ಗುಲ್ಬರ್ಗಾ

ಸೇತುವೆಗೆ ಬೈಕ್ ಡಿಕ್ಕಿ: ಇಬ್ಬರ ಸಾವು

Published On :

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಜೂ.14
ಪಟ್ಟಣದ ಹೊರ ವಲಯದ ಮುಲ್ಲಾಮಾರಿ ನದಿಯ ಸೇತುವೆಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸೇತುವೆ ಮೇಲಿಂದ ಬಿದ್ದು ಸ್ಥಳದಲ್ಲಿಯೇ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಚಂದಾಪುರ ನಗರದ ದಿನೇಶ ಸುಭಾಷ ಕಮಲಾಪುರ (19) ಮತ್ತು ಸುರೇಶ ದೇವೇಂದ್ರಪ್ಪ ಗಾಲಿ ಹಾಗರಗುಂಡಗಿ (26) ಎಂಬುವವರೇ ಮೃತಪಟ್ಟ ನತದೃಷ್ಟರು.
ಮೃತರು ಗುಲ್ಬರ್ಗ ನಗರದಿಂದ ಚಂದಾಪುರ ನಗರಕ್ಕೆ ಗುರುವಾರ ರಾತ್ರಿ ಬರುತ್ತಿದ್ದಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ಪಟ್ಟಣದ ಹೊರ ವಲಯದ ಚಿಂಚೋಳಿ- ಗುಲ್ಬರ್ಗ ರಸ್ತೆ ಮಾರ್ಗದಲ್ಲಿರುವ ಮುಲ್ಲಾಮಾರಿ ನದಿಯ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸೇತುವೆ ಮೇಲಿಂದ ಬಿದ್ದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ನಿರಂಜನ ಪಾಟೀಲ್ ಭೇಟಿ: ಗುರುವಾರ ಮಧ್ಯರಾತ್ರಿ ಘಟನೆ ಸಂಭವಿಸಿದರು ಶುಕ್ರವಾರ ಬೆಳಗ್ಗೆ ಪೊಲೀಸರಿಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶವ ಪರೀಕ್ಷೆಗೆ ಪಟ್ಟಣದ ಚಂದಾಪುರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಘಟನಾ ಸ್ಥಳಕ್ಕೆ ಸಿಪಿಐ ನಿರಂಜನ ಪಾಟೀಲ್ ಭೇಟಿ ನೀಡಿದರು.
ಮೃತಪಟ್ಟವರಲ್ಲಿ ಸುರೇಶ ದೇವೇಂದ್ರಪ್ಪ ಗಾಲಿ ಎಂಬಾತನು ಕಳೆದ ಮೇ 6ರಂದು ಚಂದಾಪುರ ನಗರದ ಯುವತಿಯೊಂದಿಗೆ ವಿವಾಹವಾಗಿದ್ದನು. ಕಲ್ಲೂರ ಚೆಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಲು ತನ್ನ ಸ್ವಗ್ರಾಮ ಹಾಗರಗುಂಡಗಿ ಗ್ರಾಮಕ್ಕೆ ಗುರುವಾರ ಶಾಲಾ ಕಾಲೇಜು ದಾಖಲಾತಿ ತೆಗೆದುಕೊಂಡು ಚಿಂಚೋಳಿಗೆ ಬರುತ್ತಿದ್ದಾಗ ರಾತ್ರಿ ಈ ಘಟನೆ ನಡೆದಿದೆ.
ಅತ್ಯಂತ ಭೀಕರ ಅಪಘಾತದಿಂದ ಮೃತಪಟ್ಟ ಸಂಬಂಧಿಕರ ರೋಧನ ಅಕ್ರಂದನ ಮುಗಿಲು ಮುಟ್ಟಿತು. ಮೃತರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಸುರೇಶ ಬೆಂಡೆಗುಂಬಳ ತಿಳಿಸಿದ್ದಾರೆ.
ರಸ್ತೆ ಅಪಘಾತದಿಂದಾಗಿ ಚಿಂಚೋಳಿ- ಗುಲ್ಬರ್ಗ ಮಾರ್ಗ ಮಧ್ಯ ಸಂಚರಿಸುವ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.