ಗುಲ್ಬರ್ಗಾ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Published On :

ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರ ಜೆಡಿಎಸ್ ವತಿಯಿಂದ ಪೆಟ್ರೋಲ್, ಬಸ್ ದರ ಏರಿಕೆ, ಪಡಿತರ ನವೀಕರಣ ರದ್ದತಿ, ಶಹಾಬಾದ್ ತಾಲೂಕ ಕೇಂದ್ರ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ರು.
ಪಕ್ಷದ ಅಧ್ಯಕ್ಷ ಸೋಮಶೇಖರ ನಂದಿಧ್ವಜರವರ ನೇತೃತ್ವದಲ್ಲಿ ಭಾರತ ಚೌಕನಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ನಗರಸಭೆ ಕಚೇರಿಯ ಮುಂದೆ ಸಮಾವೇಶಗೊಂಡಿತು. ಜೆಡಿಎಸ್ ಮುಖಂಡ ಲೋಹಿತ ಕಟ್ಟಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿದ್ದರಿಂದ ಧಾನ್ಯಗಳ, ತರಕಾರಿ ಬೆಲೆ ಏರಿಕೆಯಾಗುತ್ತಿದೆ ಎಂದು ಆರೋಪಿಸಿದರು.
ಹೆಚ್ಚಿನ ಹಣ ವಸೂಲಿ: ಹಿಂದಿನ ಬಿಜೆಪಿ, ಇಂದಿನ ಕಾಂಗ್ರೆಸ್ ಸರ್ಕಾರ ಒಂದಿಲ್ಲೊಂದು ನೆಪ ಮಾಡಿ ಬಡವರಿಂದ ಪಡಿತರ ಚೀಟಿ ಕಸಿದುಕೊಳ್ಳುತ್ತಿದೆ ಎಂದು ದೂರಿ, ಬಯೋವುಟ್ರಿಕ್ ಪಡೆಯಲು ಇಂಟರ್ ನೆಟ್ ಅವರು ಹೆಚ್ಚಿನ ಹಣ ಪಡೆಯುತ್ತಿದ್ದಾರೆಂದು ದೂರಿದರು.
ಬಸವರಾಜ, ನಗರಸಭೆ ಸದಸ್ಯರಾದ ರಾಮಕುಮಾರ ಸಿಂಘೆ, ಕಾಶಿನಾಥ ಜೋಗಿ, ಜಯಮಂಗಳ ಮುದ್ನಾಳ, ಮುಖಂಡರಾದ ನಾಗರಾಜ ಸಿಂಘೆ, ಶೇಖ ಬಸೀರೋದ್ದಿನ್, ರಾಜ ಮಹ್ಮದ್ ರಾಜಾ, ರಾಜು ರಾಠೋಡ, ಅಬ್ದುಲ್ ಕರೀಮ, ನಾಗರಾಜ ಧನ್ನೇಕರ್, ಬಜರಂಗ ಕುಸಾಳೆ, ಹೀರಾ ಪವಾರ, ರಾಜು ಕಾಳನೂರ, ಬಾಬು ಪಿಂಜಾರಿ, ಧೂಳಪ್ಪ ಸುಬೇದಾರ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.  ಶಹಾಬಾದ್ ತಾಲೂಕು ಕೇಂದ್ರ ಮಾಡಿ, ಎಡಿಬಿ ಯೋಜನೆ ತೀವ್ರಗೊಳಿಸಬೇಕು. ಸಮುದಾಯ ಆರೋಗ್ಯ ಕೇಂದ್ರದ ಬದಲಾಗಿ ಸಾರ್ವಜನಿಕ ಆಸ್ಪತ್ರೆಯಾಗಿ ಪರಿವರ್ತಿಸಬೇಕು. ಕುಡಿಯುವ ನೀರಿನ ಖಾಸಗಿಕರಣ, ಸ್ಥಳೀಯ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಆಗ್ರಹಿಸಿ ನಗರಸಭೆ ಪ್ರಭಾರಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.