ಗುಲ್ಬರ್ಗಾ

ಚುಟುಕು ಎಲ್ಲ ಸಾಹಿತ್ಯ ಪ್ರಕಾರಗಳಿಗೆ ಪ್ರೇರಣೆ

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ   ಜೂ.25
ಎಲ್ಲ ಸಾಹಿತ್ಯ ಪ್ರಕಾರಗಳಿಗೆ ಚುಟುಕು ಸಾಹಿತ್ಯ ಪ್ರೇರಣೆಯಾಗಿದೆ. ಸಾಹಿತ್ಯ ಬೃಹತ್ ಪ್ರಮಾಣದಲ್ಲಿ ಬೆಳೆಯಲು ಹಾಗೂ ಕಡಿಮೆ ಪದಗಳಲ್ಲಿ ಅನೇಕ ಅರ್ಥ ಕಲ್ಪಿಸುವ ಶಕ್ತಿ, ಶಬ್ದಗಳೊಂದಿಗೆ ಲೀಲಾಜಾಲವಾಗಿ ಆಟವಾಡುವ ಮುತ್ಸದ್ಧಿತನದ ಕಲೆ ಚುಟುಕು ಸಾಹಿತ್ಯದಿಂದ ಮೂಡಿಸಲು ಸಾಧ್ಯ ಎಂದು ಮಾಜಿ ಸಚಿವ ಮದನಗೋಪಾಲ ನಾಯಕ ಅಭಿಪ್ರಾಯಪಟ್ಟರು.
ಇಲ್ಲಿಯ ಆದರ್ಶ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯಾಂತ್ರಿಕ ಜೀವನದ ಒತ್ತಡದಲ್ಲಿ ಸಾಹಿತ್ಯ ಬರವಣಿಗೆ, ಓದುವ ಆಸಕ್ತರ ಕೊರತೆ ಕಂಡು ಬರುತ್ತಿದೆ. ಸಾಹಿತ್ಯವೇ ಮರೀಚಿಕೆ ಆಗುವ ಸಂದರ್ಭದಲ್ಲಿ ಚುಟುಕು ಸಾಹಿತ್ಯವು ಕನ್ನಡ ಸಾಹಿತ್ಯ ಅಭಿವೃದ್ಧಿಯ ಆಶಾಕಿರಣವಾಗಿದೆ ಎಂದರು.
ಯುವ ಬರಹಗಾರರಿಗೆ ಬುನಾದಿ: ಡುಂಡಿರಾಜ, ಲಕ್ಷ್ಮಣರಾವ್, ಚಂಪಾ ಮುಂತಾದ ಚುಟುಕು ಕವಿಗಳು ಈ ಸಾಹಿತ್ಯ ಬೆಳೆಯಲು ದುಡಿಯುತ್ತಿದ್ದಾರೆ. ಇವರ ಶ್ರಮದಿಂದ ನ್ಯಾನೋ ಕಥೆ, ನ್ಯಾನೋ ಕಾದಂಬರಿ, ನ್ಯಾನೋ ಕವನಗಳ ಹೊಸ ಪರಂಪರೆ ಹುಟ್ಟಿಕೊಂಡಿದೆ.
  ಯುವ ಬರಹಗಾರರಿಗೆ ಚುಟುಕು ಸಾಹಿತ್ಯ ಬುನಾದಿಯಾಗಿದೆ. ಈ ನಿಟ್ಟಿನಲ್ಲಿ ಸಾಹಿತ್ಯವನ್ನು ಉಳಿಸಿ ಬೆಳೆಸಲು ಮತ್ತು ಯುವ ಕವಿಗ
ಳಿಗೆ ಮಾರ್ಗದರ್ಶನವಾಗಲು, ಕವಿಗಳಿಗೆ ವೇದಿಕೆ ನೀಡುವ ಉದ್ದೇಶದಿಂದ ಪ್ರಥಮ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಸಲಹೆ, ಸಹಕಾರ ನೀಡಿ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಚುಟುಕು ಸಾಹಿತ್ಯ ಸಮ್ಮೇಳನ ಯಶಸ್ವಿಗೊಳ್ಳಲು ಜಿಲ್ಲೆಯ ಪ್ರತಿಯೊಬ್ಬರ ಸಹಾಯ, ಸಲಹೆ, ಸೂಚನೆಗಳು ಬೇಕು.  ಹಿರಿಯರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಸಮ್ಮೇಳನ ನಡೆಸುವ ಪ್ರಯತ್ನ ಮಾಡುತ್ತೇವೆ ಎಂದರು.
ಸುರಪುರ ಚುಸಾಪ ಅಧ್ಯಕ್ಷ ಶಿವಶರಣಪ್ಪ ಶಿರೂರ, ಶಹಾಪುರನ ಚುಸಾಪ ಅಧ್ಯಕ್ಷ ಆಶೋಕ ಚೌದ್ರಿ, ಡಾ. ಗಾಳಪ್ಪ ಪೂಜಾರಿ, ಹೊನ್ನಪ್ಪ ಖಾನಾಪುರ, ವೀರಣ್ಣ ಬಿಕೆ ಅಲ್ದಾಳ, ಮಡಿವಾಳ ಪಾಟೀಲ, ಬಸರೆಡ್ಡಿ ಎಂಟಿಹಳ್ಳಿ, ಡಾ.ಸಿದ್ದಲಿಂಗರೆಡ್ಡಿ, ಸುರೇಶ, ಶಾಂತು ಇತರರು ಇದ್ದರು. ಅಮರಯ್ಯ ಜಾಲಿಬೆಂಚಿ ಸ್ವಾಗತಿಸಿದರು. ಪ್ರಶಾಂತ ಗೂಗಲ್ ವಂದಿಸಿದರು. ಮಲ್ಲಿಕಾರ್ಜುನ ಬಿಳ್ಹಾರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.