ಗುಲ್ಬರ್ಗಾ

ಸಮ್ಮೇಳನದಲ್ಲಿಂದು

Published On :

3ನೇ ಗೋಷ್ಠಿ- ಬೆಳಗ್ಗೆ 9ರಿಂದ 10.30 ಗಂಟೆವರೆಗೆ 'ಬೆವರ ಹನಿ ಮೂಡ್ಯಾವೋ' ಎಂಬ ದಲಿತ ಸಾಹಿತ್ಯ ಚಿಂತನ ಕುರಿತು ನಡೆಯಲಿದೆ. ಹಿರಿಯ ಸಾಹಿತಿ ಡಾ. ಹನುಮಂತರಾವ ದೊಡ್ಡಮನಿ ಅಧ್ಯಕ್ಷತೆ ವಹಿಸುವರು.
4ನೇ ಗೋಷ್ಠಿ- ಬೆಳಗ್ಗೆ 10.30 ರಿಂದ 12 ಗಂಟೆವರೆಗೆ 'ರಂಗಜಂಗಮ ಆಲ್ದಾಳ್ ಅಂದ್ರೆ' ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಗೋಷ್ಠಿ ನಡೆಯಲಿದೆ. ಹಿರಿಯ ಸಾಹಿತಿ ಎಲ್.ಬಿ.ಕೆ. ಆಲ್ದಾಳ್ ಸಮ್ಮೇಳನಾಧ್ಯಕ್ಷರಾಗಿ ಆಗಮಿಸಲಿದ್ದಾರೆ.
5ನೇ ಗೋಷ್ಠಿ- ಮಧ್ಯಾಹ್ನ 12 ಗಂಟೆಯಿಂದ 1.30 ಗಂಟೆವರೆಗೆ 'ಬಿಟ್ಟೀಗಿ ಬಂದಿಲ್ಲ ದವತಿ ಲೆಕ್ಕಣಿಕೆ' ವರ್ತಮಾನದ ತಲ್ಲಣಗಳು ಎಂಬುದರ ಕುರಿತು ಗೋಷ್ಠಿ ನಡೆಯಲಿದೆ. ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2ರಿಂದ 3.30 ಗಂಟೆವರೆಗೆ 'ಜೀವದನಿ ಮಿಡಿಯಲಿ' ಯುವ ಕವಿತೆಗಳ ತೋಂ ತನನ ಕವಿಗೋಷ್ಠಿ ನಡೆಯಲಿದೆ. ಮಕ್ಕಳ ಸಾಹಿತಿ ಏ.ಕೆ. ರಾಮೇಶ್ವರ ಅಧ್ಯಕ್ಷತೆ ವಹಿಸುವರು.
6ನೇ ಗೋಷ್ಠಿ- ಮಧ್ಯಾಹ್ನ 3.30 ಗಂಟೆಯಿಂದ ಸಂಜೆ 5 ಗಂಟೆವರೆಗೆ 'ತಿಟ್ಹತಿ ತಿರುಗಿ- ಕಲ್ಬುರ್ಗಿ ಸಂಕೀರ್ಣ ಸಾಹಿತ್ಯ ಗೋಷ್ಠಿ ನಡೆಯಲಿದೆ. ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥೆ ಡಾ. ನಾಗಾಬಾಯಿ ಬುಳ್ಳಾ ಅಧ್ಯಕ್ಷತೆ ವಹಿಸುವರು ಸಂಜೆ 5ರಿಂದ 6ರವರೆಗೆ 'ಯಾರ್ಯಾರ ನೆನೆಯಲಿ' ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಚಿವ ಖಮುರುಲ್ ಇಸ್ಲಾಂ ಅಧ್ಯಕ್ಷತೆ ವಹಿಸುವರು. ಸಂಜೆ 6ರಿಂದ 70ರವರೆಗೆ 'ನಮ್ ನಮಸ್ಕಾರ ನಿಮಗಾ' ಸಮಾರೋಪ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಾಲವಾರ ಶ್ರೀಮಠದ ತೋಟೇಂದ್ರ ಶಿವಾಚಾರ್ಯ ಹಾಗೂ ಹಾರಕೂಡ ಶ್ರೀಮಠದ ಚನ್ನವೀರ ಶಿವಾಚಾರ್ಯ ಆಗಮಿಸಲಿದ್ದಾರೆ. ಬೆಂಗಳೂರಿನ ಹಿರಿಯ ಪತ್ರಕರ್ತ ಜೋಗಿ ಸಮಾರೋಪ ಭಾಷಣ ಮಾಡಲಿದ್ದಾರೆ. ಈಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ವಿಶೇಷ ಆಮಂತ್ರಿತರಾಗಿ ಬರಲಿದ್ದಾರೆ. ಹಿರಿಯ ರಂಗಕರ್ಮಿ ಎಲ್.ಬಿ.ಕೆ. ಆಲ್ದಾಳ್, ಸಚಿವ ಖಮರುಲ್ ಇಸ್ಲಾಂ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಭಾಗವಹಿಸಲಿದ್ದಾರೆ.  ರೇವಣಸಿದ್ದಯ್ಯ ರುದ್ರಸ್ವಾಮಿಮಠ, ಗೀತಾ ನಾಗಭೂಷಣ, ಡಾ. ಚೆನ್ನಣ್ಣ ವಾಲೀಕರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅಧ್ಯಕ್ಷತೆ ವಹಿಸುವರು. ಕಸಾಪ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ನಿರ್ಣಯ ಮಂಡನೆ ಮಾಡಲಿದ್ದಾರೆ.
'ಸಮಗ್ರ ಸಾಹಿತ್ಯ ಚರಿತ್ರೆ ದಾಖಲಿಸಿ'
ಗುಲ್ಬರ್ಗ: ಕಥೆ, ಕಾದಂಬರಿ, ನಾಟಕ, ಕಲೆ, ತತ್ವಪದ, ವಚನ, ದಾಸ ಸಾಹಿತ್ಯ ಸೇರಿದಂತೆ ಗುಲ್ಬರ್ಗ ಜಿಲ್ಲೆಯ ಸಮಗ್ರ ಸಾಹಿತ್ಯ ಚರಿತ್ರೆಯನ್ನು ದಾಖಲಿಸಿ ಒಂದು ಸಾಹಿತ್ಯ ಸಂಪುಟ ರಚನೆ  ಮಾಡುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅಭಿಪ್ರಾಯಪಟ್ಟರು. ನಗರದ ಬಾಪುಗೌಡ ದರ್ಶನಾಪುರ ರಂಗ ಮಂದಿರದಲ್ಲಿ ನಡೆದ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಗ್ರ ಸಾಹಿತ್ಯ ಚರಿತ್ರೆ ಹೊತ್ತಿಗೆ ಹೊರತರುವ ಪ್ರಯತ್ನ ಪರಿಷತ್ತು ಸೇರಿದಂತೆ ಇತರ ಸಂಘ-ಸಂಸ್ಥೆಗಳು ಮಾಡಬೇಕು ಎಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.