'ಲಿಂ. ಪುಟ್ಟರಾಜ ಗವಾಯಿಗಳ ಜೀವನ ಎಲ್ಲರಿಗೂ ಆದರ್ಶ'
ಕನ್ನಡಪ್ರಭ ವಾರ್ತೆ ಸುರಪುರ ಜೂ.28
ಉತ್ತಮ ತತ್ವ ಸಿದ್ಧಾಂತ, ಜೀವನದುದ್ದಕ್ಕೂ ಆದರ್ಶವಾಗಿ ಬಾಳಿದ ಗಾನಯೋಗಿ ಲಿಂ. ಪುಟ್ಟರಾಜ ಗವಾಯಿಗಳು ಮರೆಯಾದರೂ ಅವರು ನೀಡಿದ, ಹರಿಸಿದ ಸಂಗೀತಧಾರೆ ಇಂದು ನಿತ್ಯ ನಿರಂತವಾಗಿ ಅಂಧ, ಅನಾಥರ, ದೀನ ದಲಿತರ, ನಿರ್ಗತಿಕರ ಬಾಳಿನಲ್ಲಿ ಗಾನಸುಧೆಯಾಗಿ ಹರಿಯುತ್ತಿದೆ ಎಂದು ಹಸನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಫೀ ಉಜಮಾ ಹೇಳಿದರು.
ಸಮೀಪದ ತಿಮ್ಮಾಪುರದ ಜಗದ್ಗುರು ಪಂಚಾಚಾರ್ಯ ಶಾಲೆಯಲ್ಲಿ ಸಿದ್ಧ ತೋಟೇಂದ್ರ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಲಿಂ. ಪುಟ್ಟರಾಜರ ಸವಿನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತಿ, ಮತ ಪಂಥಗಳೆನ್ನದೇ ಸರ್ವರಿಗೂ ಅನ್ನ ದಾಸೋಹ, ವಸತಿ ನೀಡಿ ತಮ್ಮ ಸಂಗೀತ ವಿದ್ಯೆಯನ್ನು ಧಾರೆಯೆರೆದ ಗವಾಯಿಗಳು ಹಲವಾರು ಕುಟುಂಬಗಳಿಗೆ ದಾರಿ ದೀಪವಾಗಿದ್ದರು ಎಂದು ಸ್ಮರಿಸಿದರು.
ಮಹಾತ್ಮರ ಸ್ಮರಣೆಯಿಂದ ಜೀವನ ಪಾವನ: ಇಂಥ ಮಹಾತ್ಮರ ಸ್ಮರಣೆ ಮಾಡಿದರೆ ಜೀವನ ಪಾವನವಾಗುತ್ತದೆ. ಅವರ ತತ್ವಾದರ್ಶಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಸರ್ವರಿಗೂ ಸಹಕರಿಸುವ ಗುಣ ಬೆಳಸಿಕೊಳ್ಳೋಣ ಎಂದ ಅವರು ಜೀವನದಲ್ಲಿ ದೃಷ್ಟಿಯಿದ್ದರೆ ಸಾಲದು ದೃಷ್ಟಿಕೋನ ಉತ್ತಮವಾಗಿರಬೇಕೆಂದು ತಿಳಿಸಿದರು.
ಮಹೇಶ ಗೋಗಿ, ಪ್ರಕಾಶ ಅಲ್ಬನೂರು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶರಣಕುಮಾರ ಜಾಲಹಳ್ಳಿ ಪುಟ್ಟರಾಜ್ ಗವಾಯಿಗಳ ಕುರಿತಾದ ಹಲವಾರು ಗೀತೆಗಳನ್ನು ಹಾಡಿದರು. ಶಾಲೆಯ ಮುಖ್ಯಗುರು ಬಿಲ್ಲಮರಾಜ್ ಅಧ್ಯಕ್ಷತೆ ವಹಿಸಿದ್ದರು. ಸುಲೋಚನಾ, ಮರೆಪ್ಪ ಬಂದಳ್ಳಿ, ಸುಮಂಗಲ, ಜಯಶ್ರೀ, ಲಕ್ಷ್ಮೀ ನಾಲವಾರ, ಶೈಲಶ್ರೀ, ಗೌರಮ್ಮ ಇದ್ದರು. ಲಿಂಗಪ್ಪ ಬೋಳಾರಿ ಸ್ವಾಗತಿಸಿದರು. ದತ್ತುರಾವ ಕುಲಕರ್ಣಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

