ಗುಲ್ಬರ್ಗಾ

ಅಧಿಕ ಬೆಲೆಯಲ್ಲಿ ರಸಗೊಬ್ಬರ ಮಾರಾಟ

Published On :

ಆಳಂದ: ಬಿತ್ತನೆ ಕಾಲಕ್ಕೆ ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ರಸಗೊಬ್ಬರ ಬೆಲೆ ಇಳಿಸಿದರೂ ಮಾರುಕಟ್ಟೆಯಲ್ಲೇ ಯಥಾವತ್ತಾಗಿ ಮಾರಾಟ ನಡೆದ ಪ್ರಕರಣ ಸ್ವತಃ ಜಾಗೃತ ದಳ ಅಧಿಕಾರಿಗಳೇ ಮಂಗಳವಾರ ಹೊರಹಾಕಿದ ಘಟನೆ ನಡೆದಿದೆ.
1 ಏಪ್ರಿಲ್ 2013 ರಂದು ಸರ್ಕಾರ ರಸಗೊಬ್ಬರ ಬೆಲೆ ಪರಿಸ್ಕರಿಸಿ ಇಳಿಸಿದೆ.  
ಯೂರಿಯಾ ವಿಧಗಳಲ್ಲಿ: ಐಪಿಎಲ್ ಗೊಬ್ಬರದ ಹಳೆಯ ದರ 887 ನಂತರ ಸರ್ಕಾರ ಪರಿಷ್ಕೃತವಾಗಿ ನಿಗಧಿಪಡಿಸಿದ ದರ 844 ಇಳಿಕೆಯಾಗಿದೆ. ಇದೇ ರೀತಿ ಕ್ರಮವಾಗಿ ಜುವಾರಿ ಗೊಬ್ಬರ 885, 845.50. ರು. ಸಿಎಫ್‌ಎಲ್ ಗೊಬ್ಬರ 885, 843ಗೆ ಇಳಿಕೆಯಾಗಿದೆ. ಮೊದಲಿನ ದರ ಹಾಗೂ ಸರ್ಕಾರ ಇಳಿಸಿದ ದರದ ಗೊಬ್ಬರ ಎಂಸಿಎಫ್ 885- 843, ಫ್ಯಾಕ್ಸ್ ಗೊಬ್ಬರ 880,95-828.
ಡಿಎಪಿ ವಿಧಗಳಲ್ಲಿ: ಸಿಎಫ್‌ಎಲ್ 1260-1187, ಜಿಎಸ್‌ಎಫ್‌ಸಿ 1240, 1186, ಐಪಿಎಲ್ 1260 -1186, ಇಫ್ಕೋ 1260-1186, ಎಂಸಿಎಫ್ 1266-1192, ಜುವಾರಿ 1260-1189, ಆರ್‌ಸಿಎಫ್ 1392, 1186, ಕ್ರಬ್ಕೋ 1266-1186 ಇಳಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದರು ನೂರಾರು ಮಂದಿ ರೈತರು ಸಾವಿರಾರು ಚೀಲಗೊಬ್ಬರ ಈಗಾಗಲೇ ಹೆಚ್ಚಿನ ಬೆಲೆ ತೆತ್ತಿ ಖರೀದಿಸಿ ಹೊರೆ ಅನುಭವಿಸಿದ್ದಾರೆ.
ಹಿಂದಿನ ಹೆಚ್ಚಿನ ಬೆಲೆ ಅಲ್ಲದೆ, ಚೀಲಮೊಂದಕ್ಕೆ 50ಗಳಿಂದ 1000ಕ್ಕೆ ಹೀಗೆ 200 ಹೆಚ್ಚಿಗೆ ಪಡೆಯಲಾಗುತ್ತಿದೆ ಎಂದು ರೈತರು ಹೇಳಿಕೊಂಡಿದ್ದಾರೆ.
ಜಾಗೃತದಳ ಭೇಟಿ: ಜಿಲ್ಲಾ ಕೃಷಿ ಜಾಗೃತದಳ ಅಧಿಕಾರಿ ಜಿ.ಆರ್. ಕೋಟಿ ನೇತೃತ್ವದಲ್ಲಿ ಆಳಂದಕ್ಕೆ ಮಂಗಳವಾರ ಹಠಾತ್ ಭೇಟಿ ನೀಡಿ ಆಗ್ರೋ ಕೇಂದ್ರಗಳ ಮೇಲೆ ದಾಳಿ ಮಾಡಿದೆ.ಸರ್ಕಾರ ಪರಿಷ್ಕೃತ ದರ ಹೊರತುಪಡಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದೆ.  ಮೈಂದರ್ಗಿ ಆಗ್ರೋ ಏಜೆನ್ಸಿ ಮಾರಾಟ ಪರವಾನಿಗೆ ರದ್ದುಪಡಿಸಲು ಮೇಲಾಧಿಕಾರಿಗಳಿಗೆ ಕೋರಲಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.