಿಂಗ್ ಹೇಳಿದರು.
ಎಸಿಸಿ ಕಾರ್ಖಾನೆಯ ಮುಖ್ಯದ್ವಾರದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಎಫ್ಆರ್ ಹೆಸರಿನಲ್ಲಿ ತ್ಯಾಜ್ಯ ವಸ್ತುಗಳನ್ನು ಸಂಪೂರ್ಣವಾಗಿ ಬಳಸಿ ಹೊರಹೊಮ್ಮುವ ನೀರನ್ನು ಸಂರಕ್ಷಣಾ ಘಟಕದ ಮುಖಾಂತರ ಶುದ್ಧೀಕರಿಸಿ ಕಂಪನಿಯ ಒಳಗೆ, ಸುತ್ತಲಿನ ಪ್ರದೇಶದಲ್ಲಿ ಗಿಡಮರಗಳನ್ನು ಬೆಳೆಸುವುದಕ್ಕೆ ಪುನರ್ಬಳಕೆ ಮಾಡಲಾಗುತ್ತಿದೆ ಎಂದರು. ಎಚ್ಆರ್ ಮುಖ್ಯಸ್ಥ ಬಿ.ಡಿ.ದಲೇರ್ ಮಾತನಾಡಿದರು. ಎಸಿಸಿ ಪರಿಸರ ಮುಖ್ಯಸ್ಥ ಜಿ.ಎನ್.ರಮೇಶ, ಕಾರ್ಖಾನೆ ಕಾರ್ಮಿಕ ಸಂಘದ ಮುಖಂಡ ರಮೇಶ ಕಾರಬಾರಿ, ಠಾಕೂರಸಿಂಗ್ ಸೇರಿದಂತೆ ಆಡಳಿತ ವರ್ಗ ಒಂದು ಸಾವಿರ ಕಾರ್ಮಿಕರು ಪರಿಸರ ರಕ್ಷಣೆಯ ಪ್ರತಿಜ್ಞೆ ಮಾಡಿದರು.
ಪರಿಸರ ಮಾಲಿನ್ಯದಿಂದ ಆರೋಗ್ಯಕ್ಕೆ ಹಾನಿ
ಗುಲ್ಬರ್ಗ: ಪರಿಸರ ಮತ್ತು ಮಾನವ ಪರಸ್ಪರ ಅವಲಂಬಿತವಾಗಿದ್ದು, ಆಧುನಿಕತೆ ಮತ್ತು ವೈಜ್ಞಾನಿಕತೆಯ ಜಾಡಿನಲ್ಲಿ ಗ್ರಾಮೀಣ ಪ್ರದೇಶಗಳು ಸಹ ಪರಿಸರ ಮಾಲಿನ್ಯಕ್ಕೆ ಒಳಗಾಗುತ್ತಿವೆ. ಜಲ, ವಾಯು, ಮಣ್ಣು, ಆಹಾರ ಎಲ್ಲವೂ ಕಲುಷಿತಗೊಳ್ಳುತ್ತಿವೆ. ಇದು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಬನಶಂಕರಯ್ಯ ಹಿರೇಮಠ ಹೇಳಿದರು. ಅವರು ಐಆರ್ಆರ್ಎಸ್ ಹಾಗೂ ಜನಮಾರ್ಗ ಸಂಸ್ಥೆಗಳ ಅಡಿಯಲ್ಲಿ ಶರಣಸಿರಸಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಶಿವಶರಣಪ್ಪ ಕಣ್ಣಿ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಉದ್ಘಾಟಿಸಿದರು. ಸಹ ಶಿಕ್ಷಕಿ ವಿಜಯಲಕ್ಷ್ಮೀ ಹಾಗೂ ಜನಮಾರ್ಗ ಸಂಸ್ಥೆಯ ಉಪಾಧ್ಯಕ್ಷ ವಿಜಯಲಕ್ಷೀ ನಾಟೀಕಾರ್ ಅತಿಥಿಗಳಾಗಿ ಆಗಮಿಸಿದ್ದರು.
ಮುಖ್ಯಗುರು ದಾನಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಭಾಷ ಜಮಾದಾರ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಸ್ವಾಗತಿಸಿದರು. ಸಾಗರ ವಂದಿಸಿದರು.
ಪರಿಸರ ಸಂರಕ್ಷಣೆಗೆ ಮರ ಅಗತ್ಯ
ಜೇವರ್ಗಿ: ಪರಿಸರದ ಸಮತೋಲನ ಕಾಪಾಡಲು ಮರಗಳು ಅಗತ್ಯ. ಆ ನಿಟ್ಟಿನಲ್ಲಿ ಯುವಕರು ಸಸಿಗಳನ್ನು ನೆಡುವುದರ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕೆಂದು ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಅಭಿಪ್ರಾಯಪಟ್ಟರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಲಯ ಅರಣ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಬಸಣ್ಣ, ಬಸವರಾಜ ಕಂದಗಲ್, ವಲಯ ಅರಣ್ಯಾಧಿಕಾರಿ ಮುನೀರ್ ಅಹ್ಮದ್, ಸಂತೋಷಕುಮಾರ, ಪ್ರಾಣೇಶ ಕುಲಕರ್ಣಿ, ಸಿದ್ದು ಯಂಕಂಚಿ, ಭೀಮಾಶಂಕರ ಬಸವಪಟ್ಟಣ, ಶಾಂತಗೌಡ ಪಾಟೀಲ್ ನರಿಬೋಳ, ಕೆಂಚಪ್ಪಗೌಡ ಬಿರಾದಾರ, ಯಶ್ವಂತರಾಯ, ಗುರು ಬಳಬಟ್ಟಿ, ರಾಮನಾಥ ಭಂಡಾರಿ, ಬಾಗಣ್ಣ ಕೋರಿ,ಎಂ.ಐ. ಸೂಗುರ ಪಾಲ್ಗೊಂಡಿದ್ದರು. ರಾಜಶೇಖರ ಸ್ವಾಗತಿಸಿದರು. ಅಪ್ಪಾಸಾಬ್ ನಿರೂಪಿಸಿದರು. ಪಾಟೀಲ್ ವಂದಿಸಿದರು.
ಅಪ್ಪಾಜಿ ಗುರುಕುಲದಲ್ಲಿ ಪರಿಸರ ದಿನಾಚರಣೆ
ಗುಲ್ಬರ್ಗ: ನಗರದ ಉದನೂರು ರಸ್ತೆಯಲ್ಲಿರುವ ಅಪ್ಪಾಜಿ ಗುರುಕುಲ ಶಾಲೆಯಲ್ಲಿ ಹಮ್ಮಿಕೊಂಡ ಪರಿಸರ ದಿನಾಚರಣೆಯನ್ನು ಶಾಲೆ ಎಚ್ಒಡಿ ಸಿದ್ದುಕಣ್ಣಿ ಸಸಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕಿ ಶಿವಲೀಲಾ, ವಿಜಯಲಕ್ಷ್ಮೀ, ಶೀಲಾ ಸಹಾಯಕ ಮುಖ್ಯ ಗುರು ಮನೋಹರ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

