13ರಿಂದ ಮಹಿಳೆಯರಿಗೆ ಉದ್ಯಮಶೀಲತಾ ಕಾರ್ಯಕ್ರಮ
ಗುಲ್ಬರ್ಗ: ಬೆಂಗಳೂರಿನ ಅವೇಕ ಸಂಸ್ಥೆಯ ನಿರ್ದೇಶನಾಲಯವು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮತ್ತು ಗುಲ್ಬರ್ಗದ ಕೈಗಾರಿಕಾ ಕೇಂದ್ರಗಳ ಪ್ರಾಯೋಜಿಕತ್ವದಲ್ಲಿ ಸ್ವಂತ ಉದ್ಯಮ ಪ್ರಾರಂಭ ಮಾಡಲು ಬಯಸುವ ಮಹಿಳೆಯರಿಗೆ 2 ವಾರಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಜೂನ್ 13ರಿಂದ 26ರವರೆಗೆ ಜೇವರ್ಗಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜೂನ್ 12ರಂದು ಉದ್ಯಮ ಶೀಲತಾ ಜಾಗೃತಿ ಶಿಬಿರ ಹಾಗೂ ಸೂಕ್ತ ಅಭ್ಯರ್ಥಿಗಳ ಆಯ್ಕೆ ಕಾರ್ಯಕ್ರಮವು ಜೇವರ್ಗಿ ತಾಲೂಕಿನ ಲೋಕ ಶಿಕ್ಷಣ ಸಮಿತಿ ತಾಪಂ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ 30 ಮಹಿಳೆಯರು ಮಾತ್ರ ಭಾಗವಹಿಸುವ ಅವಕಾಶ ಹೊಂದಿದ್ದು, ಈ ತರಬೇತಿಯಲ್ಲಿ ಸೂಕ್ತ ಉದ್ದಿಮೆಯ ಆಯ್ಕೆ, ಮಾರುಕಟ್ಟೆ, ಪ್ಯಾಕೇಜಿಂಗ್, ಸ್ವ ಸಾಮರ್ಥ್ಯ ವಿಶ್ಲೇಷಣೆ, ಲೆಕ್ಕಪತ್ರ, ಲೈಸನ್ಸ್, ವ್ಯಾಟ್, ಪೇಟೆಂಟ್, ಟ್ರೇಡ್ ಮಾರ್ಕ್, ಪುಸ್ತಕ ಬರೆಯುವುದು, ಮಾರುಕಟ್ಟೆ ಅನುಭವ, ಬ್ಯಾಂಕಿಂಗ್ ಹಾಗೂ ಸಾಲ ಸೌಲಭ್ಯ, ವಿವಿಧ ಸ್ಕೀಮ್ಗಳ ಮಾಹಿತಿ, ಯೋಜನಾ ವರದಿ ತಯಾರಿಕೆ, ಕೈಗಾರಿಕಾ ಕೇಂದ್ರ ಅಧಿಕಾರಿ ಜತೆ ಚರ್ಚೆ, ಕೈಗಾರಿಕಾ ಘಟಕಗಳ ಭೇಟಿ ಇನ್ನೂ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು.
ಹೆಚ್ಚಿನ ವಿವರಕ್ಕೆ ಹಾಗೂ ಅರ್ಜಿ ನಮೂನೆಗಾಗಿ ಸದಾಶಿವ, ತರಬೇತಿ ಸಂಯೋಜನಾಧಿಕಾರಿ, ದೂರವಾಣಿ ಸಂಖ್ಯೆ 9880041360 ಹಾಗೂ ಬಸವರಾಜ ಮೊಬೈಲ್ ಸಂ. 94481 70407ಗೆ ಸಂಪರ್ಕಿಸಬಹುದು. ಜೂ. 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

