ಗುಲ್ಬರ್ಗಾ

ಅರ್ಜಿ ಸಲ್ಲಿಸುವವರಿಗೆ ಮುಂಗಟ್ಟೆ ಸ್ಥಾಪನೆ

Published On :

ಗುಲ್ಬರ್ಗ: ಸಚಿವ ಸಂಪುಟ ಉಪಸಮಿತಿಯ ಮುಂದೆ ಹೊಸದಾಗಿ ಅರ್ಜಿಗಳನ್ನು ನೀಡುವವರು ಜು.1ರಂದು ಗುಲ್ಬರ್ಗ ನಗರಾಭಿವೃದ್ಧಿ ಕಾರ್ಯಾಲಯದಲ್ಲಿ ಜಿಲ್ಲಾವಾರು ಮುಂಗಟ್ಟೆ (ಕೌಂಟರ್) ಕಲ್ಪಿಸಲಾಗಿದ್ದು, ಅರ್ಜಿದಾರರು ತಮ್ಮ ಮನವಿಗಳನ್ನು ಆಯಾ ಜಿಲ್ಲೆಗೆ ನಿಗಧಿಪಡಿಸಿದ ಸಮಯಕ್ಕಿಂತ 1ಗಂಟೆಗೆ ಮುಂಚಿತವಾಗಿ ಸಂಬಂಧಪಟ್ಟ ಮುಂಗಟ್ಟೆಗಳಲ್ಲಿ ಸಲ್ಲಿಸಿ, ಪ್ರವೇಶಪತ್ರ ಪಡೆದು ಜಿಲ್ಲಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಜರುಗುವ ಉಪಸಮಿತಿ ಸಭೆಯಲ್ಲಿ ಉಪಸ್ಥಿತರಾಗಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ ತಿಳಿಸಿದ್ದಾರೆ.
ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜುಲೈ 1ರಂದು ಏರ್ಪಡಿಸಲಾಗಿರುವ ಹೈ.ಕ. ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತದ ಸಂವಿಧಾನ ಅನುಚ್ಛೇಧ 371(ಜೆ) ತಿದ್ದುಪಡಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ರಚಿಸಲಾದ ಸಚಿವ ಸಂಪುಟದ ಉಪಸಮಿತಿಯು ಸಾರ್ವಜನಿಕರ ಅವಹಾಲುಗಳನ್ನು ಸ್ವೀಕರಿಸಲಿದ್ದು, ಈಗಾಗಲೇ ಗುಲ್ಬರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಹಲವಾರು ಸಂಘಟನೆಗಳು ಹಾಗೂ ಸಾರ್ವಜನಿಕರು ತಮ್ಮ ಮನವಿಗಳನ್ನು ಈ ಕಚೇರಿಗೆ ಸಲ್ಲಿಸಿರುವರು.
ಪ್ರತಿ ಸಂಘ ಸಂಸ್ಥೆಗೆ ಕಾಲಮಿತಿ, ಸದಸ್ಯರ ಸಂಖ್ಯೆಯನ್ನು ನಿಯಮಿತಗೊಳಿಸುವುದು ಅಗತ್ಯವಿರುವುದರಿಂದ ಸಂಘ ಸಂಸ್ಥೆಗಳು ತಮ್ಮಿಂದ ಕನಿಷ್ಟ ಸದಸ್ಯರನ್ನೊಳಗೊಂಡಂತೆ ಅಂದರೆ 3 ಜನರಿಂದ 5 ಜನರೊಳಗಾಗಿ ಉಪಸ್ಥಿತರಿರುವುದು. ಯಾವುದೇ ಕಾರಣಕ್ಕೂ 5 ಜನಕ್ಕಿಂತ ಹೆಚ್ಚು ಜನರಿಗೆ ಉಪಸಮಿತಿಯಲ್ಲಿ ಆಗಮಿಸಲು ಅವಕಾಶವಿರುವುದಿಲ್ಲ.
ಸಾರ್ವಜನಿಕರು ಸಂಘ ಸಂಸ್ಥೆಗಳು ಸಚಿವ ಸಂಪುಟ ಉಪಸಮಿತಿಯ ಮುಂದೆ ಸೌಹಾರ್ದತೆಯಿಂದ ತಮಗೆ ಗೊತ್ತುಪಡಿಸಿದ ಸಮಯದೊಳಗಾಗಿ ಕಡಿಮೆ ಸದಸ್ಯರೊಂದಿಗೆ ಆಗಮಿಸಿ ತಮ್ಮ ಅವಹಾಲುಗಳನ್ನು, ಅಭಿಪ್ರಾಯಗಳನ್ನು ಮಂಡಿಸಿ, ಜಿಲ್ಲಾಡಳಿತದೊಂದಿದೆ ಸಹಕಾರ ನೀಡಲು ವಿನಂತಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.