ಸುದ್ದಿ ಸಂಕ್ಷೇಪ
ರೈತ ಸಂಪರ್ಕ ಕೇಂದ್ರ ಮೂಲಕ ಬಿತ್ತನೆ ಬೀಜ
ಯಾದಗಿರಿ: ಕೃಷಿ ಇಲಾಖೆ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ. ರೈತ ಬಾಂಧವರು ತೊಗರಿ, ಸಜ್ಜೆ, ಹೆಸರು, ಸೂರ್ಯಕಾಂತಿ, ಮುಸುಕಿನ ಜೋಳ, ಮುಂಗಾರಿನ ಜೋಳ, ಉದ್ದಿನ ಬೀಜಗಳನ್ನು ರಿಯಾಯತಿ ದರದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದಾಗಿದೆ. ಜೋಳ, ಸಂಕರಣ, ಪ್ರಮಾಣಿತ ರಿಯಾಯಿತಿ ದರ ಪ್ರತಿ ಕೆಜಿಗೆ 25 ಇದೆ. ನಿಜ ಚೀಟಿ 24. ತೊಗರಿ, ಸಾರ್ವಜನಿಕ ತಳಿ, ಪ್ರಮಾಣಿತ ರಿಯಾಯಿತಿ ದರ ಪ್ರತಿ ಕೆಜಿಗೆ 20. ನಿಜ ಚೀಟಿ 19. ಉದ್ದು, ಸಾರ್ವಜನಿಕ ತಳಿ ಪ್ರಮಾಣಿತ ರಿಯಾಯಿತಿ ದರ ಪ್ರತಿ ಕೆಜಿಗೆ 20. ನಿಜ ಚೀಟಿ 19. ಹೆಸರು, ಸಾರ್ವಜನಿಕ ತಳಿ ಪ್ರಮಾಣಿತ ರಿಯಾಯಿತಿ ದರ ಪ್ರತಿ ಕೆಜಿಗೆ 20, ನಿಜಚೀಟಿ 19 ಇದೆ. ಸಜ್ಜೆ, ಸಾರ್ವಜನಿಕ ತಳಿ ಸಂಕರಣ ಪ್ರಮಾಣಿತ ರಿಯಾಯಿತಿ ದರ ಪ್ರತಿ ಕೆಜಿಗೆ 14 ಇದೆ. ನಿಜಚೀಟಿ 25 ಇದೆ. ಸೂರ್ಯಕಾಂತಿ, ಸಂಕರಣ ಪ್ರಮಾಣಿತ ಮತ್ತು ನಿಜಚೀಟಿ ರಿಯಾಯಿತಿ ದರ 80 ಇದೆ. ಮೆಕ್ಕೆಜೋಳ, ಸಂಕರಣ ಪ್ರಮಾಣಿತ, ಮತ್ತು ನಿಜಚೀಟಿ ರಿಯಾಯಿತಿ ದರ 35 ಇದೆ. ಅದೇ ರೀತಿ ರೈತ ಬಾಂಧವರು ಬೀಜಗಳನ್ನು ಖಾಸಗಿ ಮಳಿಗೆಗಳಲ್ಲಿ ಖರೀದಿಸುವಾಗ ಅಧಿಕೃತ ಮಾರಾಟಗಾರರಿಂದ ಖರೀದಿಸಬೇಕು. ಕಡ್ಡಾಯವಾಗಿ ರಸೀದಿ ಪಡೆಯಬೇಕು. ಅದನ್ನು ಬೆಳೆ ಕಟಾವು ಆಗುವವರೆಗೆ ಕಾಯ್ದಿರಿಸಬೇಕು. ಯಾರೇ ಅಗಲಿ ಅಧಿಕೃತ ಪರವಾನಗಿ ಇಲ್ಲದೆ ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಾಗಲಿ ಕಂಡು ಬಂದಲ್ಲಿ ಕೂಡಲೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರು ಗಮನಕ್ಕೆ ತರಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಪಂ ಸಾಮಾನ್ಯ ಸಭೆ ಮುಂದೂಡಿಕೆ
ಸುರಪುರ: ಇಲ್ಲಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜೂ.11ರಂದು ಬೆಳಗ್ಗೆ 11 ಗಂಟೆಗೆ ತಾಪಂ ಅಧ್ಯಕ್ಷೆ ಸಾಬಮ್ಮ ದೇಸಾಯಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆಯಲಾಗಿದೆ. ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ, 13ನೇ ಹಣಕಾಸು, ಬಿಆರ್ಜಿಎಫ್, ಅಧಿಭಾರ ಶುಲ್ಕ, ಅನಿರ್ಬಂಧಿತ ಅನುದಾನ ಮತ್ತು ಎಸ್ಸಿ, ಎಸ್ಟಿ ಯೋಜನೆಗಳ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆ ಮತ್ತು ಅನುಮೋದನೆ ಅಧ್ಯಕ್ಷರ ಅಪ್ಪಣೆ ಮೇರೆಗೆ ನೀಡಲಾಗುವುದು ಎಂದು ತಾಪಂ ಇಒ ಪ್ಯಾರೆ ಮಹ್ಮದ ಕುತುಬುದ್ದೀನ್ ತಿಳಿಸಿದ್ದಾರೆ.
ಪದವಿ ಕಾಲೇಜಿಗೆ ಪ್ರವೇಶ ಪ್ರಾರಂಭ
ಸುರಪುರ: ಇಲ್ಲಿಯ ಶ್ರೀಪ್ರಭು ಕಲಾ, ವಿಜ್ಞಾನ ಮತ್ತು ಜೆಎಂ ಬೊಹರಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಬಿಎ, ಬಿಎಸ್ಸಿ, ಬಿಕಾಂ ತರಗತಿಗಳ ಪ್ರಥಮ ಸೆಮಿಸ್ಟರ್ ಪ್ರವೇಶ ಅರ್ಜಿಗಳನ್ನು ಜೂ.7ರಿಂದ ವಿತರಿಸಲಾಗುತ್ತಿದೆ ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಎಸ್. ಬಡಗಾ ಮತ್ತು ಪ್ರವೇಶ ನೇಮಕ ಸಮಿತಿಯ ಪ್ರೊ.ಎಸ್.ಬಿ. ಠಾಣಾಗುಂದಿ, ಎನ್.ಎಸ್. ಪಾಟೀಲ್, ಮಹ್ಮದ್ ವಾರಿಸ್ ಕುಂಡಾಲೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

