ಗುಲ್ಬರ್ಗಾ

ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸಿ: ಪ್ರಶಾಂತ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.26
ಬಾಲ ಕಾರ್ಮಿಕ ಪದ್ಧತಿ ನಿವಾರಿಸಲು ಪ್ರತಿಯೊಬ್ಬರು ಪಣ ತೊಡಬೇಕು. ಮಕ್ಕಳ ಬದುಕು, ರಕ್ಷಣೆ, ವಿಕಾಸ ಹಾಗೂ ಮಕ್ಕಳ ಹಕ್ಕುಗಳನ್ನು ಯಾರೂ ಉಲ್ಲಂಘಿಸಬಾರದು ಎಂದು ಪ್ರಥಮ ದರ್ಜೆ ನ್ಯಾಯಾಲಯದ ಅಪರ ಸರ್ಕಾರಿ ನ್ಯಾಯವಾದಿ ಡಿ.ಪ್ರಶಾಂತಕುಮಾರ ಹೇಳಿದರು.
  ಅಫಜಲ್ಪುರ ತಾಪಂ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಘ, ಕಿರಣ ರೂರಲ್ ರಿಕನ್ ಟ್ರಕ್ಸನ್ ಸೊಸೈಟಿ, ಕಾರ್ಮಿಕ ಇಲಾಖೆ ಗುಲ್ಬರ್ಗ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದೊಂದು ಅನಿಷ್ಟ ಪದ್ಧತಿ: ಕಾರ್ಮಿಕ ಅಧಿಕಾರಿ ಜಿ.ಸಿದ್ಧಲಿಂಗಪ್ಪ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿಯು ನಮ್ಮ ದೇಶಕ್ಕೆ ಅಂಟಿರುವ ಅನಿಷ್ಟ ಪದ್ಧತಿ. ಇದು ಇಜಕ್ಕೂ ಗೌರವಯುತ ಸಮಾಜಕ್ಕೆ ತಲೆತಗ್ಗಿಸುವಂತಹ ವಿಚಾರವೆಂದರೆ ತಪ್ಪಾಗಲಾರದು. ಕಾರ್ಖಾನೆ, ಹೊಟೇಲ್ ಮತ್ತು ಗ್ಯಾರೇಜ್ ಇತರೆ ಇರುವ ಸ್ಥಳದಲ್ಲಿ 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದರು.
 ಬಾಲ ಮಕ್ಕಳನ್ನು ಕಾರ್ಮಿಕರಂತೆ ಬಳಸಿಕೊಳ್ಳುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಾರ್ಮಿಕ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಾಲೂಕಿನ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಜಿ.ಪೂಜಾರಿ, ಸಿಡಿಪಿಒ ವಿರೇಂದ್ರ ನಾವದಗಿ, ಶಿಕ್ಷಣ ಇಲಾಖೆಯ ಜಾವಂದ ಅವರಗಳು ಮಾತನಾಡಿದರು.
  ಉಪನ್ಯಾಸಕರಾಗಿ ನ್ಯಾಯವಾದಿ ಡಿ.ಡಿ. ದೇಶಪಾಂಡೆ ಉಪನ್ಯಾಸ ಮಂಡಿಸಿದರು. ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ರಮೇಶ ಸುಬ್ಬಡ, ಸಿಡಿಪಿಒ ಇಲಾಖೆಯ ಸರಳಾ, ರಾಜಕುಮಾರ ಜಮಾದಾರ, ಕಿರಣ ರೂರಲ್ ರಿಕನ್ ಟ್ರೆಕ್ಸನ್ ಸೊಸೈಟಿಯ ಕಾರ್ಯದರ್ಶಿ ಎಂ.ಎಂ.ಶಿರಹಟ್ಟಿ ಇದ್ದರು. ತಹಸೀಲ್ದಾರ್ ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಅಧಿಕಾರಿ ಸೂರ್ಯಕಾಂತ ಎಂ.ಕೆ. ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.