ಅವಧಿ ವಿಸ್ತರಣೆ
ಗುಲ್ಬರ್ಗ: ಸರ್ಕಾರಿ ಪಾಲಿಟೆಕ್ನಿಕ್ ಅಟೋಮನಸ್ ವಿದ್ಯಾರ್ಥಿಗಳಿಗೆ ಏಪ್ರಿಲ್, ಮೇ ತಿಂಗಳಲ್ಲಿ ನಡೆಯುವ ಪರೀಕ್ಷೆಗೆ ಹಾಜರಾಗಲು ಕೊನೆಯ ಅವಕಾಶ ನೀಡಲಾಗಿದೆ. ಬಾಕಿ ಉಳಿದಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಪರೀಕ್ಷಾ ಶುಲ್ಕವನ್ನು ನಿಗದಿತ ಅವಧಿಯೊಳಗೆ ಭರಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಸ್.ಬಿ. ಪಾಟೀಲ್ ಹಾಗೂ ಸನಂದಾದೇವಿ ವಿ.ಕೆ ಅಥವಾ 08472-221871ಗೆ ಸಂಪರ್ಕಿಸಲು ಕೋರಲಾಗಿದೆ.
ಪದಾಧಿಕಾರಿಗಳ ಆಯ್ಕೆ
ಗುಲ್ಬರ್ಗ: ಜೇವರ್ಗಿ ತಾಲೂಕಿನ ಇಟಗಾ ಗ್ರಾಮದ ಕರ್ನಾಟಕ ಯುವಜನ ಒಕ್ಕೂಟದ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹೊಜುನಪ್ಪ ಪಿ. ವಾಗ್ಮೋರೆ, ಉಪಾಧ್ಯಕ್ಷ ಪೀರಪ್ಪ ಜಿ. ನಾಯಕೋಡಿ ಯಲ್ಲಪ್ಪ ಪಿ. ಪೂಜಾರಿ, ಜಿದಾನಂದ ಬಿ. ಪಾಣೆಗಾಂವ್ ಕಾರ್ಯದರ್ಶಿಯಾಗಿ ಚಿದಾನಂದ ಎಸ್. ಹಜಾರೆ , ಸಂಘಟನಾ ಕಾರ್ಯದರ್ಶಿಯಾಗಿ ದೇವಾನಂದ ಸಿ. ಬಂದರವಾಡ ಸಹ ಕಾರ್ಯದರ್ಶಿಯಾಗಿ ಮಡಿವಾಳ ಎ. ಹಣಮಂತಗೋಳ, ರಾಜು ಎಸ್. ಪಾಣೆಗಾಂವ್, ಶರಣಪ್ಪ ಸಿ. ಬಿಲ್ಲಾಳ, ಸಂಚಾಲಕರಾಗಿ ನಾಗೇಶ ವಿ. ಹಣಮಂತಗೋಳ ಹಾಗೂ ಖಜಾಂಚಿಯಾಗಿ ಮಲ್ಲಿಕಾರ್ಜುನ ಎಲ್. ಮೇತ್ರೆ ಆಯ್ಕೆಯಾಗಿದ್ದಾರೆಂದು ಜೇವರ್ಗಿ ತಾಲಕಿನ ಸಂಚಾಲಕ ಮಡಿಯಾಳಿ ಎಸ್. ಹಣಮಂತಗೋಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ವಿನೋದ ಹಾಗೂ ಜಿಲ್ಲಾಧ್ಯಕ್ಷ ಅನಂತ ಜಿ. ಗುಡಿ ಉಪಸ್ಥಿತರಿದ್ದರು.
ಲಸಿಕೆ ಹಾಕಲು ಚಾಲನೆ
ಗುಲ್ಬರ್ಗ: ನಗರದ ಆದರ್ಶ ನಗರದ ಬಡಾವಣೆಯಲ್ಲಿ ಇತ್ತೀಚೆಗೆ ನಡೆದ 2ನೇ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾ ಯುವ ಅಧ್ಯಕ್ಷ ಪ್ರಶಾಂತ ತಂಬೂರಿ ಮಗುವಿಗೆ ಪೊಲಿಯೋ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿದರು. 5 ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವುದರ ಮೂಲಕ ನಮ್ಮ ರಾಷ್ಟ್ರವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡಬೇಕಾಗಿದೆ ಪ್ರಶಾಂತ ತಂಬೂರಿ ಹೇಳಿದರು. ಅಮರ ಖಪಾಟೆ, ಅಶೋಕ ಕಮಲಾಪೂರ, ಸುಭಾಷ ನಾಗನಳ್ಳಿ, ಪವನ ತಂಬೂರಿ, ಪ್ರವೀಣ ಕಲ್ಯಾಣಿ ಇತರರು ಉಪಸ್ಥಿತರಿದ್ದರು.
ನೇಮಕ ಸ್ಥಗಿತ
ಗುಲ್ಬರ್ಗ: ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ತಡೆಹಿಡಿಯಲು ಆದೇಶಿಸಿರುವ ಕ್ರಮ ಸ್ವಾಗತಿಸಿರುವ ಪಂಚ ಜಿಲ್ಲೆ ಜನಪರ ಹೋರಾಟ ಸಮಿತಿ ಕಾರ್ಯಕರ್ತರು ಇದು ಹೈದ್ರಾಬಾದ್ ಕರ್ನಾಟಕ ಜನತೆಗೆ ಸಂದ ಜಯ ಎಂದು ಬಣ್ಣಿಸಿ ವಿಜಯೋತ್ಸವ ಆಚರಿಸಿದರು. ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಇದ್ದರು.
ಅಧ್ಯಕ್ಷರ ಆಯ್ಕೆ
ಗುಲ್ಬರ್ಗ: ಪ್ರಗತಿಪರ ಹೊರಾಟಗಾರ ಹಾಗೂ ಸಮಾಜ ಚಿಂತಕ ಪ್ರಕಾಶ ಎಸ್. ಹಾಗರಗಿಯವರನ್ನು ಬಹುಜನ ಜಾಗೃತಿ ವೇದಿಕೆಯ ಗುಲ್ಬರ್ಗ ವಿಭಾಗೀಯ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು. ಲಕ್ಷ್ಮಣ ಎಸ್. ಕೋರಿಯವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಗುಲ್ಬರ್ಗ ವಿಭಾಗ ಮಟ್ಟದಲ್ಲಿ ಬಹುಜನ ಜಾಗೃತಿ ವೇದಿಕೆ ಸಂಘಟನೆ ಬಲಿಷ್ಠಗೊಳಿಸಲು ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಮಹಾಂತೇಶ ಮಂದೇವಾಲ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಬೇಳಕೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಳ್ಕರ್ಗೆ ಪ್ರಶಸ್ತಿ
ಗುಲ್ಬರ್ಗ: ಎಕಾನಾಮಿಕ್ ಗ್ರೋಥ್ ಸೊಸೈಟಿ ಆಫ್ ಇಂಡಿಯಾ ನವದೆಹಲಿ ಸಂಸ್ಥೆಯು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಗುಲ್ಬರ್ಗ ಜಿಲ್ಲೆಯ ಸರ್ವೋದಯ ನಗರದ ಸಾಯಿಬಣ್ಣ ಎಂ. ಹೊಳ್ಕರವರಿಗೆ ರಾಷ್ಟ್ರೀಯ ವಿಕಾಸ ಪ್ರಶಸ್ತಿ ನೀಡಿ ಗೌರವಿಸಿತು. ಇವರು ಹೈದ್ರಾಬಾದ್ ಕರ್ನಾಟಕ ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷರಾಗಿದ್ದರು. ದಲಿತ ವರ್ಗದಿಂದ ಪ್ರಥಮ ಬಾರಿಗೆ ಬಸವ ಜಯಂತಿ ಆಚರಣೆ ಮಾಡಿದ ಕೀರ್ತಿ ಇವರದ್ದಾಗಿದೆ. ಕಳೆದ 30 ವರ್ಷಗಳಿಂದ ತಮ್ಮ ವೃತ್ತಿ ಬದುಕಿನೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಧಾರ್ಮಿಕ, ಸಮಾಜಿಕ ,ಸಾಂಸ್ಕೃತಿಕ, ಹಾಗೂ ಸಾಹಿತ್ಯಿಕ ರಂಗದಲ್ಲಿ ಸೇವೆ ಸಲ್ಲಿಸಿ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಗಮನಿಸಿ ರಾಷ್ಟ್ರೀಯ ವಿಕಾಸ ರತ್ನ ಪ್ರಶಸ್ತಿ ನೀಡಿ ಗೌರವಸಲಾಯಿತು ಎಂದು ಹೈ.ಕ. ಡೋಹರ ಕಕ್ಕಯ್ಯ ಸಮಾಜಕಾರ್ಯದರ್ಶಿ ಮೋತಿಲಾಲ ಎಮ್. ಕಟಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಾ. ಮಲ್ಲಿಕಾರ್ಜುನ ಗಾಜರೆ, ಗಣೇಶ ಕಾವಳೆ, ಬಾಬುರಾವ್ ಕಟಗೆ ಮೋತಿಲಾಲ ಕಟಕೆ, ಮಲ್ಲಿಕಾರ್ಜುನ ಕರಟಮಲ, ಅರ್ಜುನ ಸುನಕೊಡೆ, ಪ್ರಾಧ್ಯಾಪಕ ಡಾ. ಲಕ್ಷ್ಮಣ ಕಾವಳೆ, ಸೂರ್ಯಕಾಂತ ಸಾವಳಕರ ಹೊಳ್ಕರವರಿಗೆ ಅಭಿನಂದಿಸಿದ್ದಾರೆ.
ಶಾಲೆ ವಾರ್ಷಿಕೋತ್ಸವ
ಗುಲ್ಬರ್ಗ: ತಾಲೂಕಿನ ಅವರಾದ (ಬಿ) ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಹಿರಿಯ ಬಂಡಾಯ ಸಾಹಿತಿ ಡಾ. ಪ್ರಭು ಖಾನಾಪುರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಿಶನರಾವ್ ಕುಲ್ಕರ್ಣಿ ಶಿವಾನಂದ ಬಿರಾದಾರ, ರಾಜಕುಮಾರ ಬಿರಾದಾರ, ಮಲಕಪ್ಪ ಬಿರಾದಾರ, ಮೀನಾಕ್ಷಿ ಮತ್ತಿರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

