ಭ್ರಷ್ಟ, ವ್ಯಸನ ಮುಕ್ತ ಸಮಾಜ; ವೃದ್ಧನ ಯಾತ್ರೆ
ಶಹಾಪುರ: ದೇಶದಲ್ಲಿ ಹೆಚ್ಚಿರುವ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಹಾಗೂ ವಿವಿಧ ದುಶ್ಚಟಗಳಿಗೆ ಯುವಕರು ಬಲಿಯಾಗುತ್ತಿರುವ ಬಗ್ಗೆ ಅರಿವು ಮೂಡಿಸಲು 79 ವರ್ಷದ ವೃದ್ಧರೊಬ್ಬರು ಗುಜರಾತ್ನಿಂದ ಕನ್ಯಾಕುಮಾರಿಗೆ ಪಾದಯಾತ್ರೆ ಬೆಳೆಸಿದ್ದು, ಮಾರ್ಗ ಮಧ್ಯೆ ಪಟ್ಟಣಕ್ಕೆ ಆಗಮಿಸಿದ್ದ ಅವರನ್ನು ಸ್ಥಳೀಯರು ಸನ್ಮಾನಿಸಿದರು.
ಇವರು ಹರಿಯಾಣ ಪಾಣಿಪತ್ನ 79 ವರ್ಷದ ಭಗಿಕ್ಷಾ ಸಿಂಗ್ ಚೋಟಾಸಿಂಗ್. 90 ಕೆಜಿ ತೂಕದ ಭಾರ ಹೊತ್ತು ಅವರು ಗುಜರಾತ್ನಿಂದ ಕಾಲ್ನಡಿಗೆಯಲ್ಲಿ ಕನ್ಯಾಕುಮಾರಿಗೆ ಯಾತ್ರೆ ಕೈಗೊಂಡಿದ್ದಾರೆ. ಕಳೆದ ಫೆ. 22ರಂದು ಪ್ರಯಾಣ ಆರಂಭಿಸಿದ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಜಾಗೃತಿ ಉದ್ದೇಶವನ್ನು ತಿಳಿಸಿ ಮನವಿ ಸಲ್ಲಿಸುತ್ತಿದ್ದಾರೆ.
ಸಮಾಜ ವಿರೋಧಿ ಕಾರ್ಯವೇ ಹೆಚ್ಚು: ದೇಶದಲ್ಲಿ ಗುಟ್ಕಾ, ತಂಬಾಕು, ಮದ್ಯಪಾನ ಧೂಮಪಾನಗಳಿಂದ ಸಹಸ್ರಾರು ಯುವಕರು ಬಲಿಯಾಗುತ್ತಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದೆ. ಗೋಹತ್ಯೆ ನಿರಂತರವಾಗಿ ನಡೆದಿವೆ. ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಭ್ರೂಣಹತ್ಯೆಗಳಿಂದ ಅಸಮತೋಲನ ಕಂಡುಬರುತ್ತಿದೆ. ಕಾಡನ್ನು ಸರ್ವನಾಶ ಮಾಡಿ ನಾಡಿನ ವನ್ಯ ಸಂಪತ್ತು, ಹಸಿರು ನಶಿಸಿ ಹೋಗುತ್ತಿದೆ ಎಂದು ಭಗಿಕ್ಷಾಸಿಂಗ್ ಹೇಳುತ್ತಾರೆ.
ಆಗ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ದೇಶದ ಯುವಶಕ್ತಿಗೆ ಹೊಸ ಚೇತನ ನೀಡುವುದೇ ಈ ಯಾತ್ರೆ ಉದ್ದೇಶ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

