ಗುಲ್ಬರ್ಗಾ

ವರದಕ್ಷಿಣೆಗಾಗಿ ಅತ್ತೆ, ಮಾವನ ಮೇಲೆ ಹಲ್ಲೆ

Published On :

ಗುಲ್ಬರ್ಗ: ವರದಕ್ಷಿಣೆ ಹಣ ನೀಡುವಂತೆ ಅಳಿಯ ಇತರರು ಸೇರಿ ಅತ್ತೆ ಮತ್ತು ಮಾನವ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಸ್ಟೇಷನ್ ಬಜಾರ ಬಡಾವಣೆಯಲ್ಲಿ ನಡೆದಿದೆ. ಲಲಿತಾಳ ತಂದೆ ಮತ್ತು ತಾಯಿ ಅಳಿಯನಿಂದ ಹಲ್ಲೆಗೊಂಡವರು. ನಗರದ ಸ್ಟೇಷನ್ ಬಜಾರ ಬಡಾವಣೆಯ ಉಪ್ಪಾರಗಲ್ಲಿಯ ನಿವಾಸಿ ಲಲಿತಾಳನ್ನು 8 ವರ್ಷದ ಹಿಂದೆ ಆಂಧ್ರದ ತಾಂಡೂರ ತಾಲೂಕಿನ ಕರನಕೋಟ್ ಗ್ರಾಮದ ನರಸಿಂಗನೊಂದಿಗೆ ಮಾಡುವೆ ಮಾಡಲಾಗಿತ್ತು. ಮದುವೆ ಸಂದರ್ಭದಲ್ಲಿ 10 ತೊಲಿ ಬಂಗಾರ, 2 ಲಕ್ಷ ನಗದು, ಬೈಕ್ ಹಾಗೂ ಗೃಹ ಬಳಕೆಯ ಸಾಮಾನು ನೀಡಿ ಮದುವೆ ಮಾಡಲಾಗಿತ್ತು. ಮದುವೆ ಬಳಿಕ ಒಂದೂವರೆ ವರ್ಷದ ನಂತರ ಗಂಡ ಅತ್ತೆ, ಮಾವ, ಮೈದುನ ಸೇರಿ ದೈಹಿಕ, ಮಾನಸಿಕ ಕಿರುಕುಳ ನೀಡಿ ತವರು ಮನೆಯಿಂದ 5 ಲಕ್ಷ ತರಬೇಕು. ಇಲ್ಲವಾದರೆ ಬೇರೊಂದು ಮದುವೆಯಾಗುವ ಬೆದರಿಕೆ ಹಾಕಿದ್ದ. ಇದನ್ನು ಲಲಿತಾ ತನ್ನ ತಂದೆ ತಾಯಿಗೆ ತಿಳಿಸಿದಾಗ ಅವರು 2 ಲಕ್ಷ ನೀಡಿದ್ದರು ಎನ್ನಲಾಗಿದೆ. ಜೂ.8ರಂದು ತವರಿನಲ್ಲಿ ಲಲಿತಾ ಇದ್ದಾಗ ಅಲ್ಲಿಗೆ ವಾಹನದಲ್ಲಿ ಬಂದ ನರಸಿಂಗ ಹಾಗೂ ಇತರರು ಹಣಕ್ಕಾಗಿ ಆಗ್ರಹಿಸಿ ಲಲಿತಾಳ ತಂದೆ, ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಕುರಿತು ಲಲಿತಾ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾಳೆ.
ರೇಲ್ವೆ ಗ್ಯಾಂಗಮನ್ ಆತ್ಮಹತ್ಯೆ
ಗುಲ್ಬರ್ಗ: ಜೀವನದಲ್ಲಿ ಜಿಗುಪ್ಸೆಗೊಂಡು ರೇಲ್ವೆ ಗ್ಯಾಂಗಮನ್‌ನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ರೇಲ್ವೆ ಕ್ವಾಟರ್ಸ್‌ನಲ್ಲಿ ನಡೆದಿದೆ. ರಾಮಲಿಂಗ ಎಂಬಾತನೇ ಆತ್ಮಹತ್ಯೆಗೆ ಶರಣರಾಗಿದ್ದು, ಈತನ ಪತ್ನಿ ಮತ್ತು ಮಕ್ಕಳು ತಮಿಳುನಾಡಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಈತ ಹಿರೆನಂದೂರದಲ್ಲಿರುವ ರೇಲ್ವೆ ಕ್ವಾಟರ್ಸ್‌ನಲ್ಲಿ ನೆಲೆಸಿದ್ದನೆಂದು ತಿಳಿದುಬಂದಿದೆ. ಈ ಕುರಿತು ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.