ನುಡಿದಂತೆ ನಡೆದವರು ವಿಶ್ವಗುರು ಬಸವಣ್ಣ: ಶಾಸಕ
ಕನ್ನಡಪ್ರಭ ವಾರ್ತೆ ಜೇವರ್ಗಿ ಜೂ.7
12ನೇ ಶತಮಾನದ ಬಸವಾದಿ ಶರಣರು ನುಡಿದಂತೆ ನಡೆದು ಜಗತ್ತಿಗೆ ಆದರ್ಶ ಪ್ರಾಯರಾದರು. ಅದರಲ್ಲಿ ವಿಶ್ವಗುರು ಅಣ್ಣ ಬಸವಣ್ಣನವರು ಕೂಡ ಒಬ್ಬರು ಎಂದು ನೂತನ ಶಾಸಕ ಡಾ. ಅಜಯಸಿಂಗ್ ಹೇಳಿದರು.
ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಸವ ಕೇಂದ್ರ ತಾಲೂಕು ಘಟಕ ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬಸವಣ್ಣನವರ ವಚನಗಳು ಪ್ರತಿಯೊಬ್ಬರ ಮನೆ ಮನ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮನೆಯಲ್ಲಿ ಮಹಾಮನೆ, ಶರಣ ಸಂಗಮದಂತಹ ಕಾರ್ಯಕ್ರಮಗಳ ಮೂಲಕ ಮತ್ತೆ ಬಸವಾದಿ ಶರಣರ ವಿಚಾರಧಾರೆ ಮೆಲುಕು ಹಾಕುವಂತ ಕಾರ್ಯ ನಿರಂತರ ನಡೆಯುತ್ತಿರಬೇಕು ಎಂದರು.
ಜಾತಿ ಭೇದ ಮಾಡಲಿಲ್ಲ: ಬೀದರ್ನ ಬಸವ ಸೇವಾ ಪ್ರತಿಷ್ಠಾನದ ಡಾ. ನೀಲಾಂಬಿಕಾ ಪಾಟೀಲ್ ಉಪನ್ಯಾಸ ನೀಡಿ, ದೇವಾಲಯ ಸಂಸ್ಕೃತಿಯನ್ನು ಹೋಗಲಾಡಿಸಿ ದೇಹವೇ ದೇವಾಲಯ, ಲಿಂಗವೇ ದೇವರೆಂದು ತೋರಿಸಿಕೊಟ್ಟವರು ಬಸವಣ್ಣನವರು. ಬಸವಣ್ಣ ಎಂದೂ ಜಾತಿ ಭೇದ ಮಾಡಲಿಲ್ಲ. ದೀನ, ದಲಿತರಿಗೆ ಹಾಗೂ ಕೆಳ ವರ್ಗದ ಜನರ ಬಳಿಗೆ ಹೋಗಿ ಅವರ ಮನೆಯಲ್ಲಿ ಪ್ರಸಾದವನ್ನು ಮಾಡಿ ಇಷ್ಟಲಿಂಗದ ಪರಿಕಲ್ಪನೆ ತಿಳಿಸಿ ಅವರಿಗೆ ಇಷ್ಟಲಿಂಗದ ದೀಕ್ಷೆಯನ್ನು ನೀಡಿದರು. ಇಂತಹ ಮಹಾಪುರುಷರ ತತ್ವಾದರ್ಶಗಳು ಸರ್ವಕಾಲಿಕ ಶ್ರೇಷ್ಟವಾಗಿವೆ ಎಂದರು.
ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ನಾಟಕಕಾರ ಎಲ್.ಬಿ.ಕೆ. ಆಲ್ದಾಳ ಅವರನ್ನು ಸನ್ಮಾನಿಸಲಾಯಿತು.
ವೀರಣ್ಣ ಭೂತಪುರ ಕಾರ್ಯಕ್ರಮದ ದಾಸೋಹಿಗಳಾಗಿ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಷಣ್ಮುಖಪ ಹೀರೆಗೌಡ, ಸೋಮಣ್ಣ ಕಲ್ಲಾ, ಶಿವಣಗೌಡ ಹಂಗರಗಿ, ತಿಪ್ಣಣ್ಣ ಭೂತಪುರ, ವಿಜಯಕುಮಾರ ಪಾಟೀಲ್ ನೆಲೋಗಿ, ಶಾಂತಗೌಡ ಪೊಲೀಸ್ ಪಾಟೀಲ್, ಸದಾನಂದ ಪಾಟೀಲ್, ರಾಜು ಮಂದ್ರವಾಡ, ರಾಮಣ್ಣ ಮಾಸ್ತರ ಹೂಗಾರ, ಶಿವುಕುಮಾರ ದೇವತ್ಕಲ್, ಬಸವರಾಜ ಕಲ್ಲಾ, ಹುಸೇನಭಾಷಾ ಮುರಗಾನೂರ, ವೀರೇಶ ಕಂದಗಲ್, ರಾಮಣ್ಣ ತೊನ್ಸಳ್ಳಿಕರ್, ನಿಂಗಣ್ಣ ಹಳಿಮನಿ, ವಿಶ್ವನಾಥ ರೆಡ್ಡಿ ರಾಜಳ್ಳಿ ಸೇರಿದಂತೆ ನೂರಾರು ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶಿವಶರಣಪ್ಪ ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹೂಗಾರ ವಚನಗಾಯನ ನಡೆಸಿಕೊಟ್ಟರು. ಸಂಗಣ್ಣಗೌಡ ಗುಳ್ಯಾಳ ಸ್ವಾಗತಿಸಿದರು. ಗುರುಶಾಂತಪ್ಪ ಚಿಂಚೋಳಿ ನಿರೂಪಿಸಿದರು. ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

