ಗುಲ್ಬರ್ಗಾ

ಪುಸ್ತಕ- ಸೀರೆ- ಜುಬ್ಬಾ ಖರೀದಿಗೆ ಮುಗಿಬಿದ್ದ ಮಂದಿ

Published On :

ಗುಲ್ಬರ್ಗ: ಸಾಹಿತ್ಯ ಸಮ್ಮೇಳನ ನಡೆದಂತಹ ಇಲ್ಲಿನ ಕನ್ನಡ ಭವನ ಆವರಣದಲ್ಲಿ ಸಮ್ಮೇಳನದ ಎರಡೂ ದಿನ ಇಲಕಲ್ ಸೀರೆ, ಕಾದಿ ಜುಬ್ಬಾ- ಪಾಜಾಮ ಮಳಿಗೆಗಳ ಮುಂದೆ ಖರೀದಿದಾರರ ಸಮೂಹವೇ ನೆರೆದಿತ್ತು. ಈ ಮಳಿಗೆಗಳ ಪಕ್ಕದಲ್ಲೇ ಸಾಲು ಸಾಲು ಪುಸ್ತಕ ಮಳಿಗೆಗಳು, ಇಲ್ಲಿಯೂ ಸಾಹಿತ್ಯಾಸಕ್ತರು, ಓದುಗರು ಒಂದೇ ಸವನೇ ಬಂದು ಹೋಗಿ ಕೃತಿಗಳ ಖರೀದಿಗೆ ಮುಂದಾಗಿದ್ದ ನೋಟಗಳು ಕಂಡವು. 'ಕನ್ನಡಪ್ರಭ' ಜೊತೆ ಮಾತನಾಡಿದ ಪುಸ್ತಕ ವರ್ತಕರು, ಸ್ಥಳೀಯ ಪ್ರಕಾಶನದ ಮಾಲೀಕರು 2 ದಿನ ಸೇರಿ ಕಸಾಪ ಮೇಳದಲ್ಲಿ ಹೆಚ್ಚುಕಮ್ಮಿ 2.50 ರಿಂದ 3 ಲಕ್ಷ ಮೌಲ್ಯದ ಪುಸ್ತಕಗಳ ಮಾರಾಟವಾಗಿದೆ. ಮೊದಲ ದಿನ ಕನ್ನಡ ಭವನದಲ್ಲಿ ಹಾಕಲಾಗಿರುವ ಪ್ರತಿ ಪುಸ್ತಕ ಮಳಿಗೆಗಳವರಿಗೆ 10 ರಿಂದ 12 ಸಾವಿರ ವಹಿವಾಟು ಆಗಿದೆ. ಎರಡನೇ ದಿನ ಭಾನುವಾರ, ಈ ದಿನ ಹೆಚ್ಚಿನ ವಹಿವಾಟು ಇದೆ. ಹೀಗಾಗಿ ಪುಸ್ತಕ ವ್ಯಾಪಾರ ಪರವಾಗಿಲ್ಲ ಎಂದೇ ವರ್ತಕರು ಹೇಳಿದರು. ಇತ್ತ ಇಳಕಲ್ಲ ಸೀರೆಯ ವ್ಯಾಪಾರವೂ ಚೆನ್ನಾಗಿತ್ತು. ಸಮ್ಮೇಳನಕ್ಕೆ ಬಂದವರಲ್ಲಿ ಪುರುಷರೇ ಹೆಚ್ಚಾಗಿ ಸೀರೆ ಖರೀದಿಗೆ ಇಳಿದಿದ್ದರು. ಮೇಳದಿಂದ ತಮ್ಮ ಮಡದಿಗೆ ಕಾಣಿಕೆ ಒಯ್ಯುವ ಸಂಕಲ್ಪ ಮಾಡಿರಬಹುದು ಎಂದು ಅಲ್ಲಿ ಖರೀದಿಗೆ ಮುಂದಾದ ಎಲ್ಲರೂ ಪರಸ್ಪರ ಹೇಳಿಕೊಂಡು ನಗಾಡುತ್ತಿದ್ದರು.
ವಿಳಂಬ ರಾಕ್ಷಸನ ಹಾವಳಿ...
ಗುಲ್ಬರ್ಗ: ಸಾಹಿತ್ಯ ಸಮ್ಮೇಳನದಲ್ಲಿ ಯಾವ ಗೋಷ್ಠಿಗಳು ಸಮಯಕ್ಕೆ ಸರಿಯಾಗಿ ಶುರುವಾಗಲಿಲ್ಲ. ಏಕೆಂದರೆ ಬೆಳಗಿನ ಮೊದಲ ಗೋಷ್ಠಿ ದಲಿತ ಸಾಹಿತ್ಯ ಚಿಂತನ ಶುರುವಾಗಿದ್ದೇ 1 ಗಂಟೆ ವಿಳಂಬವಾಗಿ. ಮುಂದಿನ ಗೋಷ್ಠಿಗಳ ಮೇಲೆ ಇದರ ಪರಿಣಾಮ ಆಯ್ತು. ಬೆಳಗ್ಗೆ 9.30ರ ಗೋಷ್ಠಿಗೆ ಜನರೇ ಇರಲಿಲ್ಲ. ಹೀಗಾಗಿ ಅನಿವಾರ್ಯವಾಗಿ 1 ಗಂಟೆ ವಿಳಂಬ ಮಾಡಬೇಕಾಯ್ತು.
ಬಸವಮಾರ್ಗ ಪ್ರಶಸ್ತಿಗೆ ಆಯ್ಕೆ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಬಸವರಾಜ ಸಬರದ ರಚಿಸಿದ 'ವಚನ ಸಂಸ್ಕೃತಿ' ಕೃತಿಗೆ 2012- 13ನೇ ಸಾಲಿನ ಬಸವಮಾರ್ಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವರಾಧ್ಯ ಸತ್ಯಂಪೇಟೆ ತಿಳಿಸಿದ್ದಾರೆ. ಜೂ. 18ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆಯಲ್ಲಿ ಜರುಗುವ ಬಸವಾದಿ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 5 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.
ಕೃತಿಗಳ ಆಹ್ವಾನ
ಗುಲ್ಬರ್ಗ: ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನವು 2012ನೇ ಜನವರಿಯಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ಪ್ರಕಟವಾಗಿರುವ ವಚನ ಸಾಹಿತ್ಯ ಹಾಗೂ ವೈಚಾರಿಕ ಕೃತಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಜುಲೈ 31 ಕಡೆಯ ದಿನ. ವಿವರಕ್ಕೆ 98440 49205ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.