ಮನೋವೈದ್ಯ ಡಾ. ಘನಾತೆ, ಡಾ. ವೆಂಕಟರೆಡ್ಡಿಗೆ ಸನ್ಮಾನ
ಗುಲ್ಬರ್ಗ: ಮನೋವೈದ್ಯಕೀಯ ಚಿಕಿತ್ಸಾ ಕ್ಷೇತ್ರದಲ್ಲಿನ 40 ವರ್ಷಗಳ ಅವಿರತ ಸೇವೆಯನ್ನು ಪರಿಗಣಿಸಿ ಗುಲ್ಬರ್ಗದ ಖ್ಯಾತ ಮನೋವೈದ್ಯ ಡಾ. ಎನ್.ಜಿ. ಘನಾತೆ ಅವರನ್ನು ಇತ್ತೀಚಿಗೆ ನಗರದ ಮಾನಸ ಅಧ್ಯಯನ ಕೇಂದ್ರವು ಜೀವಮಾನ ಸಾಧನಾ ಪ್ರಶಸ್ತಿ ನೀಡಿ, ಪುರಸ್ಕರಿಸಿತು.
ಶಿವಮೊಗ್ಗದ ಮಾನಸ ಎಜುಕೇಶನಸ್ ಫೌಂಡೇಶನ್ ಫಾರಾ ಮೆಂಟಲ್ ಹೆಲ್ತ್ ಸಂಸ್ಥೆಯ ಸಹಯೋಗದಲ್ಲಿ ಹೈಕಶಿ ಸಂಸ್ಥೆಯ ಹೋಮಿಯೋಪಥಿಕ್ ಕಾಲೇಜಿನಲ್ಲಿ ಜರುಗಿದ ಏಳು ದಿನಗಳ ಸಂಪರ್ಕ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಡಾ. ಎನ್.ಜಿ. ಘನಾತೆಯವರನ್ನು ಶಾಲು ಹೊದಿಸಿ, ಪ್ರಶಸ್ತಿ ಪತ್ರ ಮತ್ತು ಫಲ- ಪುಪ್ಪ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯ್ತು.
ಇದೇ ಸಂದರ್ಭದಲ್ಲಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ನೆಮ್ಮದಿ ಆಪ್ತ ಸಲಹಾ ಕೇಂದ್ರದ ನಿರ್ದೇಶಕ ಡಾ. ಆರ್. ವೆಂಕಟರೆಡ್ಡಿ ಅವರನ್ನು ಕೂಡ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇನ್ನು ಮುಂದೆ, ಪ್ರತಿ ವರುಷ, ಜಾಲಿಹಾಳ ಗೌರಮ್ಮ ಸಂಗನ ಬಸಯ್ಯ ಹಿರೇಮಠ ಪ್ರತಿಷ್ಠಾನದ ಮಾನಸ ಅಧ್ಯಯನ ಕೇಂದ್ರವು ಮನೋವೈದ್ಯಕೀಯ ಹಾಗೂ ಮನೋವಿಜ್ಞಾನ ಕ್ಷೇತ್ರದಲ್ಲಿ ಅನುಪಮ ಸೇವೆಗೈಯುತ್ತಿರುವ ಹೈ- ಕ ಪ್ರದೇಶದ ಇಬ್ಬರು ಹಿರಿಯ ಅನುಭವಿಗಳನ್ನು ಆತ್ಮೀಯವಾಗಿ ಗೌರವಿಸುವ ಸಾಂಪ್ರದಾಯವನ್ನು ಹಾಕಿಕೊಳ್ಳವುದು ಎಂದು ಕೇಂದ್ರದ ಸಂಚಾಲಕ ಹಿರೇಮಠ ಎಸ್.ಎಸ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

