ಪಟ್ಟಣ ಸ್ವಚ್ಛತೆಗೆ ಗಮನ ಹರಿಸಿ: ಪ್ರಿಯಾಂಕ್
ಕನ್ನಡಪ್ರಭ ವಾರ್ತೆ ಚಿತ್ತಾಪುರ ಜೂ.27
ಪಟ್ಟಣದ ವಿವಿಧ ಕಡೆ ಕಸದ ರಾಶಿಗಳಿವೆ. ದಿನಾಲು ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪುರಸಭೆ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.
ಪುರಸಭೆಯ ಇಲಾಖಾ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿ, ಆಶ್ರಯ ಕಾಲೋನಿ ನಿವಾಸಿಗಳು ಕಳೆದ ಹಲವು ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಸರಿಯಾದ ಚರಂಡಿ, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಇವರಿಗೆ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.
ಕಾಮಗಾರಿ ಮುಗಿಸಿ: ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಕೂಡಲೇ ಅಗಲೀಕರಣ ಮಾಡಿ ಎರಡೂ ವರ್ಷ ಮೇಲ್ಪಟ್ಟರೂ ಕಾಮಗಾರಿಗಳು ಮುಗಿಯುತ್ತಿಲ್ಲ.
ಕಾಮಗಾರಿಗಳು ಗುಣಮಟ್ಟದಲ್ಲಿ ಆಗುತ್ತಿಲ್ಲ ಎಂದು ಜೆಇ ಸೋಮು ರಾಠೋಡ ಅವರಿಗೆ ತರಾಟೆಗೆ ತೆಗೆದುಕೊಂಡು, ಉತ್ತಮ ಗುಣಮಟ್ಟದಲ್ಲಿ ಕೆಲಸಗಳನ್ನು ಆದಷ್ಟು ಬೇಗನೆ ಕೆಲಸ ಮುಗಿಸಲು ಸೂಚಿಸಿದರು.
ಸಾಮಾನ್ಯರ ಗತಿಯೇನು: ನೂತನ ಸದಸ್ಯ ಸುರೇಶ ಅಳ್ಳೊಳ್ಳಿ ಅವರು ತಮ್ಮ ವಾರ್ಡ್ನಲ್ಲಿ ನೀರಿನ ಟ್ಯಾಂಕ್ ಹಲವು ವರ್ಷಗಳಿಂದ ಸ್ವಚ್ಛ ಮಾಡಿಲ್ಲ. ಇದರಿಂದ ಅದರಲ್ಲಿ ಕೆಸರು ತುಂಬಿರುವುದರಿಂದ ನೀರು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ತಿಂಗಳ ಹಿಂದೆ ಮೌಖಿಕವಾಗಿ ಹಾಗೂ ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಸದಸ್ಯರಿಗೆ ಈ ರೀತಿ ಆದರೆ ಜನ ಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ಸದಸ್ಯರು ಗೈರು: ಶಾಸಕರ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಸಭೆಗೆ ಬಿಜೆಪಿಯಿಂದ ಚುನಾಯಿತರಾದ ಸದಸ್ಯರು ಗೈರು ಹಾಜರಾಗಿದ್ದರು. ಈ ಬಗ್ಗೆ ಶಾಸಕರು ಬೇಸರ ವ್ಯಕ್ತಪಡಿಸಿ ಬಿಜೆಪಿ ಸದಸ್ಯರು ಈ ಸಭೆಗೆ ಬರಬೇಕಿತ್ತು. ಈಗ ನಾನು ಕ್ಷೇತ್ರದ ಶಾಸಕ ನಾನು ಕಾಂಗ್ರೆಸ್ನವನಲ್ಲ. ಅಭಿವೃದ್ಧಿಯಲ್ಲಿ ರಾಜಕೀಯ ಬೇಡ ಎಲ್ಲರೂ ಕೂಡಿ ಪಟ್ಟಣವನ್ನು ಅಭಿವೃದ್ಧಿ ಮಾಡೋಣ ಎಂದರು.
ಮಹಿಳಾ ಸದಸ್ಯರ ಗೈರು: ಶಾಸಕರ ಪ್ರಗತಿ ಪರೀಶಿಲನೆ ಸಭೆಗೆ ಚುನಾಯಿತ ಮಹಿಳಾ ಸದಸ್ಯರು ಗೈರು ಹಾಜರಿಯಾಗಿ ಅವರ ಪರವಾಗಿ ಅವರ ಪತಿ, ಕೆಲ ಸದಸ್ಯರ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ಸಭೆಗಳಲ್ಲಿ ಮಹಿಳಾ ಸದಸ್ಯರ ಪರವಾಗಿ ಬೇರೊಬ್ಬರು ಹಾಜರಾಗಲು ಬರುವುದಿಲ್ಲ ಎಂಬ ನಿಯಮವಿದ್ದರೂ, ಶಾಸಕರು ಅವರ ಮಹಿಳಾ ಸದಸ್ಯರ ಗಂಡ ಹಾಗೂ ಮಕ್ಕಳಿಗೆ ಸಭೆಯಲ್ಲಿ ಅವಕಾಶ ನೀಡಿ ನಿಯಮ ಗಾಳಿಗೆ ತೂರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

