ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ತುಘಲಕ್ ದರ್ಬಾರ್
ಶಹಾಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲು ಅವರ ಆರೋಗ್ಯ ಇನ್ನಷ್ಟು ಹದಗೆಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಪುರಸಭೆ ಸದಸ್ಯರಾದ ವಸಂತ ಸುರಪುರ ಹಾಗೂ ಅಮರಯ್ಯ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ- ಸರ್ಕಾರದ ನಿಯಮ ಮೀರಿ ಹಣ ಹೊಡೆಯುವ ದಂಧೆಗೆ ವೈದ್ಯರೊಬ್ಬರು ಮತ್ತು ಸಿಬ್ಬಂದಿ ಇಳಿದಿದ್ದಾರೆ. ಕೂಡಲೇ ಡಿಎಚ್ಒ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ನಿಯಮದ ಪ್ರಕಾರ ಹೊರರೋಗಿ ವಿಭಾಗ(ಒಪಿಡಿ) ಚಿಕಿತ್ಸೆಗೆ 2 ಇರುತ್ತದೆ. ಅದನ್ನು 5ಕ್ಕೆ ಹೆಚ್ಚಿಸಿ ರಸೀದಿ ಮಾಡಿ ನೀಡಲಾಗುತ್ತಿದೆ. ಒಳರೋಗಿಯ ದಾಖಲೆ ಪತ್ರಕ್ಕೆ 10 ಶುಲ್ಕವಿದ್ದರೂ ಅದನ್ನು 15ರ ರಸೀದಿ ಮಾಡಿ ಸರ್ಕಾರಿ ನಿಯಮವನ್ನು ಉಲ್ಲಂಘಿಸಿದ್ದಾರೆ. ಅದೇ ರೀತಿ ವೈಡಾಲ ಪರೀಕ್ಷೆ, ಗರ್ಭಿಣಿಯರು, ಮೂತ್ರ ಪರೀಕ್ಷೆ, ರೋಗ ತಪಾಸಣೆ, ಹೆಪಟೈಟಿಸ್ ಬಿ ಪರೀಕ್ಷೆ, ರಕ್ತ ಪರೀಕ್ಷೆ, ರಕ್ತದ ಗುಂಪು ಪತ್ತೆ, ಮೂತ್ರದ ಗ್ಲೂಕೋಸ್ ಅಂಶ ಪರೀಕ್ಷೆ, ಕ್ಷ-ಕಿರಣ ಶುಲ್ಕ, ಈಸಿಜಿ ಶುಲ್ಕ, ಅಪೆಂಡಿಸಿಕ್ಟಮಿ, ಹರ್ನಿಯಾ, ಹೈಡ್ರೋಸಿಲ್ ಹೀಗೆ ಹಲವಾರು ರೋಗಗಳಿಗೆ ನಿಗದಿತ ಮೊತ್ತವಿದ್ದರೂ ಮನಬಂದಂತೆ ಹಣ ವಸೂಲಿ ಮಾಡುತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ತುಘಲಕ್ ದರ್ಬಾರ್ ಮಾಡಿ ರೋಗಿಗಳ ಶೋಷಣೆ ಮಾಡಲಾಗುತ್ತಿದೆ.
ಈ ಬಗ್ಗೆ ದೂರು ನೀಡಿದರೆ ರಾಜಕಾರಣಿಗಳ ವಸೀಲಿ ಹಚ್ಚಿ ಆಸ್ಪತ್ರೆಯನ್ನು ಸೌಲಭ್ಯ ವಂಚಿತವನ್ನಾಗಿ ಮಾಡಿದ್ದಾರೆ. ಇದಕ್ಕೆ ಕಾರಣರಾಗಿರುವ ವೈದ್ಯ, ಸಿಬ್ಬಂದಿ ಮೇಲೆ ತಕ್ಷಣ ಶಿಸ್ತುಕ್ರಮ ಕೈಗೊಳ್ಳಬೇಕು. ತಕ್ಷಣವೇ ಇಬ್ಬರನ್ನು ವರ್ಗಾವಣೆ ಮಾಡದಿದ್ದರೆ ಆಸ್ಪತ್ರೆ ಉಳಿಸಿ ಬಡವರನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ವಸಂತ ಸುರಪುರ, ಅಮರಯ್ಯಸ್ವಾಮಿ, ಶಾಂತಪ್ಪ, ಸಾಹೇಬ, ಮಹ್ಮದ್, ನಿಂಗಪ್ಪ, ವಗ್ಗಯ್ಯ, ಮೋಹಿನ್, ಮಹ್ಮದ್, ಚಂದ್ರಶೇಖರ ರಾಕಂಗೇರಾ ಡಿಎಚ್ಒಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

